ಭೇಟಿ, ಬೆಳೆಹಾನಿ ಪರಿಶೀಲನೆ.
ಬೀದರ ಅಕ್ಟೋಬರ್ 15 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕಳೆದೆರಡು
ದಿನಗಳಿಂದ ವಿಪರೀತ ಮಳೆ ಸುರಿಯುತ್ತಿರುವುದರಿಂದ ಜಿಲ್ಲಾಧಿಕಾರಿಗಳಾದ
ರಾಮಚಂದ್ರನ್ ಆರ್ ಅವರು ಅಕ್ಟೋಬರ್ 15ರಂದು ಬೀದರ ಕಾರಂಜಾ
ಜಲಾಶಯಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ಕಾರಂಜಾ ಜಲಾಶಯದ ಸುತ್ತಲಿನ ಪ್ರದೇಶದಲ್ಲಿ ಜೋರಾಗಿ ಮಳೆ
ಸುರಿಯುತ್ತಿರುವುದರಿಂದ ಜಲಾಶಯದ ಒಳಹರಿವು ನಿರಂತರ
ಹೆಚ್ಚಾತ್ತಿದ್ದು, ಯಾವುದೇ ಕ್ಷಣದಲ್ಲಿ ಭರ್ತಿಯಾಗುವ ಹಂತದಲ್ಲಿದೆ.
ಜಲಾಶಯವು ಗರಿಷ್ಠಮಟ್ಟ ತಲುಪುವ ಹಂತದಲ್ಲಿ ತಕ್ಷಣ ಗೇಟಗಳನ್ನು
ತೆರೆದು ನದಿಗೆ ನೀರು ಬಿಡುವ ಅನಿವಾರ್ಯತೆ ಎದುರಾದಲ್ಲಿ ಜಿಲ್ಲಾಡಳಿತಕ್ಕೆ
ಮಾಹಿತಿ ನೀಡಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ
ಕಾರ್ಯಪಾಲಕ ಅಭಿಯಂತರರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಬಳಿಕ ಡಾಕುಳಗಿ ಗ್ರಾಮಕ್ಕೆ ತೆರಳಿ, ಗ್ರಾಮಸ್ಥರ ಅಹವಾಲು ಆಲಿಸಿದರು.
ಕಾರಂಜಾ ಡ್ಯಾಮನಿಂದಾಗಿ ಮನೆಗಳು ಮುಳುಗಡೆಯಾದ ಬಗ್ಗೆ
ಸಮರ್ಪಕ ಪರಿಹಾರ ಸಿಗಬೇಕು. ಮತ್ತು ಮನೆಗಳು
ಮುಳುಗಡೆಯಾಗಿ ತೊಂದರೆಯಲ್ಲಿರುವ 97 ಕುಟುಂಬದವರನ್ನು
ಬೇರೆಡೆ ಸ್ಥಳಾಂತರಿಸುವ ಪ್ರಕ್ರಿಯೆಯು ತೀವ್ರಗತಿಯಲ್ಲಿ
ನಡೆಯಬೇಕಿದೆ ಎನ್ನುವ ತಮ್ಮ ಬೇಡಿಕೆಯ ಬಗ್ಗೆ ಗ್ರಾಮಸ್ಥರು
ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಇದೆ ವೇಳೆ ಜಿಲ್ಲಾಧಿಕಾರಿಗಳು ಡಾಕುಳಗಿ ಗ್ರಾಮದ ಹತ್ತಿರದ
ಜಮೀನೊಂದಕ್ಕೆ ಭೇಟಿ ನೀಡಿದರು. ಭಾರಿ ಮಳೆಗಾಳಿಯಿಂದಾಗಿ ತಮ್ಮ ಒಂದು
ಎಕರೆಯ ಕಬ್ಬು ಬೆಳೆ ಹಾಳಾಗಿದೆ ಎಂದು ಜಮೀನಿನ ಮಾಲೀಕರು ತಿಳಿಸಿದರು.
ಇದೆ ರೀತಿ ಈ ಭಾಗದ ಇನ್ನೀತರ ಕಡೆಗಳಲ್ಲಿ ಕೂಡ ಮಳೆಯಿಂದಾಗಿ ಕಬ್ಬು
ಬೆಳೆ ಹಾನಿಯಾಗಿದೆ ಎಂದು ಕೆಲವು ರೈತರು ಜಿಲ್ಲಾಧಿಕಾರಿಗಳ ಗಮನಕ್ಕೆ
ತಂದರು. ಈ ಸಂದರ್ಭದಲ್ಲಿ ಹುಮನಾಬಾದ್ ತಹಸೀಲ್ದಾರ ನಾಗಯ್ಯ
ಹಿರೇಮಠ ಹಾಗೂ ಇನ್ನೀತರ ಅಧಿಕಾರಿಗಳು ಇದ್ದರು...





No comments:
Post a Comment