27,October,2020,ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆ: ನಿಷೇಧಾಜ್ಞೆ ಜಾರಿಗೊಳಿಸಿ ಡಿಸಿ ಆದೇಶ - EYLAAPH E MEDIA

EYLAAPH E MEDIA

EYLAAPH EMEDIA PVT LTD. IS DELIVERING COMMON NEWS TO THE WORLD THROUGH IT'S REPORTERS , NEWS WHICH CONTAINS REALITY. TRUTH WHICH OTHERS NEVER COVER, PLEASE SHARE OUR CHANNEL AND MAKE IT SUBSCRIBED IN YOUR MOBILE TO GET UPDATED ON EVERY NEWS FROM EYLAAPH NEWS.

Eylaaph Breaking update

Post Top Ad

Post Top Ad

Weather

Translate

Tuesday, October 27, 2020

27,October,2020,ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆ: ನಿಷೇಧಾಜ್ಞೆ ಜಾರಿಗೊಳಿಸಿ ಡಿಸಿ ಆದೇಶ

ಈಶಾನ್ಯ ಕರ್ನಾಟಕ ಶಿಕ್ಷಕರ
ಮತಕ್ಷೇತ್ರದ
ಚುನಾವಣೆ: ನಿಷೇಧಾಜ್ಞೆ ಜಾರಿಗೊಳಿಸಿ ಡಿಸಿ ಆದೇಶ

ಬೀದರ ಅಕ್ಟೋಬರ್ 27 (ಕ.ವಾ.) : ಬೀದರ್ ಜಿಲ್ಲೆಯಲ್ಲಿ ವಿಧಾನ 

ಪರಿಷತ್ ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ 

ಚುನಾವಣೆ ಮತದಾನವು ಅಕ್ಟೋಬರ್ 28ರಂದು 

ನಡೆಯಲಿರುವ ಪ್ರಯುಕ್ತ, ಮುಕ್ತ ಹಾಗೂ ನ್ಯಾಯ 

ಸಮ್ಮತ ಚುನಾವಣೆ ಜರುಗಿಸುವ ಸಲುವಾಗಿ ಅಕ್ಟೋಬರ್ 27ರ 

ಮಧ್ಯಾಹ್ನ 12 ಗಂಟೆಯಿಂದ ಅನ್ವಯವಾಗುವಂತೆ ಅಕ್ಟೋಬರ್ 

28ರ ಮಧ್ಯರಾತ್ರಿ 12 ಗಂಟೆವರೆಗೆ ಬೀದರ್ ಜಿಲ್ಲೆಯ 

ಮತದಾನ ಕೇಂದ್ರಗಳ 200 ಮೀಟರ್ ವ್ಯಾಪ್ತಿವರೆಗೆ ಕೆಲವು 

ಷರತ್ತಿಗಳೊಪಟ್ಟು ಸಿ.ಆರ್.ಪಿ.ಸಿ. ಕಾಯ್ದೆ ಕಲಂ 144 ರನ್ವಯ 

ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ 

ದಂಡಾಧಿಕಾರಿಗಳಾದ ರಾಮಚಂದ್ರನ್. ಆರ್. ಅವರು ಆದೇಶ 

ಹೊರಡಿಸಿದ್ದಾರೆ.

ಮತದಾನ ನಡೆಯುವ ಎಲ್ಲಾ ಮತ ಕ್ಷೇತ್ರಗಳಲ್ಲಿ 

ಕಾನೂನು ಬಾಹೀರವಾಗಿ ಗುಂಪುಗೂಡುವುದನ್ನು ಮತ್ತು 

ಸಾರ್ವಜನಿಕ ಸಭೆಗಳನ್ನು ನಡೆಸುವುದು ನಿಷೇಧಿಸಲಾಗಿದೆ. 

ಮತದಾನ ನಡೆಯುವ ಎಲ್ಲಾ ಮತ ಕ್ಷೇತ್ರಗಳಲ್ಲಿ 5 

ಜನರಿಗಿಂತ ಹೆಚ್ಚಿನ ವ್ಯಕ್ತಿಗಳು ಗುಂಪುಗೂಡಲು ಅಥವಾ 

ಒಟ್ಟಾಗಿ ಓಡಾಡುವುದು ನಿರ್ಭಂದಿಸಲಾಗಿದೆ. ಮತದಾನ 

ನಡೆಯುವ ಮತಕೇಂದ್ರಗಳ ಸುತ್ತ-ಮುತ್ತ ಜನರು

ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು 
ನಿಷೇಧಿಸಲಾಗಿದೆ. ಈ ಸಮಯದಲ್ಲಿ ರಾಜಕೀಯ 
ಪಕ್ಷಗಳು/ಅಭ್ಯರ್ಥಿಗಳು ಬಾಗಿಲಿನಿಂದ ಬಾಗಿಲಿಗೆ ಹೋಗಿ ಮತ 
ಯಾಚಿಸುವ ಸಲುವಾಗಿ ಮನೆಯಿಂದ ಮನೆಗೆ ತೆರಳುವುದಕ್ಕೆ 
ವಿನಾಯ್ತಿ ಇರುತ್ತದೆ. ಈ ಆದೇಶವು ಮದುವೆ, ಶವ 
ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ 
ಕಾರ್ಯಕ್ರಮಗಳಿಗೆ ಅನ್ವಯವಾಗುವದಿಲ್ಲ ಎಂದು 
ಆದೇಶದಲ್ಲಿ ತಿಳಿಸಲಾಗಿದೆ. 
ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳ 
ಭೇಟಿ: ಪರಿಶೀಲನೆ
ಬೀದರ ಅಕ್ಟೋಬರ್ 27 (ಕ.ವಾ.) : ಈಶಾನ್ಯ ಕರ್ನಾಟಕ ಶಿಕ್ಷಕರ 
ಮತಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು 
ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ರಾಮಚಂದ್ರನ್ ಆರ್ 
ಅವರು ಅಕ್ಟೋಬರ್ 27ರಂದು ಬೀದರ ತಹಸೀಲ್ದಾರ 
ಕಚೇರಿಯಲ್ಲಿನ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಹಲವಾರು 
ಮಾಹಿತಿ ಪಡೆದರು.
ಯಾವುದೇ ರೀತಿಯ ದೂರುಗಳು ಬಾರದ ಹಾಗೆ 
ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯುವಂತೆ 
ತಾವೆಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಇದೆ 
ವೇಳೆ ಜಿಲ್ಲಾಧಿಕಾರಿಗಳು ಸ್ಥಳದಲ್ಲಿದ್ದ ಮತಗಟ್ಟೆ 
ಅಧಿಕಾರಿಗಳು ಹಾಗೂ ಚುನಾವಣೆ ಹಿನ್ನೆಲೆಯಲ್ಲಿ ನಾನಾ 
ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳಲ್ಲಿ ಮನವಿ 
ಮಾಡಿದರು. 
ಬೀದರ ಜಿಲ್ಲೆಯಲ್ಲಿ ಒಟ್ಟು 8 ಮತಗಟ್ಟೆಗಳು ಇವೆ. ತಾಲೂಕು 
ಪಂಚಾಯಿತಿ ಬೀದರನಲ್ಲಿ ಒಂದು, ತಹಸೀಲ್ದಾರ ಕಚೇರಿ 
ಬೀದರನಲ್ಲಿ ಮೂರು, ಮನ್ನಳ್ಳಿ, ಕಮಠಾಣ, ಬಗದಲ್ ಹಾಗೂ 
ಜನವಾಡದಲ್ಲಿ ತಲಾ ಒಂದು ಮತಗಟ್ಟೆಗಳು 
ಕಾರ್ಯನಿರ್ವಹಿಸಲಿವೆ. ಏಳು ಮತಗಟ್ಟೆಗಳು ಮತ್ತು ಒಂದು 
ಹೆಚ್ಚುವರಿ ಮತಗಟ್ಟೆ ಸೇರಿ ಒಟ್ಟು ಎಂಟು ಮತಗಟ್ಟೆಗಳು 
ಕಾರ್ಯನಿರ್ವಹಿಸಲಿವೆ ಎಂದು ತಹಸೀಲ್ದಾರ ಗಂಗಾದೇವಿ ಅವರು 
ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. 
ಬೀದರ ತಾಲೂಕಿನಲ್ಲಿ ಒಟ್ಟು 11 ಪಿಆರ್‍ಓಗಳು ಮತ್ತು 11 
ಎಪಿಆರ್‍ಓಗಳು, 22 ಜನ ಪೊಲಿಂಗ್ ಆಫೀಸರ್ಸ್ ಮತ್ತು 11 ಮೈಕ್ರೋ.
ಆಬ್ಜರ್ವರ್‍ಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ತಹಸೀಲ್ದಾರರು 
ತಿಳಿಸಿದರು. 
ಕೋವಿಡ್-19 ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ 
ಮತಗಟ್ಟೆಗಳಿಗೆ ಪೊಲಿಂಗ್ ಪರಸನಲ್ ಹೆಲ್ತ್ ಕಿಟ್ 
ನೀಡಲಾಗುತ್ತಿದೆ. ತಲಾ ಒಂದು ಮತಗಟ್ಟೆಗೆ 500 ಎಂಎಲ್ 
ಸ್ಯಾಣಿಟೈಜರ್, ಎನ್95 ನಾಲ್ಕು ಮಾಸ್ಕಗಳು, 10 ಸಾಮಾನ್ಯ 
ಮಾಸ್ಕಗಳು, 5 ಹ್ಯಾಂಡ್ ಗ್ಲೌಸ್‍ಗಳು ಮತ್ತು ಎರಡು ಪೇಸ್ ಶೀಲ್ಡ್ ..
ನೀಡಲಾಗುತ್ತಿದೆ ಎಂದು ತಹಸೀಲ್ದಾರರು ತಿಳಿಸಿದರು.

No comments:

Post Top Ad