28,October,2020,ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಶಾಂತಿಯುತ. - EYLAAPH E MEDIA

EYLAAPH E MEDIA

EYLAAPH EMEDIA PVT LTD. IS DELIVERING COMMON NEWS TO THE WORLD THROUGH IT'S REPORTERS , NEWS WHICH CONTAINS REALITY. TRUTH WHICH OTHERS NEVER COVER, PLEASE SHARE OUR CHANNEL AND MAKE IT SUBSCRIBED IN YOUR MOBILE TO GET UPDATED ON EVERY NEWS FROM EYLAAPH NEWS.

Eylaaph Breaking update

Post Top Ad

Post Top Ad

Weather

Translate

Wednesday, October 28, 2020

28,October,2020,ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಶಾಂತಿಯುತ.

ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಶಾಂತಿಯುತ.

ಬೀದರ ಅಕ್ಟೋಬರ್ 28 (ಕ.ವಾ.) : ಬೀದರ್ ಜಿಲ್ಲೆಯಲ್ಲಿ ಅಕ್ಟೋಬರ್ 28ರಂದು ವಿಧಾನ ಪರಿಷತ್ ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಮತದಾನವು ಜಿಲ್ಲೆಯಾದ್ಯಂತ ಶಾಂತಯುತವಾಗಿ ನಡೆಯಿತು.
ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರಿಂದ ಪರಿಶೀಲನೆ: ಬೆಳಗ್ಗೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಬೀದರ ತಾಲೂಕಿನ ಜನವಾಡ ಮತಗಟ್ಟೆಗೆ ಭೇಟಿ ನೀಡಿ ಅಲ್ಲಿನ ಮತದಾನದ ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆದರು. ಅದೇ ರೀತಿ ಅಪರ ಜಿಲ್ಲಾಧಿಕಾರಿಗಳಾದ ರುದ್ರೇಶ ಗಾಳಿ ಅವರು ಬೀದರ ತಾಪಂ ಮತಗಟ್ಟೆಗೆ ಭೇಟಿ ನೀಡಿದರು. ಬೀದರ ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ ಅವರು ಬೀದರ ತಾಲೂಕಿನ ಕಮಠಾಣ ಮತಗಟ್ಟೆಗೆ ತೆರಳಿ ಮತದಾನ ಪ್ರಕ್ರಿಯೆಯ ಬಗ್ಗೆ ಮಾಹಿತಿ ಪಡೆದರು. ಬೀದರ ತಹಸೀಲ್ದಾರ ಹೆಚ್.ಸಿ.ಗಂಗಾದೇವಿ ಅವರು ತಹಸೀಲ್ ಕಚೇರಿಯಲ್ಲಿನ ಮೂರು ಮತಗಟ್ಟೆಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆ ಮಾಡಿದ್ದರು.

ಮತದಾನ ಎಲ್ಲಿ? ಹೇಗೆ? : ಬೀದರ ತಾಲೂಕಿನ ಒಟ್ಟು 8 ಮತಗಟ್ಟೆಗಳಲ್ಲಿ ಬೆಳಗಿನ 8 ಗಂಟೆಯಿAದ ಬೆಳಗಿನ 10 ಗಂಟೆವರೆಗೆ ಒಟ್ಟು ಮತದಾರರ ಪೈಕಿ ಪುರುಷರು 115 ಹಾಗೂ ಮಹಿಳೆಯರು 24 ಸೇರಿ ಒಟ್ಟು 139 ಜನರು ಮತ ಚಲಾಯಿಸಿದ್ದರು. ಗ್ರಾಮೀಣ ಪ್ರದೇಶದ ಜನವಾಡ ಮತಗಟ್ಟೆಯಲ್ಲಿ ಬೆಳಗಿನ 8ರಿಂದ 10.30ರವರೆಗೆ ಒಟ್ಟು 46 ಮತದಾರರ ಪೈಕಿ ಆರು ಜನರು ಮತದಾನ ಮಾಡಿದ್ದರು. ಬೀದರ ತಹಸೀಲ್ ಕಚೇರಿಯಲ್ಲಿನ ಮತಗಟ್ಟೆ ಸಂಖ್ಯೆ 41 ಮತ್ತು 42ರಲ್ಲಿ ಹಾಗೂ ಹೆಚ್ಚುವರಿ ಮತಗಟ್ಟೆ 42(ಎ)ರಲ್ಲಿ ಬೆಳಗ್ಗೆ 10 ಗಂಟೆನAತರ ಬಿರುಸಿನ ಮತದಾನ ನಡೆಯಿತು.
ಬೆಳಗ್ಗೆ 10.30ರವರೆಗೆ ಶೇ.9ರಷ್ಟು ಮತದಾನ: ಮತದಾನ ಪ್ರಮಾಣವು ಬೆಳಗ್ಗೆ 8ರಿಂದ 10.30ರವರೆಗೆ ಶೇ.9ರಷ್ಟು., ಬೆಳಗ್ಗೆ 12 ಗಂಟೆವರೆಗೆ ಶೇ.32ರಷ್ಟು ಹಾಗೂ ಮಧ್ಯಾಹ್ನ 2 ಗಂಟೆವರೆಗೆ ಶೇ.54.16ರಷ್ಟು ದಾಖಲಾಗಿತ್ತು.
ಕೋವಿಡ್-19 ಹಿನ್ನೆಲೆ ಮುನ್ನೆಚ್ಚರಿಕೆ: ಕೋವಿಡ್-19 ಹಿನ್ನೆಲೆಯಲ್ಲಿ ಎಲ್ಲಾ ಮತಗಟ್ಟೆಗಳಲ್ಲಿ ವೈದ್ಯಕೀಯ ಸಿಬ್ಬಂದಿಯಿAದ ತಪಾಸಣೆ, ಸ್ಯಾನಿಟೈಜರ್, ಮಾಸ್ಕ, ಹ್ಯಾಂಡ್ ಗ್ಲೌಸ್, ಪೇಸ್ ಶೀಲ್ಡ್ ಬಳಕೆ ಮತ್ತು ಸಾಮಾಜಿಕ ಅಂತರದ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ.ರೆಡ್ಡಿ ಅವರು ಬೆಳಗ್ಗೆ ತಹಸೀಲ್ ಕಚೇರಿಯಲ್ಲಿನ ಮತಗಟ್ಟೆಗಳು ಮತ್ತು ತಾಪಂ ಕಚೇರಿಯಲ್ಲಿನ ಮತಗಟ್ಟೆಗೆ ತೆರಳಿ ಆರೋಗ್ಯ ಸಿಬ್ಬಂದಿ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದರು.

No comments:

Post Top Ad