15,october,2020,ಮಾಳೆಗಾಂವ್, ಚಿಲ್ಲರ್ಗಿ, ಚಿಮಕೋಡ್‍ಗೆ ಸಿಇಓ ಭೇಟಿ - EYLAAPH E MEDIA

EYLAAPH E MEDIA

EYLAAPH EMEDIA PVT LTD. IS DELIVERING COMMON NEWS TO THE WORLD THROUGH IT'S REPORTERS , NEWS WHICH CONTAINS REALITY. TRUTH WHICH OTHERS NEVER COVER, PLEASE SHARE OUR CHANNEL AND MAKE IT SUBSCRIBED IN YOUR MOBILE TO GET UPDATED ON EVERY NEWS FROM EYLAAPH NEWS.

Eylaaph Breaking update

Post Top Ad

Post Top Ad

Weather

Translate

Thursday, October 15, 2020

15,october,2020,ಮಾಳೆಗಾಂವ್, ಚಿಲ್ಲರ್ಗಿ, ಚಿಮಕೋಡ್‍ಗೆ ಸಿಇಓ ಭೇಟಿ

ಮಾಳೆಗಾಂವ್, ಚಿಲ್ಲರ್ಗಿ, ಚಿಮಕೋಡ್‍ಗೆ ಸಿಇಓ ಭೇಟಿ:
ಪ್ರಗತಿ ಪರಿಶೀಲನೆ...

ಬೀದರ ಅಕ್ಟೋಬರ್ 15 (ಕರ್ನಾಟಕ ವಾರ್ತೆ) ಜಿಲ್ಲಾ ಪಂಚಾಯತ್ 

ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಗ್ಯಾನೇಂದ್ರಕುಮಾರ ಗಂಗವಾರ 

ಅವರು ಅಕ್ಟೋಬರ್ 15ರಂದು ಬೀದರ್ ತಾಲೂಕಿನಲ್ಲಿ ಪ್ರವಾಸ ಕೈಗೊಂಡು, 

ನಾನಾ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು.

ಮಾಳೆಗಾಂವ, ಚಿಲ್ಲರ್ಗಿ, ಚಿಮಕೋಡ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ 

ಸಾರ್ವಜನಿಕರ ಆಹವಾಲುಗಳನ್ನು ಆಲಿಸಿದರು. ಮಾಳೆಗಾಂವ್ ಗ್ರಾಮದ 

ಓಣಿಗಳಲ್ಲಿ ಸಂಚರಿಸಿ, ಈ ವೇಳೆ ಚರಂಡಿ, ಕುಡಿಯುವ ನೀರಿನ ಟ್ಯಾಂಕ್‍ನ 

ಫಿಲ್ಟರಗಳನ್ನು ಪರಿಶೀಲಿಸಿದರು. ಮಾಳೇಗಾಂವ್ ಗ್ರಾಪಂನಲ್ಲಿ ಸಾರ್ವಜನಿಕರಿಗೆ 

ಅನುಕೂಲವಾಗುವಂತೆ ಸಮರ್ಪಕ ನೀರು ಪೂರೈಕೆಗೆ ಒತ್ತು 

ಕೊಡಬೇಕು. ಕುಡಿಯುವ ನೀರಿನ ಟ್ಯಾಂಕಿನ ನಿರ್ವಹಣೆ ಹಾಗು ನೀರು 

ಸರಬರಾಜಿನಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು 

ಸ್ಥಳದಲ್ಲಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ 

ಅಭಿಯಂತರರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ನಂತರ ಚಿಲ್ಲರ್ಗಿ ಆರೋಗ್ಯ ಕೇಂದ್ರಕ್ಕೆ ತೆರಳಿ ಕೋವಿಡ್-19 ಪರೀಕ್ಷೆ 

ಪ್ರಗತಿ, ಸ್ವಚ್ಛತೆ ಹಾಗು ಒಳರೋಗಿ ಹಾಗೂ ಹೊರರೋಗಿಗಳ ಸಂಖ್ಯೆ 

ಬಗ್ಗೆ ಮಾಹಿತಿ ಪಡೆದರು. 

ಚಿಮಕೋಡ ಗ್ರಾಪಂಗೆ ಭೇಟಿ ನೀಡಿ, ಪಂಚಾಯಿತಿಯಲ್ಲಿನ ನರೇಗಾ 

ಕಾಮಗಾರಿಯ ಕಡತ ಪರಿಶೀಲನೆ ನಡೆಸಿದರು. ರೈತರ ಕ್ರಿಯಾಯೋಜನೆ, 

ಪೌಷ್ಟಿಕ ಕೈತೋಟ, ದನದ ದೊಡ್ದಿ, ಕುರಿದೊಡ್ಡಿ ಹಾಗೂ ಇತರೆ ಸೌಲಭ್ಯಗಳ 

ಕುರಿತು ಸಿಇಓ ಅವರು ಇದೆ ವೇಳೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ 

ಇನ್ನೀತರ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‍ನ ಸಹಾಯಕ ಕಾರ್ಯದರ್ಶಿ ಶ್ರೀ 

ಮಡೋಳಪ್ಪಾ, ಬೀದರನ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಗದಗೆಪ್ಪಾ 

ಕುರಕೋಟೆ, ಜಿಲ್ಲಾ ಪಂಚಾಯತ್‍ನ ಮುಖ್ಯ ಲೆಕ್ಕಾಧಿಕಾರಿ ದೀಪುಕುಮಾರ, 

ಸಹಾಯಕ ನಿರ್ದೇಶಕರಾದ ಶರತಕುಮಾರ, ಗ್ರಾಮೀಣ ಕುಡಿಯುವ 

ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ 

ಶಿವಾಜಿ ಢೋಣೆ ಹಾಗೂ ವಿವಿಧ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ 

ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

No comments:

Post Top Ad