28 September,2020 ಬೀದರ ಜಿಲ್ಲಾ ಫಾರ್ಮಾ ಮತ್ತು ಕೆಮಿಕಲ್ ಘಟಕಗಳಿಂದ ಬ್ರಿಮ್ಸ್‍ಗೆ 22 ಲಕ್ಷ ರೂ.ಮೊತ್ತದ ಉಪಕರಣಗಳ ಹಸ್ತಾಂತರ - EYLAAPH E MEDIA

EYLAAPH E MEDIA

EYLAAPH EMEDIA PVT LTD. IS DELIVERING COMMON NEWS TO THE WORLD THROUGH IT'S REPORTERS , NEWS WHICH CONTAINS REALITY. TRUTH WHICH OTHERS NEVER COVER, PLEASE SHARE OUR CHANNEL AND MAKE IT SUBSCRIBED IN YOUR MOBILE TO GET UPDATED ON EVERY NEWS FROM EYLAAPH NEWS.

Eylaaph Breaking update

Post Top Ad

Post Top Ad

Weather

Translate

Tuesday, September 29, 2020

28 September,2020 ಬೀದರ ಜಿಲ್ಲಾ ಫಾರ್ಮಾ ಮತ್ತು ಕೆಮಿಕಲ್ ಘಟಕಗಳಿಂದ ಬ್ರಿಮ್ಸ್‍ಗೆ 22 ಲಕ್ಷ ರೂ.ಮೊತ್ತದ ಉಪಕರಣಗಳ ಹಸ್ತಾಂತರ

ಬೀದರ ಜಿಲ್ಲಾ ಫಾರ್ಮಾ ಮತ್ತು ಕೆಮಿಕಲ್
ಘಟಕಗಳಿಂದ
ಬ್ರಿಮ್ಸ್‍ಗೆ 22 ಲಕ್ಷ ರೂ.ಮೊತ್ತದ
ಉಪಕರಣಗಳ ಹಸ್ತಾಂತರ

ಬೀದರ ಸೆಪ್ಟೆಂಬರ್ 28 -ಕೋವಿಡ್-19
ನಿಯಂತ್ರಣ
ಹಿನ್ನೆಲೆಯಲ್ಲಿ ಬೀದರ ಜಿಲ್ಲೆಯ 32 ಫಾರ್ಮಾ ಮತ್ತು ಕೆಮಿಕಲ್
ಘಟಕಗಳು ಅಂದಾಜು 22 ಲಕ್ಷ ರೂ. ಮೊತ್ತದ ಆಧುನಿಕ
ಉಪಕರಣಗಳನ್ನು ಬ್ರಿಮ್ಸ್ ಆಸ್ಪತ್ರೆಗೆ ನೀಡಿವೆ.
ಫಾರ್ಮಾ ಮತ್ತು ಕೆಮಿಕಲ್ ಘಟಕಗಳ ಪ್ರಮುಖರು ಜಿಲ್ಲಾ
ಕೈಗಾರಿಕಾ ಇಲಾಖೆಯ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳಾದ
ರಾಮಚಂದ್ರನ್ ಆರ್ ಅವರ ಮೂಲಕ ಉಪಕರಣಗಳನ್ನು
ಸೆ.28ರಂದು ಬ್ರಿಮ್ಸ್ ಆಸ್ಪತ್ರೆಗೆ ಹಸ್ತಾಂತರಿಸಿದರು.
ಸತ್ಯದೀಪ ಫಾರ್ಮಾ ಪ್ರೈವೇಟ್ ಲಿಮಿಟೆಡ್ ಮತ್ತು ಬೀದರನ ಸಾಯಿ
ಲೈಪ್ ಸೈನ್ಸ್ ಲಿಮಿಟೆಡ್‍ನಿಂದ ತಲಾ 3.7 ಲಕ್ಷ ರೂ. ಮೊತ್ತದಲ್ಲಿ ಎರಡು
ಪೋರ್ಟಬಲ್ ಎಕ್ಸ್-ರೇ ಮಸೀನ್ ಬ್ರಿಮ್ಸಗೆ ನೀಡಲಾಯಿತು.
ಬೀದರನ ಕೋರ್ವಿನ್ ಕೆಮಿಕಲ್ ಫಾರ್ಮಾ ಲಿಮಿಟೆಡ್ ಇವರು 2 ಲಕ್ಷ
ರೂ. ಮೊತ್ತದಲ್ಲಿ ಇಸಿಜಿ ಮಸೀನ್ ನೀಡಿದರು. ಶ್ರೀವನ್ ಫಾರ್ಮಾ ಪ್ರೈವೆಟ್
ಲಿಮಿಟೆಡ್ ಬೀದರ ಇವರು 1.2 ಲಕ್ಷ ರೂ. ಮೊತ್ತದಲ್ಲಿ
ಪ್ಯಾರಾಸಿಟಾಮೋಲ್ ಗುಳಿಗೆಗಳನ್ನು, ಹ್ಯಾಂಡ್ ಸ್ಯಾನಿಟೈಜರ್‍ಗಳನ್ನು
ಬ್ರಿಮ್ಸ್ ಗೆ ನೀಡಿದರು. ಹುಮಾನಾಬಾದ್‍ನ ಆರ್‍ಕೆಂ (ಸೋಮನಹಳ್ಳಿ
ಪ್ರೈ.ಲಿ.) ಇವರು ಪಿಪಿ ಕಿಟ್ಸ್, ಬ್ಯಾಟರಿ ಸ್ಪ್ರೇಯರ್ ವಿತ್ ಬ್ಲೌವೆಡರ್ ಮತ್ತು
ಹ್ಯಾಂಡ್ ಸ್ಯಾನಿಟೈಜರ್‍ಗಳನ್ನು ಬ್ರಿಮ್ಸಗೆ ನೀಡಿದರು.
ಬ್ರಿಮ್ಸ್‍ಗೆ 9,35,000 ರೂ. ಮೊತ್ತ: ಕೆಮಿಕಲ್ ರಿ ಎಜೆಂಟ್ಸ್ ಕಿಟ್ಸ್ ಖರೀದಿಸಲು
ಇದೆ ವೇಳೆ ವಿವಿಧ ಫಾರ್ಮಾ ಕಂಪನಿಗಳಿಂದ ಬ್ರಿಮ್ಸ್ ಗೆ 9,35,000
ರೂ.ಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಗ್ಯಾನೇಂದ್ರಕುಮಾರ ಗಂಗವಾರ, ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ
ನಿರ್ದೇಶಕರಾದ ಸುರೇಖಾ ಮುನೊಳಿ, ಉಪ ನಿರ್ದೇಶಕರಾದ
ನಾಗಪ್ಪ ರೆಡ್ಡಿ, ಫಾರ್ಮಾ ಅಸೋಸಿಯೇಶನ್ ಅಧ್ಯಕ್ಷರಾದ
ದೇವೇಂದ್ರಪ್ಪ, ಬ್ರಿಮ್ಸ್ ವೈದ್ಯಾಧಿಕಾರಿಗಳು ಇದ್ದರು.
  ಕರ್ನಾಟಕ ವಾರ್ತೆ


No comments:

Post Top Ad