ಮುಖ್ಯಮಂತ್ರಿಗಳಿಂದ ವೈಮಾನಿಕ
ಸಮೀಕ್ಷೆ: ಬೀದರ, ಯಾದಗಿರಿ ಜಿಲ್ಲೆಯಲ್ಲಿ
ಅತಿವೃಷ್ಟಿಯಿಂದಾದ ಹಾನಿ ಮಾಹಿತಿ ನೀಡಿದ
ಸಚಿವರು....
Post Top Ad
Weather
Translate
Thursday, October 22, 2020
21,October,2020,ಮುಖ್ಯಮಂತ್ರಿಗಳಿಂದ ವೈಮಾನಿಕ ಸಮೀಕ್ಷೆ: ಬೀದರ, ಯಾದಗಿರಿ ಜಿಲ್ಲೆಯಲ್ಲಿ
ಬೀದರ ಅಕ್ಟೋಬರ್ 21 (ಕರ್ನಾಟಕ ವಾರ್ತೆ): ಮಾನ್ಯ
ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಅಕ್ಟೋಬರ್
21ರಂದು ವೈಮಾನಿಕ ಸಮೀಕ್ಷೆ ಕೈಗೊಂಡು, ಉತ್ತರ
ಕರ್ನಾಟಕದ ಬೀದರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರಿ
ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಖುದ್ದು
ವೀಕ್ಷಣೆ ನಡೆಸಿದರು.
ಇದೆ ವೇಳೆಯಲ್ಲಿ ಪಶು ಸಂಗೋಪನೆ, ಹಜ್ ಮತ್ತು ವಕ್ಫ್ ಹಾಗೂ
ಬೀದರ-ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು,
ಬೀದರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ತೀವ್ರ ಮಳೆಯಿಂದಾಗಿ
ಉಂಟಾಗಿರುವ ಹಾನಿಯ ಬಗ್ಗೆ ಮುಖ್ಯಮಂತ್ರಿಯವರಿಗೆ ಮಾಹಿತಿ
ನೀಡಿದರ.
ಮುಖ್ಯಮಂತ್ರಿಗಳು, ಕಲಬುರಗಿ ವಿಮಾನ ನಿಲ್ದಾಣದಲ್ಲಿ, ಅತಿವೃಷ್ಠಿಗೆ
ಸಂಬಂಧಿಸಿದಂತೆ ಬೀದರ, ಕಲಬುರಗಿ, ಯಾದಗಿರಿ ಮತ್ತು ಬಳ್ಳಾರಿ
ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ, ಅತಿವೃಷ್ಠಿಯಿಂದಾದ
ಹಾನಿಯ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು.
ಈ ವೇಳೆ ಬೀದರ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್.ಆರ್ ಅವರು,
ಬೀದರ ಜಿಲ್ಲೆಯಲ್ಲಿ ಸುರಿದ ಮಳೆಯ ಪ್ರಮಾಣ, ಜಲಾಶಯಗಳಲ್ಲಿ
ನೀರಿನ ಸಂಗ್ರಹ ಮತ್ತು ಹರಿವು, ತೊಗರಿ, ಉದ್ದು, ಹೆಸರು, ಕಬ್ಬು
ಬೆಳೆ ಹಾಗೂ ಮೆಣಸಿನಕಾಯಿ, ಶುಂಠಿ, ಟೊಮೆಟೋ ಸೇರಿದಂತೆ ಕೃಷಿ
ಹಾಗೂ ತೋಟಗಾರಿಕಾ ಬೆಳೆಗಳ ನಷ್ಟ, ಜೀವ ಹಾಗೂ ಜಾನುವಾರು ಹಾನಿ.....
ಮತ್ತು ಪರಿಹಾರ, ಸೇತುವೆಗಳಿಗೆ ಆಗಿರುವ ಹಾನಿ ಸೇರಿದಂತೆ ಬೀದರ
ಜಿಲ್ಲೆಯಿಂದ ಅತಿವೃಷ್ಟಿಯಿಂದಾಗಿ ಇದುವರೆಗೆ ಆಗಿರುವ ಹಾನಿ ಪ್ರಮಾಣ
ಮತ್ತು ಸರ್ಕಾರದಿಂದ ನೀಡಿರುವ ಪರಿಹಾರದ ಮಾಹಿತಿಯನ್ನು
ಮುಖ್ಯಮಂತ್ರಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.
ಔರಾದ ತಾಲೂಕಿನಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಸಂಪೂರ್ಣ
ಹಾಳಾಗಿರುವುದನ್ನು, ಅಟ್ಟರಗಾ ಬ್ರಿಡ್ಜನಲ್ಲಿ ಕಾಂಕ್ರಿಟ್ ಕಿತ್ತು
ಹೋಗಿರುವುದನ್ನು ತಿಳಿಸಿದರು. ಇದೆ ರೀತಿ ಇನ್ನೂ ಹಲವಾರು
ಕಡೆಗಳಲ್ಲಿ ಮಳೆಯಿಂದಾಗಿ ಸೇತುವೆಗಳು ಹಾಳಾಗಿವೆ ಎಂದು
ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಸೆಪ್ಟೆಂಬರ್ ಹಿಂದೆಯೇ ಬೀದರ ಜಿಲ್ಲೆಯಲ್ಲಿ ಒಂಬತ್ತು ಜೀವ ಹಾನಿ
ಪ್ರಕರಣಗಳಿಗೆ ಎಸ್‍ಡಿಆರ್‍ಎಫ್ ಮತ್ತು ಮುಖ್ಯಮಂತ್ರಿಗಳ ಪರಿಹಾರ
ನಿಧಿಯಿಂದ ಬ್ಯಾಂಕ್ ಖಾತೆಗಳಿಗೆ ಪರಿಹಾರ ತಲುಪಿಸಲಾಗಿದೆ. ಜಿಲ್ಲಾ ಉಸ್ತುವಾರಿ
ಸಚಿವರು ಕೂಡ ಪರಿಹಾರ ನಿಧಿ ಬಿಡುಗಡೆಯಾಗಿರುವ ಬಗ್ಗೆ ಆದೇಶ
ಪತ್ರಗಳನ್ನು ಜೀವ ಹಾನಿ ಪ್ರಕರಣದ ಕುಟುಂಬಸ್ಥರಿಗೆ ನೀಡಿ ಅವರಿಗೆ
ಸಾಂತ್ವನ ಹೇಳಿ ಬಂದಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದರು.
ಜಾನುವಾರು ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ 24
ಗಂಟೆಯೊಳಗಡೆ ಪೋಸ್ಟಮಾಟಂ ರಿಪೋರ್ಟ್ ಪಡೆದುಕೊಂಡು
ಎನ್‍ಡಿಆರ್‍ಫ್ ಮಾರ್ಗಸೂಚಿಯನ್ವಯ ಒಟ್ಟು 64 ಜಾನುವಾರುಗಳ
ಮಾಲೀಕರಿಗೆ ಅವರ ಬ್ಯಾಂಕ್ ಖಾತೆಗೆ ಪರಿಹಾರ ಧನವನ್ನು
ನೀಡಿರುವುದಾಗಿ ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮಾಹಿತಿ
ನೀಡಿದರು.
ಈ ಸಂದರ್ಭದಲ್ಲಿ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಬೀದರ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ಹಾಗೂ ಇನ್ನೀತರ
ಅಧಿಕಾರಿಗಳು ಇದ್ದರು.
Tags
# Kannada
# News
About Eylaaph Media/Eylaaph News
News
Subscribe to:
Post Comments (Atom)





No comments:
Post a Comment