05,October,2020,ನಕಲಿ ಪತ್ರಕರ್ತರ ವಿರೂದ್ಧ ಕ್ರಮ ಜರುಗಿಸಿ - EYLAAPH E MEDIA

EYLAAPH E MEDIA

EYLAAPH EMEDIA PVT LTD. IS DELIVERING COMMON NEWS TO THE WORLD THROUGH IT'S REPORTERS , NEWS WHICH CONTAINS REALITY. TRUTH WHICH OTHERS NEVER COVER, PLEASE SHARE OUR CHANNEL AND MAKE IT SUBSCRIBED IN YOUR MOBILE TO GET UPDATED ON EVERY NEWS FROM EYLAAPH NEWS.

Eylaaph Breaking update

Post Top Ad

Post Top Ad

Weather

Translate

Monday, October 5, 2020

05,October,2020,ನಕಲಿ ಪತ್ರಕರ್ತರ ವಿರೂದ್ಧ ಕ್ರಮ ಜರುಗಿಸಿ

ನಕಲಿ ಪತ್ರಕರ್ತರ ವಿರೂದ್ಧ
ಕ್ರಮ ಜರುಗಿಸಿ

ಬೀದರ: ಅಕ್ಟೋಬರ್ 05 ಜಿಲ್ಲೆಯಲ್ಲಿ ಹಲವು ವ್ಯಕ್ತಿಗಳು ತಮ್ಮ ವಾಹನಗಳ ಮೇಲೆ

ಪ್ರೆಸ್ ಪದ ದುರ್ಬಬಳಿಕೆ ಮಾಡಿಕೊಂಡು ಪತ್ರಿಕಾ ಧರ್ಮಕ್ಕೆ ಕಪ್ಪು

ಚುಕ್ಕೆಯಾಗಿರುವ ನಕಲಿ ಪತ್ರಕರ್ತರ ವಿರೂದ್ಧ ಕ್ರಮ

ಜರುಗಿಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ

ಆಗ್ರಹಿಸಿದೆ.

ಈ ಕುರಿತು ಸೋಮವಾರ ಜಿಲ್ಲಾಧಿಕಾರಿ ರಾಮಚಂದ್ರನ್. ಆರ್  ಹಾಗೂ ಜಿಲ್ಲಾ

ಪೋಲಿಸ್ ವರಿಷ್ಟಾಧಿಕಾರಿ ನಾಗೇಶ.ಡಿ.ಎಲ್ ಅವರಿಗೆ ಮನವಿ ಸಲ್ಲಿಸಿದ ಅವರು,

ಖಾಸಗಿ ಟಿ.ವಿ ಚಾನಲ್‍ಗಳ ಹೆಸರಲ್ಲಿ ಅನೇಕರು ಅಕ್ರಮ ಯುಟೂಬ್

ಚಾನಲ್‍ಗಳ ಮೂಲಕ ಜನರ ದಾರಿ ತಪ್ಪಿಸಿ ಸಾಮಾಜಿಕ ಸ್ವಾಸ್ಥ್ಯ ಹಾಳು

ಮಾಡುತ್ತಿರುವರು. ಮಾಧ್ಯಮಕ್ಕೆ ಸಂಬಂಧಿಸಿದ ಅವರಲ್ಲಿ ಯಾವುದೇ

ಸಾಕ್ಷಗಳಿಲ್ಲದೇ ತಮ್ಮ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ

ಮೇಲೆ ಪ್ರೆಸ್ ಎಂದು ಬರೆದುಕೊಳ್ಳುತ್ತಿರುವವರ ವಿರೂದ್ಧ

ಕೂಡಲೇ ಕ್ರಮ ಜರುಗಿಸುವಂತೆ ಸಂಘದ ಪದಾಧಿಕಾರಿಗಳು

ಒತ್ತಾಯಿಸಿದ್ದಾರೆ.

ಈಗಾಗಲೇ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ

ಬೆಂಗಳುರು ಕಚೇರಿಯಿಂದ ಮಾನ್ಯತೆ ಕಾರ್ಡ್ ನೀಡಲಾಗಿದೆ. ಮಾನ್ಯತೆ

ಕಾರ್ಡ್ ಹೊಂದಿಲ್ಲದ ಸಂಘದ ಸದಸ್ಯರಾದವರಿಗೆ ಕರ್ನಾಟಕ

ಕಾರ್ಯನಿರತ ಪತ್ರಕರ್ತರ ಸಂಘದಿಂದ ಏಪ್ರಿಲ್ 2020-21

ಮಾರ್ಚವರೆಗಿನ ಗುರುತಿನ ಚೀಟಿ ನೀಡಲಾಗಿದೆ.

ಆದ್ದರಿಂದ ತಾವುಗಳು ಜಿಲ್ಲೆಯ ರಸ್ತೆಗಳಲ್ಲಿ

ಸಂಚರಿಸುತ್ತಿರುವುದು ಕಂಡು ಬಂದಿರುವುದು. ನಕಲಿ

ಪತ್ರಕರ್ತರುಗಳ, ನಕಲಿ ಟಿ.ವಿ. ಮಾಧ್ಯಮದವರ ವಾಹನಗಳ

ಮೇಲೆ ಅಂಟಿಸಿರುವ ಅಥವಾ ಬರೆಯಿಸಿರುವ ಪ್ರೆಸ್ ಎಂಬ ಪದ ಪರಿಶೀಲಿಸಿ ಆಯಾ

ವಾಹನಗಳ ಅಂದರೆ ಪ್ರೆಸ್ ಪದ ದುರ್ಬಳಿಕೆದಾರರ ಗುರುತಿನ

ಚೀಟಿಗಳನ್ನು ಕಡ್ಡಾಯವಾಗಿ ಪರಿಶೀಲಿಸಿ ಅಂತಹವರ ವಿರುದ್ದ

ಕಾನೂನು ಕ್ರಮ ಕೈಗೊಂಡು, ಶಿಕ್ಷೆಗೆ ಗುರಿಪಡಿಸಿ ಪತ್ರಿಕಾ ರಂಗ

ಮತ್ತು ನಿಜವಾದ ಪತ್ರಕರ್ತರ ಮೌಲ್ಯ ಮತ್ತು ಪತ್ರಿಕಾ ಧರ್ಮ

ರಕ್ಷಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ

ಜಿಲ್ಲಾ ಅಧ್ಯಕ್ಷ ಅಶೋಕಕುಮಾರ ಕರಂಜಿ, ರಾಜ್ಯ ಪ್ರತಿನಿಧಿ ಬಸವರಾಜ

ಕಾಮಶೆಟ್ಥಿ, ಪ್ರಧಾನ ಕಾರ್ಯದರ್ಶಿ ನಾಗಶೆಟ್ಟಿ ಧರಂಪೂರ,

ಉಪಾಧ್ಯಕ್ಷ ಶ್ರೀನಿವಾಸ್ ಚೌದ್ರಿ, ಕಾರ್ಯದರ್ಶಿಗಳಾದ ಶಿವಕುಮಾರ ಸ್ವಾಮಿ,

ಸುನಿಲ ಕುಲಕರ್ಣಿ, ಕೋಶಾಧ್ಯಕ್ಷ ಪ್ರಥ್ವಿರಾಜ.ಎಸ್, ಸದಸ್ಯ

ಶಿವಕುಮಾರ ಸದಲಾಪುರೆ, ಅಲಿಮೋದ್ದೀನ್ ಸೇರಿದಂತೆ ಇತರರು.

No comments:

Post Top Ad