ಗಾಂಧೀ ತತ್ತ್ವಗಳನ್ನು ಬದುಕಿನಲ್ಲಿ
ಅಳವಡಿಸಿಕೊಳ್ಳೋಣ:ಜಿಲ್ಲಾಧಿಕಾರಿ ರಾಮಚಂದ್ರನ್ ಆರ್
ಬೀದರ ಅಕ್ಟೋಬರ್ 2 (ಕರ್ನಾಟಕ ವಾರ್ತೆ): ಹೃದಯವೈಶಾಲ್ಯತೆ ಇರಬೇಕು. ಸರಳ ಜೀವನ ನಡೆಸಬೇಕು ಎನ್ನುವ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ಮಹತ್ವದ ಅನೇಕ ತತ್ವಗಳನ್ನು ನಾವುಗಳು ನಮ್ಮ ಬದುಕಿನಲ್ಲಿ ಮತ್ತು ನಮ್ಮ ಕೆಲಸದಲ್ಲಿ ಅಳವಡಿಸಿಕೊಳ್ಳೋಣ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದರು.ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅ.2ರಂದು ನಡೆದ ಮಹಾತ್ಮ ಗಾಂಧೀಜಿಯವರ ಜಯಂತಿ ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಬಳಿಕ ಅವರು ಮಾತನಾಡಿದರು.ಅಪ್ರಿಯವಾದ ಕೆಲಸವನ್ನು ಮಾಡಬಾರದು. ದೋಷಗಳಿದ್ದರೆ ತಿದ್ದಿಕೊಂಡು ಕೆಲಸ ಮಾಡಬೇಕು ಎನ್ನುವ ಹಲವಾರು ಮಹತ್ವದ ವಿಷಯಗಳನ್ನು ತಿಳಿಸುವ ಗಾಂಧೀಜಿಯವರು ಉದ್ಯೋಗ ಪ್ರಿಯರಾಗಿದ್ದರು. ಚರಖಾದಿಂದ ನೂಲು ತೆಗೆಯುತ್ತಿದ್ದರು. ಸ್ವಾವಲಂಬಿಗಳಾಗಿದ್ದರು. ಗಾಂಧೀಜಿಯವರು ದೀನ-ದಲಿತರನ್ನು ಉದ್ದರಿಸಿದರು. ಭಾರತದ ಉದ್ದಾರಕ್ಕೆ ಶ್ರಮಿಸಿದರು. ಸಮಾಜ ಸಮತಾವಾದವನ್ನು ತಿಳಿಸಿಕೊಟ್ಟರು. ಹೀಗಾಗಿ ನಾವುಗಳು ಅವರು ಮಾಡಿದ ಕಾರ್ಯದ ಸಿಂಹಾವಲೋಕನ ಮಾಡಿಕೊಂಡು ಅವರ ಹೇಳಿದ ತತ್ವಗಳಂತೆ ನಾವುಗಳು ನಡೆಯಬೇಕು ಎಂದು ತಿಳಿಸಿದರು.

ಇದೆ ವೇಳೆ ಗಾಂಧೀವಾದಿ, ಹಿರಿಯ ಚಿಂತಕರು, ಸಾಹಿತಿಗಳಾದ ಎಂ.ಜಿ.ಗAಗನಪಳ್ಳಿ ಅವರು ಮಾತನಾಡಿ, ಗಾಂಧೀಜಿಯವರದು ಬಹುದೊಡ್ಡ ವ್ಯಕ್ತಿತ್ವ. ಅವರು ಮಾಡದ ಸಾಧನೆಗಳೇ ಇಲ್ಲ ಎಂದು ತಿಳಿಸಿದರು. ಗಾಂಧೀಜಿಯವರ ಹೋರಾಟದ ಬದುಕನ್ನು ಅರಿತು ನಾವು ಕೂಡ ಅವರಂತೆ ಬಾಳಬೇಕು ಎಂದರು.
ಭಜನೆ ಆಲಿಸಿದ ಜಿಲ್ಲಾಧಿಕಾರಿಗಳು: ಕೋವಿಡ್-19 ಹಿನ್ನೆಲೆಯಲ್ಲಿ ಗಾಂಧೀಜಯAತಿಯನ್ನು ಸರಳವಾಗಿ ಆಚರಿಸಲಾಯಿತು. ಈ ವೇಳೆ ಬೀದರನ ಪ್ರಸಿದ್ಧ ಕಲಾವಿದ ಶಿವಕುಮಾರ ಪಾಂಚಾಳ ಅವರು ಹಾಡಿದ ಗಾಂಧೀಜಿಯವರಿಗೆ ಇಷ್ಟವಾಗಿದ್ದ ಭಜನೆಗಳನ್ನು ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ ನಗರಾಭೀವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶರಣಬಸಪ್ಪ ಕೋಟಪ್ಪಗೋಳ, ಆಹಾರ ಇಲಾಖೆಯ ಉಪ ನಿರ್ದೇಶಕರು ಹಾಗೂ ಇತರರು ಇದೆ ವೇಳೆ ಆಲಿಸಿದರು. ಜಿಲ್ಲಾಧಿಕಾರಿಗಳ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಮತ್ತು ಇನ್ನೀತರ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದೆ ವೇಳೆ ಹಾಜರಿದ್ದರು.
No comments:
Post a Comment