26 September 2020,Civil Services Exam Awareness Programme - EYLAAPH E MEDIA

EYLAAPH E MEDIA

EYLAAPH EMEDIA PVT LTD. IS DELIVERING COMMON NEWS TO THE WORLD THROUGH IT'S REPORTERS , NEWS WHICH CONTAINS REALITY. TRUTH WHICH OTHERS NEVER COVER, PLEASE SHARE OUR CHANNEL AND MAKE IT SUBSCRIBED IN YOUR MOBILE TO GET UPDATED ON EVERY NEWS FROM EYLAAPH NEWS.

Eylaaph Breaking update

Post Top Ad

Post Top Ad

Weather

Translate

Sunday, September 27, 2020

26 September 2020,Civil Services Exam Awareness Programme

ಸತತ ಪರಿಶ್ರಮ, ಶಿಸ್ತುಬದ್ದ ಅಧ್ಯಯನ, ತಾಳ್ಮೆಯಿದ್ದರೆ ಐಎಎಸ್,
ಕೆಎಎಸ್, ಐಪಿಎಸ್, ಐಆರ್‌ಎಸ್, ಐಎಫ್‌ಎಸ್ ಪರೀಕ್ಷೆ ಪಾಸಾಗಬಹುದು


ಬೀದರ ಸೆಪ್ಟೆಂಬರ್ 26 (ಕರ್ನಾಟಕ ವಾರ್ತೆ): ಐಎಎಸ್, ಕೆಎಎಸ್, ಐಪಿಎಸ್, ಐಆರ್‌ಎಸ್, ಐಎಫ್‌ಎಸ್, ಕೆಎಎಸ್, ಸೇರಿದಂತೆ ಹಲವಾರು ನಾಗರಿಕೆ ಸೇವೆಗಳ ಪರೀಕ್ಷೆಯ ಆಕಾಂಕ್ಷಿಗಳಿಗೆ ಅರಿವು ಮೂಡಿಸುವ ವಿನೂತನ ಕಾರ್ಯಕ್ರಮವು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಶ್ರೀ ಚೆನ್ನಬಸವ ಪಟ್ಟದ್ದೇವರು ರಂಗಮAದಿರದಲ್ಲಿ ಸೆ.26ರಂದು ಯಶಸ್ವಿಯಾಗಿ ನೆರವೇರಿತು.

ಆಕಾಂಕ್ಷಿ ವಿದ್ಯಾರ್ಥಿಗಳಿಂದ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸತತ ಪರಿಶ್ರಮ, ಶಿಸ್ತಿನ ಅಧ್ಯಯನ ಮತ್ತು ತಾಳ್ಮೆಯಿಂದ ಸತತ ಪ್ರಯತ್ನಿಸುವುದೇ ನಾಗರಿಕ ಸೇವೆಗಳ ಪರೀಕ್ಷೆಯ ಯಶಸ್ಸಿನ ಪ್ರಮುಖ ಸೂತ್ರಗಳು ಎನ್ನುವ ಮಹತ್ವದ ವಿಷಯ ಅರಿಯಲು ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಸ್ಫೂರ್ತೀ ಮತ್ತು ಮಹತ್ವದ ವೇದಿಕೆಯನ್ನೊದಗಿಸಿತು.


ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಪ್ರಾಸ್ತಾವಿಕ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್., ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ, ಬೀದರ ಮತ್ತು ಬಸವಕಲ್ಯಾಣ ಸಹಾಯಕ ಆಯುಕ್ತರಾದ ಗರೀಮಾ ಪನವಾರ, ಭುವನೇಶ ಪಾಟೀಲ, ಇನ್ನೀತರ ಐಎಎಸ್ ಅಧಿಕಾರಿಗಳಾದ ರಾಹುಲ್ ಶಿಂಧೆ, ಅಶ್ವಿಜಾ ಬಿ.ವಿ., ಆಕಾಶ, ಐಆರ್‌ಎಸ್ ಅಧಿಕಾರಿಗಳಾದ ಅಮರ ಪಾಟೀಲ, ಮೊಹಮ್ಮದ್ ನದೀಮ್, ಐಪಿಎಸ್ ಅಧಿಕಾರಿಗಳಾದ ಸಿದ್ಧಾರ್ಥ ಗೋಯಲ್, ಕೆಎಎಸ್ ಅಧಿಕಾರಿಗಳಾದ ಸಾವಿತ್ರಿ ಸಲಗರ, ನಾಗಯ್ಯ ಹಿರೇಮಠ, ಗಂಗಾದೇವಿ, ಡಾ.ದೇವರಾಜು ಬಿ ಅವರು ಸಮಾರಂಭದಲ್ಲಿ ಹಲವಾರು ವಿಷಯಗಳನ್ನು ಮಂಡಿಸಿದರು.
ಅತ್ಯಂತ ಕಠಿಣ ಪರೀಕ್ಷೆಗೆ ತಾವು ಸಿದ್ಧರಾದ ರೀತಿ ಮತ್ತು ಮನೆಯಲ್ಲಿ ಕುಟುಂಬದವರು, ಪತಿ, ಪತ್ನಿ ನೀಡಿದ ಪ್ರೋತ್ಸಾಹದ ಸ್ವ-ಅನುಭವವನ್ನು ವಿದ್ಯಾರ್ಥಿಗಳ ಎದುರು ಬಿಚ್ಚಿಟ್ಟ ಅಧಿಕಾರಿಗಳು, ನಾಗರಿಕ ಸೇವೆಗಳ ಪರೀಕ್ಷೆಗೆ ಸಿದ್ಧವಾಗುವ ಬಗೆ, ಪಠ್ಯಕ್ರಮ, ನೋಟ್ಸ್ ತಯಾರಿಸುವ ರೀತಿ, ಅಧ್ಯಯನದ ವಿಧಾನ, ಆನ್‌ಲೈನ್ ಪಠ್ಯಕ್ರಮದ ಸದ್ಬಳಕೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಸಾಮಾನ್ಯ ಕುಟುಂಬದಿAದ ಬಂದವರೂ ಕೂಡ ಐಎಎಸ್, ಕೆಎಎಸ್, ಐಪಿಎಸ್ ಸೇರಿದಂತೆ ಯಾವುದೇ ನಾಗರಿಕ ಸೇವೆಗಳ ಪರೀಕ್ಷೆಗಳನ್ನು ಪಾಸು ಮಾಡಬಹುದು. ನಾನು ನಾಗರಿಕ ಸೇವೆಗಳ ಪರೀಕ್ಷೆಗಳನ್ನು ಪಾಸು ಮಾಡುತ್ತೇನೆ ಎನ್ನುವ ಛಲ ಮೊದಲು ವಿದ್ಯಾರ್ಥಿಗಳಲ್ಲಿರಬೇಕು. ಸಂದರ್ಶನದಲ್ಲಿ ನಮ್ಮ ಜ್ಞಾನ ಪರೀಕ್ಷೆ ಮಾಡುವುದಿಲ್ಲ. ನಮ್ಮಲ್ಲಿನ ಮಾನವೀಯ ಗುಣ ಮತ್ತು ನಾಗರಿಕ ಸೇವೆಗೆ ನಮ್ಮಲ್ಲಿ ಅರ್ಹತೆ ಇದೆ ಎನ್ನುವುದನ್ನು ಮಾತ್ರ ಪರೀಕ್ಷೆ ಮಾಡುತ್ತಾರೆ ಎನ್ನುವ ಮಹತ್ವದ ಅಂಶವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ಆನ್‌ಲೈನ್ ಮೂಲಕವೂ ವೀಕ್ಷಣೆಗೆ ಅವಕಾಶ: ಲಿಂಕ್ ಬಳಸಿ ಹೆಸರು ನೋಂದಾಯಿಸಿಕೊAಡಿದ್ದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಂಗಮAದಿರದಲ್ಲಿ ಆಸನಗಳನ್ನು ಕಾಯ್ದಿರಿಸಲಾಗಿತ್ತು. ಮಾಸ್ಕ ಧರಿಸಿ ಮತ್ತು ಸಾಮಾಜಿಕ ಅಂತರ
ಪಾಲನೆ ಮಾಡಿ ವಿದ್ಯಾರ್ಥಿಗಳು ಕುಳಿತು ಪಾಠಗಳನ್ನು ಆಲಿಸಿದರು. ರಂಗಮAದಿರದ ಹೊರಾಂಗಣದಲ್ಲಿ ಕೂಡ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಕಾರ್ಯಕ್ರಮವನ್ನು ಅಸಂಖ್ಯೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಏಕಕಾಲಕ್ಕೆ ಯೂಟೂಬ್ ಲಿಂಕ್ ಬಳಸಿ ವೀಕ್ಷಿಸಿದ್ದುದು ವಿಶೇಷವಾಗಿತ್ತು. 

ಕನಸು ಬಿತ್ತುವ ಕಾರ್ಯಕ್ರಮವಿದು: ಸಂಸದರಾದ ಭಗವಂತ ಖೂಬಾ

ಬೀದರ ಸೆಪ್ಟೆಂಬರ್ 26 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗಳು ಸೇರಿ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಕನಸು ಬಿತ್ತುವ ಕಾರ್ಯಕ್ರಮ ರೂಪಿಸಿವೆ ಎಂದು ಸಂಸದರಾದ ಭಗವಂತ ಖೂಬಾ ಅವರು, ನಾಗರಿಕ ಸೇವೆಗಳ ಪರೀಕ್ಷೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನು ಬಣ್ಣಿಸಿದರು.
ನಗರದ ಶ್ರೀ ಚೆನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮAದಿರದಲ್ಲಿ ಸೆ.26ರಂದು ನಡೆದ ಕಾರ್ಯಕ್ರಮದಲ್ಲಿ ಗಂಟೆಗೂ ಹೆಚ್ಚು ಕಾಲ ಕುಳಿತು ಸಂಪನ್ಮೂಲ ವ್ಯಕ್ತಿಗಳ ವಿಚಾರಗಳನ್ನು ಆಲಿಸಿ ಬಳಿಕ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಾವು ಸಾಧಕರಾಗುವ ಕನಸನ್ನು ಕಾಣಬೇಕು. ಅಂತಹ ಕನಸು ಕಾಣುವ ವೇದಿಕೆಯನ್ನು ಇಂದು ಜಿಲ್ಲಾಡಳಿತವು ಒದಗಿಸಿ ತಮಗೆ ಪ್ರೇರಣೆ ನೀಡಿದೆ. ತುಸುವೂ ಸಮಯವನ್ನು ವ್ಯರ್ಥ ಮಾಡದೇ ಸತತ ಅಧ್ಯಯನ ಮಾಡಿದಲ್ಲಿ ತಾವುಗಳು ಯಶಸ್ವಿಯಾಗಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ಅವರು ಮಾತನಾಡಿ, ವಿದ್ಯಾರ್ಥಿಗಳು ಓದಿನ ಜೊತೆಗೆ ನಾಡುನುಡಿಯನ್ನು ಪ್ರೀತಿಸಬೇಕು. ಸಮಾಜದ ಬಗ್ಗೆ ಕಳಕಳಿ ಹೊಂದಬೇಕು. ಏಕಾಗ್ರತೆ ವಹಿಸಿ, ಸತತ ಓದಿದರೆ ಪರೀಕ್ಷೆಗಳಲ್ಲಿ ಯಶ ಸಾಧ್ಯ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಮಾತನಾಡಿ, ಏನಾದರು ಆಶಯ ಇದ್ದರೂ ಮಾರ್ಗದರ್ಶನದ ಕೊರತೆಯ ಕಾರಣಕ್ಕೆ ವಿದ್ಯಾರ್ಥಿಗಳು ಹಿಂದೆ ಬೀಳಬಾರದು. ಸರಿಯಾದ ಸಮಯಕ್ಕೆ ಸರಿಯಾದ ಮಾರ್ಗದರ್ಶನವಿದ್ದಲ್ಲಿ ಪ್ರಯತ್ನ ಫಲಿಸಲು ಸಾಧ್ಯ ಎನ್ನುವ ಉದ್ದೇಶದಿಂದ ಈ ಹಿಂದೆ  ಜಿಲ್ಲಾಧಿಕಾರಿಗಳಾಗಿದ್ದ ಮಾನ್ಯ ಡಾ.ಪಿ.ಸಿ.ಜಾಫರ್ ಅವರು ನಡೆಸಿದ್ದ ಕಾರ್ಯಕ್ರಮವನ್ನು ಈಗ ನಾವು ಕೂಡ ನಡೆಸಿದ್ದೇವೆ ಎಂದು ತಿಳಿಸಿದರು.
ಈ ರೀತಿಯ ಕಾರ್ಯಕ್ರಮವು ಬೀದರ ಜಿಲ್ಲೆನಲ್ಲಿ ಪ್ರತಿವರ್ಷ ನಡೆಯಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಈ ಕಾರ್ಯಕ್ರಮದ ಕೇಂದ್ರಬಿAದು ಆಕಾಂಕ್ಷಿಗಳಾದ ತಾವೆಲ್ಲರೂ ನಾಗರಿಕ ಸೇವೆಗಳ ಪರೀಕ್ಷೆ ಬರೆಯಬೇಕು. ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಸಾರ್ವಜನಿಕ ಸೇವೆಗೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್., ಜೀವನದಲ್ಲಿ ನಾನು ಏನಾದರು ಮಾಡಬೇಕು ಎನ್ನುವ ಆಕಾಂಕ್ಷೆಯು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಇರಬೇಕು. ಅಂದಾಗಲೇ ಸಾಧನೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಅವರು ಮಾತನಾಡಿ, ಓದಿಗೆ ಬಡತನ ಅಡ್ಡಿಯಾಗಬಾರದು ಎಂದು ತಿಳಿದು ಮಾನ್ಯ ಜಿಲ್ಲಾಧಿಕಾರಿಗಳು ಇಂತಹದ್ದೊAದು ಮಹತ್ವಪೂರ್ಣ ವೇದಿಕೆ ರೂಪಿಸಿದ್ದಾರೆ. ಅಧಿಕಾರಿಗಳ ಅನುಭವವನ್ನು ವಿದ್ಯಾರ್ಥಿಗಳು ಸ್ಪೂರ್ತಿದಾಯಕವಾಗಿ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ವೇದಿಕೆಯಲ್ಲಿ ಜ್ಞಾನಸುಧಾ ವಿದ್ಯಾಲಯದ ಮುನೇಶ್ವರ ಲಾಖಾ, ಬೀದರ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಶರಣಬಸಪ್ಪ ಕೋಟಪ್ಪಗೋಳ, ತಹಸೀಲ್ದಾರ ಚಂದ್ರಶೇಖರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಮತ್ತು ಇನ್ನೀತರರು ಉಪಸ್ಥಿತರಿದ್ದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯರಾದ ಚನ್ನಬಸವ ಹೆಡೆ ನಿರೂಪಿಸಿದರು.
ಶಾಹೀನ್ ಶಿಕ್ಷಣ ಸಂಸ್ಥೆಯ ಸೇವೆಗೆ ಸನ್ಮಾನ: ನಾಗರಿಕ ಸೇವೆಗಳ ಪರೀಕ್ಷೆಗಳ ಕುರಿತ ಅರಿವು ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಶಾಹೀನ್ ಶಿಕ್ಷಣ ಸಂಸ್ಥೆಯ ಅಬ್ದುಲ್ ಖದೀರ್ ಅವರಿಗೆ ಇದೆ ವೇಳೆ ಜಿಲ್ಲಾಡಳಿತದ ಪರವಾಗಿ ಸಂಸದರಾದ ಭಗವಂತ ಖೂಬಾ ಅವರು ಶಾಲುಹೊದಿಸಿ ಸನ್ಮಾನಿಸಿದರು. 

No comments:

Post Top Ad