06,October,2020,ಸಚಿವರಾದ ಪ್ರಭು ಚವ್ಹಾಣ್ ಅವರು ಕರೋನಾದಿಂದ ಗುಣಮುಖ - EYLAAPH E MEDIA

EYLAAPH E MEDIA

EYLAAPH EMEDIA PVT LTD. IS DELIVERING COMMON NEWS TO THE WORLD THROUGH IT'S REPORTERS , NEWS WHICH CONTAINS REALITY. TRUTH WHICH OTHERS NEVER COVER, PLEASE SHARE OUR CHANNEL AND MAKE IT SUBSCRIBED IN YOUR MOBILE TO GET UPDATED ON EVERY NEWS FROM EYLAAPH NEWS.

Eylaaph Breaking update

Post Top Ad

Post Top Ad

Weather

Translate

Tuesday, October 6, 2020

06,October,2020,ಸಚಿವರಾದ ಪ್ರಭು ಚವ್ಹಾಣ್ ಅವರು ಕರೋನಾದಿಂದ ಗುಣಮುಖ

ಸಚಿವರಾದ ಪ್ರಭು ಚವ್ಹಾಣ್ ಅವರು ಕರೋನಾದಿಂದ ಗುಣಮುಖ

ಕಳೆದ 25 ದಿನಗಳಿಂದ ಕೊರೊನಾ ರೋಗದಿಂದ ಬಳಲುತ್ತಿದ್ದ 

ನಾನು ಈಗ ಸಂಪೂರ್ಣ ಗುಣಮುಖನಾಗಿದ್ದು, ಇಂದಿನಿಂದ 

(ಬುಧವಾರದಿಂದ) ಸಾರ್ವಜನಿಕರ ಸೇವೆಗೆ ಬರುತ್ತಿದ್ದೇನೆ ಎಂದು 

ಪಶು ಸಂಗೋಪನೆ, ವಕ್ಫ್, ಹಜ್ ಹಾಗೂ ಬೀದರ ಜಿಲ್ಲಾ ಉಸ್ತುವಾರಿ 

ಸಚಿವರಾದ ಪ್ರಭು ಚವ್ಹಾಣ್ ಅವರು ತಿಳಿಸಿದ್ದಾರೆ. 

ವಿಶ್ವದಾದ್ಯಂತ ಕೊರೊನಾ ವೈರಸ್ ಹಾವಳಿಯಿಂದ ಜನಜೀವನ 

ಅಸ್ತವ್ಯಸ್ತವಾಗಿದ್ದು, ಸಾಕಷ್ಟು ಜನಪ್ರತಿನಿಧಿಗಳೂ ಸಹ ಈ 

ಸೋಂಕಿಗೆ ಒಳಗಾಗಿದ್ದಾರೆ. ನಿರಂತರ ಜನಸೇವೆ ಮತ್ತು 

ಜನಸಂಪರ್ಕದಲ್ಲಿದ್ದ ನನಗೂ ಈ ಸೊಂಕು ದೃಢಪಟ್ಟು 

ಮನೆಯಲ್ಲಿಯೆ ಚಿಕಿತ್ಸೆ ಪಡೆದು ಗುಣಮುಖನಾಗಿದ್ದೇನೆ. ವೈದ್ಯರ 

ಸಲಹೆ, ಜನಸಂಪರ್ಕದಿಂದ ದೂರ, ಬೀದರ ಜಿಲ್ಲೆ ಮತ್ತು ಔರಾದ 

ತಾಲೂಕು ಜನರ ಆಶಿರ್ವಾದದಿಂದ ಮತ್ತು ನನಗಿರುವ 

ಆತ್ಮವಿಶ್ವಾಸದಿಂದ ನಾನು ಬೇಗ ಗುಣಮುಖನಾಗಲು ಸಾಧ್ಯವಾಗಿದೆ 

ಎಂದು ತಿಳಿಸಿದ್ದಾರೆ.

ಕೊರೊನಾ ಸೋಂಕು ದೃಢಪಟ್ಟು ನನಗೂ ಹೊಸ 

ಅನುಭವವಾಗಿದೆ. ಹಲವು ದಿನಗಳು ಜನರಿಂದ ದೂರ ಇರಬೇಕಾದ 

ಪ್ರಸಂಗ ಬಂತು. ಈ ಅವಧಿಯಲ್ಲಿ ನನ್ನೊಂದಿಗೆ ಭೇಟಿ 

ಮಾಡಲಾಗದವರು ದಯವಿಟ್ಟು ಅನ್ಯಥಾ ಭಾವಿಸಬಾರದು. ಜನರ 

ಭೇಟಿಯಿಂದ ದೂರ ಇರುವಂತೆ ನನಗೆ ವೈದ್ಯರು ಸಲಹೆ 

ನೀಡಿದ್ದರು. ಸಾರ್ವಜನಿಕರ ಹಿತದೃಷ್ಟಿಯಿಂದ ನಾನು ಜನಸಂಪರ್ಕಕ್ಕೆ 

ಬಂದಿಲ್ಲ. ಆದಾಗ್ಯೂ ನನ್ನ ಕಚೇರಿಗಳು ಎಂದಿನಂತೆ ಕೆಲಸ ನಿರ್ವಹಿಸಿ 

ಸಾಧ್ಯವಾದಷ್ಟು ಜನಸಾಮಾನ್ಯರ ಸೇವೆಯನ್ನು ನಿರ್ವಹಿಸಿವೆ ಎಂದು 

ಹೇಳಿದ್ದಾರೆ.

ಕಡ್ಡಾಯ ಮಾಸ್ಕ್ ಬಳಸಿ:

ಜನರು ಈಗಲೂ ಮಾಸ್ಕ್ ಬಳಸುವುದರಲ್ಲಿ ನಿμÁ್ಕಳಜಿ 

ತೋರುತ್ತಿದ್ದಾರೆ. ಈ ರೋಗಕ್ಕೆ ಇದುವರೆಗೂ ಔಷಧಿ ಬಂದಿಲ್ಲ. 

ಸದ್ಯ ಇರುವ ಔಷಧಿ ಅಂದರೆ ಅದು ಮಾಸ್ಕ್ ಒಂದೆ. ಜನರು ನಿμÁ್ಕಳಜಿ 

ತೋರುತ್ತಿರುವ ಕಾರಣಕ್ಕಾಗಿಯೆ ಮಾಸ್ಕ್ ಹಾಕದವರಿಗೆ ದಂಡ 

ವಿಧಿಸಲಾಗುತ್ತಿದೆ ಎಂದು ಫೇಸ್‍ಮಾಸ್ಕ್‍ನ ಮಹತ್ವದ ಬಗ್ಗೆ ವಿವರಿಸಿದ್ದಾರೆ.....

ಜನರು ನಿರಂತರವಾಗಿ ಮಾಸ್ಕ್ ಬಳಸಬೇಕು. ಮಾಸ್ಕ್ ಇಲ್ಲದೇ 

ಹೊರಗಡೆ ಓಡಾಡಬೇಡಿ. ಎಲ್ಲ ಬಗೆಯ ವೈದ್ಯಕೀಯ 

ಸಲಹೆಗಳನ್ನು ಪರಿಗಣಿಸಿ. ಸಾಮಾಜಿಕ ಅಂತರ ಕಾಪಾಡಿಕೊಂಡು 

ತಮ್ಮ ಕಾರ್ಯ ಚಟುವಟಿಕೆಗಳನ್ನು ಮುಂದುವರೆಸಬೇಕು. 

ಸೋಂಕು ಹರಡದಂತಿರಲು ಎಲ್ಲ ಬಗೆಯ ಸುರಕ್ಷತಾ 

ಕ್ರಮಗಳನ್ನು ಅನುಸರಿಸಲು ಮನವಿ ಮಾಡುತ್ತೇನೆ. ನಾನು 

ಬೋಂತಿ ತಾಂಡಾದಲ್ಲಿದ್ದಾಗ ಆಪ್ತ ಸಹಾಯಕರನ್ನು ಸಂಪರ್ಕಿಸಿ 

ಬೆಳಗ್ಗೆ 8ರಿಂದ 11ರವರೆಗೆ ಮತ್ತು ಸಂಜೆ 4ರಿಂದ 7ರವರೆಗೆ 

ತಮ್ಮನ್ನು ಭೇಟಿ ಮಾಡಬಹುದಾಗಿದೆ. ಭೇಟಿಗೆ ಬರುವಾಗ 

ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಬರುವಂತೆ ಸಚಿವರು 

ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

No comments:

Post Top Ad