06,October,2020,ಆಧಾರ್ ನೋಂದಣಿ, ತಿದ್ದುಪಡಿ, ವಿಳಾಸ, ಮೊಬೈಲ್ ಸಂಖ್ಯೆ ಅಪಡೇಟ್ ಮಾಡಲು ಜಿಲ್ಲೆಯಾದ್ಯಂತ ಅವಕಾಶ - EYLAAPH E MEDIA

EYLAAPH E MEDIA

EYLAAPH EMEDIA PVT LTD. IS DELIVERING COMMON NEWS TO THE WORLD THROUGH IT'S REPORTERS , NEWS WHICH CONTAINS REALITY. TRUTH WHICH OTHERS NEVER COVER, PLEASE SHARE OUR CHANNEL AND MAKE IT SUBSCRIBED IN YOUR MOBILE TO GET UPDATED ON EVERY NEWS FROM EYLAAPH NEWS.

Eylaaph Breaking update

Post Top Ad

Post Top Ad

Weather

Translate

Tuesday, October 6, 2020

06,October,2020,ಆಧಾರ್ ನೋಂದಣಿ, ತಿದ್ದುಪಡಿ, ವಿಳಾಸ, ಮೊಬೈಲ್ ಸಂಖ್ಯೆ ಅಪಡೇಟ್ ಮಾಡಲು ಜಿಲ್ಲೆಯಾದ್ಯಂತ ಅವಕಾಶ

ಆಧಾರ್ ನೋಂದಣಿ, ತಿದ್ದುಪಡಿ, ವಿಳಾಸ, ಮೊಬೈಲ್
ಸಂಖ್ಯೆ ಅಪಡೇಟ್ ಮಾಡಲು ಜಿಲ್ಲೆಯಾದ್ಯಂತ ಅವಕಾಶ

ಬೀದರ ಅಕ್ಟೋಬರ್ 06 (ಕರ್ನಾಟಕ ವಾರ್ತೆ): ಆಧಾರ್ ಪ್ರತಿ ಭಾರತೀಯ ನಿವಾಸಿಗೆ ಒಂದು ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಯೋಜನೆ. ಆಧಾರ್ ಸಂಖ್ಯೆಯು ಸರ್ಕಾರದ ವಿವಿಧ ಯೋಜನೆಗಳಾದ ಪಡಿತರ ಚೀಟಿ, ಪಿಂಚಣಿ, ಬೆಳೆ ವಿಮೆ ಗ್ಯಾಸ್ ಸಬ್ಸಿಡಿ ಹಾಗೂ ವಿದ್ಯಾರ್ಥಿ ವೇತನ ಪಡೆಯಲು ಪ್ರಮುಖ ದಾಖಲೆಯಾಗಿದೆ. ಆದ್ದರಿಂದ ಬೀದರ ಜಿಲ್ಲೆಯ ನಿವಾಸಿಗಳಿಗೆ ಆಧಾರ್ ನೋಂದಣಿ ಮಾಡಿಸಲು ಹಾಗೂ ತಿದ್ದುಪಡಿ, ವಿಳಾಸ, ಮೊಬೈಲ್ ಸಂಖ್ಯೆ ಬಯೋಮೇಟ್ರಿಕ್ ಅಪಡೇಟ್ ಹೀಗೆ ಅನೇಕ ರೀತಿಯ ಬದಲಾವಣೆ ಮಾಡಲು ಜಿಲ್ಲೆಯಲ್ಲಿ ಆಧಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಬೀದರ ಜಿಲ್ಲೆಯ ಬೀದರ, ಬಸವಕಲ್ಯಾಣ, ಭಾಲ್ಕಿ, ಹುಮಾನಾಬಾದ್, ಔರಾದ್ ತಾಲ್ಲೂಕಿನ ಎಲ್ಲಾ ಹೋಬಳಿ ಮಟ್ಟದಲ್ಲಿ ಮತ್ತು ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ (ನಾಡ ಕಛೇರಿಗಳಲ್ಲಿ)., ಅಂಚೇ ಕಚೇರಿ, ಬಿಎಸ್‌ಎನ್‌ಎಲ್ ಕಚೇರಿ, ಬ್ಯಾಂಕುಗಳಲ್ಲಿ ಹಾಗೂ ಇನ್ನೀತರ ಸ್ಥಳಗಳಿಗೆ ಭೇಟಿ ನೀಡಿ, ಜಿಲ್ಲೆಯ ಸಾರ್ವಜನಿಕರು ಹಾಗೂ ಗ್ರಾಮಸ್ಥರು ನೋಂದಣಿ ಕಾರ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ಆಧಾರ್ ನೋಂದಣಿ ಕಾರ್ಯದ ಸ್ಥಳದ ವಿವರ ಇಂತಿದೆ. 

ಬೀದರ ಸಿಟಿ ಮತ್ತು ತಾಲೂಕಿನಲ್ಲಿ: ಬೀದರ ಜಿಲ್ಲೆಯ ಎಲ್ಲಾ ಹೋಬಳಿ ಮಟ್ಟದ ಹಾಗೂ ತಾಲ್ಲೂಕಿನ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ (ನಾಡ ಕಛೇರಿಗಳಲ್ಲಿ)., ಕರ್ನಾಟಕ ಒನ್ ಕೇಂದ್ರ ನೌಬಾದ (ಬುಡಾ ಕಛೇರಿ) ಬೀದರ (ಈ ಕೇಂದ್ರವು ಭಾನುವಾರ ಕೂಡ  ಕಾರ್ಯನಿರ್ವಸುತ್ತಿದೆ., ಸ್ಪಂದನಾ ಕೇಂದ್ರ ಜಿಲ್ಲಾಧಿಕಾರಿಗಳ ಕಛೇರಿ ಬೀದರ. (ಇಲ್ಲಿ ವೃದ್ಧರು, ಅಂಗವಿಕಲರು ಹಾಗೂ ಸಮಸ್ಯ ಉಳ್ಳವರಿಗೆ ಮಾತ್ರ ನೋಂದಣಿ ಮಾಡಲಾಗುತ್ತದೆ.)ಮತ್ತು ಬೀದರನಲ್ಲಿ ನಗರದ ಅಂಚೆ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹತ್ತಿರ ಬೀದರ., ಅಂಚೆ ಕಛೇರಿ, ಗಾಂಧಿ ಗಂಜ ಬೀದರ, ಅಂಚೆ ಕಛೇರಿ, ಗುರುನಾನಕ ಝೀರಾ ಬೀದರ. ಮತ್ತು ಬೀದರ ನಗರದ ಏಕ್ಸಿಸ್ ಬ್ಯಾಂಕ್ ಬಿ.ವಿ.ಬಿ ಕಾಲೇಜ ರೋಡ್ ಬೀದರ, ಐ.ಸಿ.ಐ.ಸಿ.ಐ ಬ್ಯಾಂಕ್, ರಿಲಾಯನ್ಸ್ ಪೆಟ್ರೋಲ್ ಪಂಪ ಹತ್ತಿರ, ಉದಗಿರ ರೋಡ್ ಬೀದರ., ಕೆನರಾ ಬ್ಯಾಂಕ್ ಮುಖ್ಯ ಶಾಖೆ, ನೆಹರು ಕ್ರೀಡಾಂಗಣ ರಸ್ತೆ ಬೀದರ., ಕಾರ್ಪೋರೇಶನ್ ಬ್ಯಾಂಕ್ ಮೋಹನ್ ಮಾರ್ಕೇಟ್ ಬೀದರ, ಇಂಡಿಯಾನ್ ಓವರಸಿಸ್ ಬ್ಯಾಂಕ್ ಬೀದರ., ಎಸ್.ಬಿ.ಐ, ಎ.ಡಿ.ಬಿ ಶಾಖೆ ಹತ್ತಿರ, ನಂದಿ ಪೆಟ್ರೋಲ್ ಪಂಪ ಬೀದರ., ಸಿಂಡಿಕೇಟ್ ಬ್ಯಾಂಕ್ ಏರ್‌ಫರ‍್ಸ ರೋಡ್ ಬೀದರ., ಬಿ.ಎಸ್.ಎನ್.ಎಲ್. ಕಚೇರಿ, ಅಂಬೇಡ್ಕರ್ ಸರ್ಕಲ್ ಬೀದರ.
ಬಸವಕಲ್ಯಾಣ ತಾಲೂಕು: ಬಸವಕಲ್ಯಾಣ ತಲೂಕಿನ ಎಲ್ಲಾ ಹೋಬಳಿ ಮಟ್ಟದ ಹಾಗು ತಾಲೂಕಿನ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ(ನಾಡಕಛೇರಿಗಳಲ್ಲಿ)., ಭಾರತೀಯ ಸ್ಟೇಟ್ ಬ್ಯಾಂಕ್ ಬಸವಕಲ್ಯಾಣ., ಅಂಚೆ ಕಛೇರಿ ಬಸವಕಲ್ಯಾಣ ಇಲ್ಲಿ ಆಧಾರ್ ನೋಂದಣಿ ಮಾಡಬಹುದು.
ಹುಮನಾಬಾದ ತಾಲೂಕು: ಹುಮನಾಬಾದ ತಾಲೂಕಿನ ಎಲ್ಲಾ ಹೋಬಳಿ ಮಟ್ಟದ ಹಾಗೂ ತಾಲೂಕಿನ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ(ನಾಡಕಛೇರಿಗಳಲ್ಲಿ)., ಅಂಚೆ ಕಛೇರಿ (ಟೆಲಿಫೋನ್ ಎಕ್ಸಚೆಂಜ್ ಕಚೇರಿ ಹತ್ತಿರ)., ಕ್ರಿಷ್ಣಾ ಗ್ರಾಮೀಣ ಬ್ಯಾಂಕ್, ಹುಮನಾಬಾದ, ಭಾರತೀಯ ಸ್ಟೇಟ್ ಬ್ಯಾಂಕ್ ಹುಮನಾಬಾದ, ಹಳೆಯ ತಹಸೀಲ್ ಕಾರ್ಯಾಲಯ ಹುಮನಾಬಾದ ಇಲ್ಲಿ ಆಧಾರ್ ನೋಂದಣಿ ಮಾಡಬಹುದು.
ಔರಾದ(ಬಿ) ತಾಲೂಕು: ಔರಾದ್ ತಾಲೂಕಿನ ಎಲ್ಲಾ ಹೋಬಳಿ ಮಟ್ಟದ ಹಾಗೂ ತಾಲೂಕಿನ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ(ನಾಡಕಛೇರಿಗಳಲ್ಲಿ)., ಅಂಚೆ ಕಛೇರಿ ಔರಾದ., ಕ್ರಿಷ್ಣಾ ಗ್ರಾಮೀಣ ಬ್ಯಾಂಕ ಪಿನ್-585326, ಭಾರತೀಯ ಸ್ಟೇಟ್ ಬ್ಯಾಂಕ್ ಔರಾದ, ಕೆನರಾ ಬ್ಯಾಂಕ್ ಔರಾದ್ ಇಲ್ಲಿ ಆಧಾರ್ ನೋಂದಣಿ ಮಾಡಬಹುದು.
ಭಾಲ್ಕಿ ತಾಲೂಕು: ಭಾಲ್ಕಿ ತಾಲೂಕಿನ ಎಲ್ಲಾ ಹೋಬಳಿ ಮಟ್ಟದ ಹಾಗೂ ತಾಲೂಕಿನ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ(ನಾಡಕಛೇರಿಗಳಲ್ಲಿ), ಅಂಚೆ ಕಛೇರಿ ಭಾಲ್ಕಿ., ಭಾರತೀಯ ಸ್ಟೇಟ್ ಬ್ಯಾಂಕ್ ಉದಗೀರ ರಸ್ತೆ ಭಾಲ್ಕಿ ಇಲ್ಲಿ ಆಧಾರ್ ನೋಂದಣಿ ಮಾಡಬಹುದು ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.


No comments:

Post Top Ad