21,October,2020,ಪೊಲೀಸರ ತ್ಯಾಗ, ಬಲಿದಾನ ಸ್ಮರಣೀಯ: ಕಾಡ್ಲೂರ ಸತ್ಯನಾರಾಯಣಾಚಾರ್ಯ - EYLAAPH E MEDIA

EYLAAPH E MEDIA

EYLAAPH EMEDIA PVT LTD. IS DELIVERING COMMON NEWS TO THE WORLD THROUGH IT'S REPORTERS , NEWS WHICH CONTAINS REALITY. TRUTH WHICH OTHERS NEVER COVER, PLEASE SHARE OUR CHANNEL AND MAKE IT SUBSCRIBED IN YOUR MOBILE TO GET UPDATED ON EVERY NEWS FROM EYLAAPH NEWS.

Eylaaph Breaking update

Post Top Ad

Post Top Ad

Weather

Translate

Thursday, October 22, 2020

21,October,2020,ಪೊಲೀಸರ ತ್ಯಾಗ, ಬಲಿದಾನ ಸ್ಮರಣೀಯ: ಕಾಡ್ಲೂರ ಸತ್ಯನಾರಾಯಣಾಚಾರ್ಯ

ಪೊಲೀಸರ ತ್ಯಾಗ, ಬಲಿದಾನ ಸ್ಮರಣೀಯ:
ಕಾಡ್ಲೂರ ಸತ್ಯನಾರಾಯಣಾಚಾರ್ಯ.

ಬೀದರ ಅಕ್ಟೋಬರ್ 21 (ಕರ್ನಾಟಕ ವಾರ್ತೆ): ದೇಶದಲ್ಲಿ ಕಾನೂನು 
ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರ ಸೇವಾ ಮನೋಭಾವ 
ಮತ್ತು ತ್ಯಾಗ ಹಾಗೂ ಬಲಿದಾನ ಸ್ಮರಣೀಯವಾಗಿದೆ ಎಂದು ಪ್ರಧಾನ 
ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು 
ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕಾಡ್ಲೂರ 
ಸತ್ಯನಾರಾಯಣಾಚಾರ್ಯ ಅವರು ಹೇಳಿದರು. 
ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಬೀದರನಿಂದ 
ಅಕ್ಟೋಬರ್ 21ರಂದು ನಡೆದ ಪೊಲೀಸ್ ಹುತಾತ್ಮ ದಿನಾಚರಣೆಯ 
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಗುರುತರವಾದ 
ಜವಾಬ್ದಾರಿಯನ್ನು ಪೆÇಲೀಸರು ಹಗಲಿರುಳೆನ್ನದೆ ನಿರ್ವಹಿಸುತ್ತಾರೆ. 
ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿ ಜೀವವನ್ನು ಸಹ ಒತ್ತೆಯಾಗಿಟ್ಟು 
ಕರ್ತವ್ಯ ನಿರ್ವಹಿಸುತ್ತಾರೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ಅವರು ಮಾತನಾಡಿ,
ದೇಶಕೋಸ್ಕರ ತಮ್ಮ ಪ್ರಾಣಾರ್ಪಣೆ ಮಾಡಿದ ಹುತಾತ್ಮ ಪೊಲೀಸರ 
ಸ್ಮರಣೆಗಾಗಿ 1960ರಿಂದ ಪ್ರತಿ ವರ್ಷ ಅಕ್ಟೋಬರ್ 21ರಂದು ಪೊಲೀಸ್ 
ಹುತಾತ್ಮ ದಿನಾಚರಣೆಯನ್ನು ದೇಶಾದ್ಯಂತ ಪೊಲೀಸ್ ಪಡೆಗಳು 
ಮತ್ತು ಅರೆ ಸೇನಾ ಪಡೆಗಳು ಆಚರಿಸುವ ಮೂಲಕ ಹುತಾತ್ಮ 
ಪೊಲೀಸರಿಗೆ ಗೌರವವನ್ನು ಸಲ್ಲಿಸುತ್ತವೆ. ಅದರಂತೆ ಬೀದರ ಜಿಲ್ಲಾ 
ಪೊಲೀಸ್ ವತಿಯಿಂದ ಹುತಾತ್ಮರಿಗೆ ಗೌರವ ಸಮರ್ಪಿಸುವ ಭಾವಪೂರ್ಣ 
ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. 
ಸಮಾರಂಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ 
ಡಾ.ಗೋಪಾಲ ಎಂ.ಬ್ಯಾಕೋಡ್, ಪೊಲೀಸ್ ಉಪಾಧೀಕ್ಷಕರಾದ 
ಬಸವೇಶ್ವರ ಹೀರಾ, ಬಸವಕಲ್ಯಾಣ ಸಿಪಿಐ ನ್ಯಾಮೇಗೌಡ, ಬೀದರ.....
ಮಾರ್ಕೇಟ್ ಮಹಿಳಾ ಸಿಪಿಐ ಮಲ್ಲಮ್ಮ ಚೌಬೆ ಹಾಗೂ ಬೀದರ ಸಂಚಾರಿ 
ಠಾಣೆಯ ಎಎಸ್‍ಐ ದಯಾನಂದ ಹಾಗೂ ಇತರರು ಇದ್ದರು.

No comments:

Post Top Ad