05,October,2020,ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ 4862 ಮತದಾರರು: ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ - EYLAAPH E MEDIA

EYLAAPH E MEDIA

EYLAAPH EMEDIA PVT LTD. IS DELIVERING COMMON NEWS TO THE WORLD THROUGH IT'S REPORTERS , NEWS WHICH CONTAINS REALITY. TRUTH WHICH OTHERS NEVER COVER, PLEASE SHARE OUR CHANNEL AND MAKE IT SUBSCRIBED IN YOUR MOBILE TO GET UPDATED ON EVERY NEWS FROM EYLAAPH NEWS.

Eylaaph Breaking update

Post Top Ad

Post Top Ad

Weather

Translate

Monday, October 5, 2020

05,October,2020,ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ 4862 ಮತದಾರರು: ಜಿಲ್ಲಾಧಿಕಾರಿ ರಾಮಚಂದ್ರನ್ ಆರ್

ಪತ್ರಿಕಾ ಪ್ರಕಟಣೆ
ಈಶಾನ್ಯ ಕರ್ನಾಟಕ ಶಿಕ್ಷಕರ
ಮತಕ್ಷೇತ್ರದ
ಚುನಾವಣೆಗೆ 4862 ಮತದಾರರು: ಜಿಲ್ಲಾಧಿಕಾರಿ
ರಾಮಚಂದ್ರನ್ ಆರ್

ಬೀದರ ಅಕ್ಟೋಬರ್ 05 (ಕರ್ನಾಟಕ ವಾರ್ತೆ):s ಕರ್ನಾಟಕ ವಿಧಾನ 

ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ 

2020ರ ಅಂಗವಾಗಿ ಬೀದರ ಜಿಲ್ಲೆಯಲ್ಲಿ ಒಟ್ಟು 34 

ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸದರಿ ಚುನಾವಣೆಗೆ 

ಪುರುಷ ಮತದಾರರು 3390 ಹಾಗೂ ಮಹಿಳಾ ಮತದಾರರು 

1472 ಸೇರಿ ಒಟ್ಟು 4862 ಮತದಾರರು ಇರುತ್ತಾರೆ ಎಂದು 

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ 

ರಾಮಚಂದ್ರನ್ ಆರ್ ಅವರು ಮಾಹಿತಿ ನೀಡಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಕ್ಟೋಬರ್ 5ರಂದು 

ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಕರ್ನಾಟಕ ಶಿಕ್ಷಕರ 

ಮತಕ್ಷೇತ್ರದ ಚುನಾವಣೆ–2020ರ ಕುರಿತು ಪತ್ರಿಕಾಗೋಷ್ಠಿ 

ನಡೆಸಿ ಮಾತನಾಡಿದ ಅವರು, ಸದರಿ ಕರ್ನಾಟಕ ವಿಧಾನ ಪರಿಷತ್ತಿಗೆ 

ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ-2020ರ ಮಾದರಿ 

ನೀತಿ ಸಂಹಿತೆಯು 29-09-2020ರಿಂದಲೇ ಜಾರಿ ಮಾಡಲಾಗಿದೆ ಎಂದು 

ತಿಳಿಸಿದರು. 

ಅಕ್ಟೋಬರ್ 01ರಂದು ಅಧಿಸೂಚನೆ ಹೊರಡಿಸಲಾಗಿದೆ. ಅಕ್ಟೋಬರ್ 

8ರಂದು ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕವಾಗಿದೆ. 09-10-

2020 (ಶುಕ್ರವಾರ)ರಂದು ನಾಮ ಪತ್ರಗಳ ಪರಿಶೀಲನೆ 

ನಡೆಯಲಿದೆ. 12-10-2020ರಂದು ನಾಮ ಪತ್ರಗಳನ್ನು ಹಿಂದಕ್ಕೆ 

ಪಡೆಯುವ ಕೊನೆಯ ದಿನಾಂಕಾಗಿದೆ. 28-10-2020 (ಬುಧವಾರ) 

ರಂದು ಮತದಾನ ನಡೆಯಲಿದೆ. 02-11-2020 (ಸೋಮವಾರ) 

ಬೆಳ್ಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. 05-11-2020..

(ಗುರುವಾರ) ರಂದು ಚುನಾವಣೆ ಪ್ರಕ್ರಿಯೆ 

ಮುಕ್ತಾಯವಾಗಲಿದೆ.

ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ 

ಮತಕ್ಷೇತ್ರದ ಚುನಾವಣೆ-2020ರ ಅಂಗವಾಗಿ ಈಗಾಗಲೆ ವಿವಿಧ 

ಚುನಾವಣೆ ಕೆಲಸಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ 

ಮಾಡಲಾಗಿದೆ. ಚುನಾವಣೆ ಪ್ರಕ್ರಿಯೆಯಲ್ಲಿ ಕೋವಿಡ್-19 

ಸೋಂಕು ವ್ಯಾಪಕವಾಗಿ ಹರಡದಂತೆ ತಡೆಗಟ್ಟಲು ವಿಶೇಷವಾಗಿ 

ಕೋವಿಡ್-19 ರ ನೋಡಲ್ ಅಧಿಕಾರಿಯನ್ನಾಗಿ ಸಹಾಯಕ 

ಆಯುಕ್ತರು ಬೀದರ ಉಪ ವಿಭಾಗ ಬೀದರ ಮತ್ತು ಜಿಲ್ಲಾ 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳನ್ನು 

ನೇಮಕ ಮಾಡಲಾಗಿದೆ. ಸದರಿ ಚುನಾವಣೆಯನ್ನು ಸುಗಮವಾಗಿ 

ನಡೆಸುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ 

ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಂಡಗಳನ್ನು 

ರಚಿಸಲಾಗಿರುತ್ತದೆ.

ಸದರಿ ಚುನಾವಣೆ ಪ್ರಯುಕ್ತ ಯಾವುದೇ ನೀತಿ ಸಂಹಿತೆ 

ಉಲ್ಲಂಘನೆ ಕುರಿತು ದೂರುಗಳಿದ್ದಲ್ಲಿ ಜಿಲ್ಲಾಧಿಕಾರಿಯವರ 

ಕಛೇರಿ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ 08482-

226290ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಇದೆ ವೇಳೆ 

ಜಿಲ್ಲಾಧಿಕಾರಿಗಳು ತಿಳಿಸಿದರು. 

ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಕೋವಿಡ–19 

(ಕೊರೋನಾ ವೈರಸ್) ಸಾಂಕ್ರಮಿಕವಾಗಿ ಹರಡದಂತೆ 

ಮುನ್ನೆಚ್ಚರಿಕೆಯಾಗಿ ಚಾಚು ತಪ್ಪದೆ ಪಾಲಿಸುತ್ತಾ ಹಾಗೂ ಸದರಿ 

ಚುನಾವಣೆಯ ಮತದಾರರನ್ನು ಮತಗಟ್ಟೆ 

ಸಿಬ್ಬಂದಿಗಳನ್ನಾಗಿ ನೇಮಿಸಬಾರದೆಂಬ ಅಂಶವನ್ನು ಗಣನೆಗೆ 

ತೆಗೆದುಕೊಂಡು ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು 

ನೇಮಕಾತಿ ಮಾಡುವ ಕಾರ್ಯವು ಪ್ರಗತಿಯಲ್ಲಿರುತ್ತದೆ 

ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ 

ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ, 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ಅಪರ ಜಿಲ್ಲಾಧಿಕಾರಿ 

ರುದ್ರೇಶ ಗಾಳಿ ಹಾಗೂ ಇತರರು ಇದ್ದರು. 

ವಿವಿಧ ರಾಜಕೀಯ ಪಕ್ಷಗಳ 

ಮುಖಂಡರು, ಪ್ರತಿನಿಧಿಗಳ ಸಭೆ

ಬೀದರ ಅಕ್ಟೋಬರ್ 05 (ಕರ್ನಾಟಕ ವಾರ್ತೆ):s ಕರ್ನಾಟಕ ವಿಧಾನ 

ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ 2020 

ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರ 

ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಂವಾದ 

ಸಭಾಂಗಣದಲ್ಲಿ ಅಕ್ಟೋಬರ್ 5ರಂದು ವಿವಿಧ ರಾಜಕೀಯ..

ಪಕ್ಷಗಳ ಮುಖಂಡರು ಮತ್ತು ಪ್ರತಿನಿಧಿಗಳ ಸಭೆ 

ನಡೆಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಇನ್ನು ಹೆಚ್ಚಿನ 

ಸಂಖ್ಯೆಯಲ್ಲಿ ಮತದಾರರ ಪಟ್ಟಿಯಲ್ಲಿ ಸೇರುವ ಅರ್ಹ 

ಮತದಾರರಿಗೆ ಚುನಾವಣೆ ಸಂದರ್ಭದಲ್ಲಿ ಪೂರಕ ಪಟ್ಟಿಯಲ್ಲಿ 

ಹೆಸರು ಸೇರಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು 

ಎಂದು ತಿಳಿಸಿದರು. 

ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿಗಳು ಹಾಗೂ 

ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರ ನಿರ್ದೇಶನದಂತೆ 

ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ 

ಮತಕ್ಷೇತ್ರದ ಚುನಾವಣೆ-2020ರ ಅಂಗವಾಗಿ ಮತದಾರರ 

ಪಟ್ಟಿಯನ್ನು ಈಗಾಗಲೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 16-01-

2020ರಂದು ಅಂತಿಮ ಮತದಾರರ ಪಟ್ಟಿಯನ್ನು 

ಪ್ರಚುರಪಡಿಸಿದ ತರುವಾಯ ದರ್ಜೆಯಲ್ಲಿ ಪ್ರೌಢಶಾಲೆಗಿಂತ 

ಕಡಿಮೆ ಇಲ್ಲದ ನಿರ್ದಿಷ್ಟಪಡಿಸಿದಂತಹ ಜಿಲ್ಲೆಯಲ್ಲಿಯನ 

ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ (ಸರಕಾರಿ, ಅನುದಾನಿತ, 

ಅನುದಾನ ರಹಿತ) ಒಟ್ಟು ಕನಿಷ್ಠ 3 ವರ್ಷ ಬೋಧನಾ ವೃತ್ತಿಯಲ್ಲಿ 

ನಿರತವಾಗಿರುವ ಬಗ್ಗೆ ಶೈಕ್ಷಣಿಕ ಸಂಸ್ಥೆಗಳಿಂದ ಅನುಬಂಧ-

2ರಲ್ಲಿ ಪ್ರಮಾಣ ಪತ್ರದೊಂದಿಗೆ ನಿರಂತರ ಪ್ರಕ್ರಿಯೆ 

ಅವಧಿಯಲ್ಲಿ ಅರ್ಹ ಮತದಾರರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ 

ತಮ್ಮ ಹೆಸರನ್ನು ಸದರಿ ಮತದಾರರ ಪಟ್ಟಿಯಲ್ಲಿ ಸೇರಿಸಲು 

ಅವಕಾಶವನ್ನು ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ 08-

10-2020ರವರೆಗೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ 

ನೀಡಿದರು. 

ಬೀದರ ಜಿಲ್ಲೆಯಲ್ಲಿ ಒಟ್ಟು 34 ಮತಗಟ್ಟೆಗಳಿದ್ದು, 

ತಾಲೂಕುವಾರು ಔರಾದ (ಬಿ)ನಲ್ಲಿ 541, ಭಾಲ್ಕಿ ತಾಲೂಕಿನಲ್ಲಿ 743, ಬೀದರ 

ತಾಲೂಕಿನಲ್ಲಿ 1840, ಬಸವಕಲ್ಯಾಣ ತಾಲೂಕಿನಲ್ಲಿ 918 ಮತ್ತು 

ಹುಮಾನಾಬಾದ್ ತಾಲೂಕಿನಲ್ಲಿ 820 ಮತದಾರರು ಸೇರಿ ಒಟ್ಟು 4862

ಮತದಾರರು ಬೀದರ ಜಿಲ್ಲೆಯಲ್ಲಿದ್ದಾರೆ ಎಂದು 

ಜಿಲ್ಲಾಧಿಕಾರಿಗಳು ರಾಜಕೀಯ ಪಕ್ಷಗಳ ಮುಖಂಡರುಗಳು 

ಮತ್ತು ಪ್ರತಿನಿಧಿಗಳಿಗೆ ತಿಳಿಸಿದರು. 

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ 

ಗ್ಯಾನೇಂದ್ರಕುಮಾರ ಗಂಗವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ 

ನಾಗೇಶ ಡಿ.ಎಲ್., ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಹಾಗೂ 

ಇತರರು ಇದ್ದರು. 

* ಕರ್ನಾಟಕ ವಾರ್ತೆ


No comments:

Post Top Ad