ಏಪ್ರಿಲ್.1 ರಿಂದ ಏಪ್ರಿಲ್.15 ರವರೆಗೆ ಸ್ವಯಂ* *ಗಣತಿಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅವಕಾಶ - EYLAAPH E MEDIA

EYLAAPH E MEDIA

EYLAAPH EMEDIA PVT LTD. IS DELIVERING COMMON NEWS TO THE WORLD THROUGH IT'S REPORTERS , NEWS WHICH CONTAINS REALITY. TRUTH WHICH OTHERS NEVER COVER, PLEASE SHARE OUR CHANNEL AND MAKE IT SUBSCRIBED IN YOUR MOBILE TO GET UPDATED ON EVERY NEWS FROM EYLAAPH NEWS.

Eylaaph Breaking update

Post Top Ad

Post Top Ad

Weather

Translate

Wednesday, April 1, 2026

ಏಪ್ರಿಲ್.1 ರಿಂದ ಏಪ್ರಿಲ್.15 ರವರೆಗೆ ಸ್ವಯಂ* *ಗಣತಿಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅವಕಾಶ

ಏಪ್ರಿಲ್.1 ರಿಂದ ಏಪ್ರಿಲ್.15 ರವರೆಗೆ ಸ್ವಯಂ* *ಗಣತಿಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅವಕಾಶ.....

ಬೀದರ, ಮಾರ್ಚ.31 (EYLAAPH NEWS):- 2027 ರ ಜನಗಣತಿ ಮೋದಲನೇ ಹಂತವಾಗಿ ಮನೆಗಳ ಪಟ್ಟಿ ಮತ್ತು ಮನೆ ಗಣತಿ (ಎಚ್‍ಎಲ್‍ಒ) ಕಾರ್ಯಾವನ್ನು ಎಪ್ರಿಲ್.1 ರಿಂದ 15 ರ ವರೆಗೆ 15 ದಿನಗಳ ಕಾಲ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಪ್ರಧಾನ ಜನಗಣತಿ ಅಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.

ಈ ಬಾರಿ ಜನಗಣತಿ ಎರಡು ಹಂತಗಳಲ್ಲಿ ನಡೆಯಲಿದೆ ಮೋದಲ ಹಂತದಲ್ಲಿ ಮನೆಗಳ ಪಟ್ಟಿ ಮತ್ತು ಮನೆ ಗಣತಿ ಕಾರ್ಯ ನಡೆಯಲಿದೆ ಈ ಹಂತದಲ್ಲಿ ನಾಗರಿಕರಿಗೆ ಸ್ವಯಂ ಗಣತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸ್ವಯಂ ಗಣತಿಗಾಗಿ ಕೇಂದ್ರ ಸರ್ಕಾರದ ವೆಬ್‍ಪೆÇೀಟರ್ಲ್ (https://se.census.gov.in) ಅನ್ನು ತೆರೆಯಲಾಗಿದ್ದು ಯಾವುದೇ ಒಂದು ಮನೆಯ ಸದಸ್ಯರು ಸುಮಾರು 15 ರಿಂದ 20 ನಿಮಿಷಗಳಲ್ಲಿ ತಮ್ಮ ಮನೆಯ ಸಂಪೂರ್ಣಾ ವಿವರಗಳನ್ನು ಭರ್ತಿ ಮಾಡಬಹುದು. ಗಣತಿ ಪೂರ್ಣಾಗೊಂಡ ನಂತರ ನಾಗರಿಕರಿಗೆ ಸಯಂ ಗಣತಿ ಐಡಿ ನೀಡಲಾಗುವುದು. ಈ ಐಡಿಯನ್ನು ಮೊಬೈಲ್ ಅಥವಾ ಇ-ಮೇಲ್ ಮೂಲಕ ಪಡೆಯಬಹುದಾಗಿದೆ. ಗಣತಿದಾರರು ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಈ ಐಡಿ ಹಂಚಿಕೊಳ್ಳಬೇಕು. ಇದರಿಂದ ಗಣತಿದಾರರು ಮಾಹಿತಿ ಪರಿಶೀಲನೆ ನಡೆಸಿ ಅಂತಿಮವಾಗಿ ದತ್ತಾಂಶ ಸಲ್ಲಿಕೆಯನ್ನು ಪೂರ್ಣಗೊಳಿಸಲಿದ್ದಾರೆ. ಕಾರಣ ಜಿಲ್ಲೆಯ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಜನಗಣತಿಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.


No comments:

Post Top Ad