Post Top Ad
Weather
Translate
Monday, March 10, 2025
ಸಿಸಿ ಟಿ.ವಿ. ಕಮಾಂಡ, ನಿಯಂತ್ರಣ ಕೇಂದ್ರ ಉದ್ಘಾಟಿಸಿದ ಸಚಿವ ಈಶ್ವರ ಖಂಡ್ರೆ
ಸಿಸಿ ಟಿ.ವಿ. ಕಮಾಂಡ, ನಿಯಂತ್ರಣ ಕೇಂದ್ರ ಉದ್ಘಾಟಿಸಿದ ಸಚಿವ ಈಶ್ವರ ಖಂಡ್ರೆ
ಬೀದರ (ಕರ್ನಾಟಕ ವಾರ್ತೆ EYLAAPH NEWS) ಮಾರ್ಚ.09: ಜಿಲ್ಲೆಯಲ್ಲಿ ಸಾರ್ವಜನಿಕರ ಭದ್ರತೆ ಹಾಗೂ ಸುರಕ್ಷತೆಯ ದೃಷ್ಠಿಯಿಂದ ಹಾಗೂ ಅಪರಾಧಿಗಳ ಮೇಲೆ ನಿಗಾ ಇಡಲು ಬೀದರ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಸಿಸಿ ಟಿ.ವಿ. ಕಮಾಂಡ ಮತ್ತು ನಿಯಂತ್ರಣ ಕೇಂದ್ರವನ್ನು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರು ಶನಿವಾರದಂದು ಉದ್ಘಾಟಿಸಿದರು.
ಸಾರ್ವಜನಿಕರ ಭದ್ರತೆ ಹಾಗೂ ಸುರಕ್ಷತೆ ಮತ್ತು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಅಪರಾಧ ಪ್ರಕರಣಗಳಲ್ಲಿ ತನಿಖೆ ಮತ್ತು ಅಪರಾಧಿಗಳ ಮೇಲೆ ನಿಗಾ ಇಡಲು ಸಿಸಿ ಟಿ.ವಿ. ಯು ಮಹತ್ವದ ಮಾಹಿತಿ/ಸುಳಿವು ನೀಡುವ ತಾಂತ್ರಿಕ ಅಂಶವಾಗಿದ್ದು, ತಾಂತ್ರಿಕ ಕಾಲಮಾನದಲ್ಲಿ ಜಿಲ್ಲೆಯಲ್ಲಿ ಸುರಕ್ಷತಾ ಕಾನೂನು (ಸೆಫ್ಟಿ ಆಕ್ಟನ್ನು ) ಪರಿಣಾಮಕಾರಿಯಾಗಿ ಬಳಸಲು ಈ ಕೇಂದ್ರ ಸಹಕಾರಿಯಾಗಲಿದೆ. ಕೆ.ಕೆ.ಆರ್.ಡಿ.ಬಿ. ನಿಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಅನುದಾನದಡಿ ಮಂಜುರಾದ Automatic Number Plate Recognition (A.N.P.R)ಮಾದರಿಯ 20 ಸಿಸಿ ಟಿ.ವಿ ಕ್ಯಾಮೆರಾಗಳು ಮತ್ತು Face Recognition (F.R) ಮಾದರಿಯ 16 ಸಿಸಿ ಟಿ.ವಿ ಕ್ಯಾಮೆರಾಗಳು ಹೀಗೆ ಒಟ್ಟು 36 ಕ್ಯಾಮೆರಾಗಳನ್ನು ಅಳವಡಿಸಿ ಇದರ ನಿಯಂತ್ರಣವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿ ಸಿಸಿ ಟಿ.ವಿ. ಕಮಾಂಡ ಮತ್ತು ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಈ ಸಂದರ್ಭದಲ್ಲಿ ಬೀದರ ದಕ್ಷಿಣ ಶಾಸಕರಾದ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ, ಬೀದರ ನಗರಸಭೆ ಅಧ್ಯಕ್ಷರಾದ ಮಹ್ಮದ ಗೌಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರದೀಪ ಗುಂಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಚಂದ್ರಕಾಂತ ಪೂಜಾರಿ, ಹುಮನಾಬಾದ ಉಪಭಾಗದ ಡಿ.ಸ್.ಪಿ.ಗಳಾದ ಜಿ.ಎಸ್.ನ್ಯಾಮೇಗೌಡರ್, ನಾಶಿರ್ ಡಿ ಸನಾದಿ ಸೆನ್ ಪೊಲೀಸ್ ಠಾಣೆ, ಸುನೀಲ್ ಕೊಡ್ಲಿ, ಡಿ.ಎ.ಆರ್.ಬೀದರ ಹಾಗೂ ಜಿಲ್ಲೆಯ ಇತರೆ ಪೊಲೀಸ್ ಅಧಿಕಾರಿಗಳು ಸೇರಿದಗಳು ಇತರರು ಉಪಸ್ಥಿತರಿದ್ದರು.
******
Tags
# Kannada
About Eylaaph Media/Eylaaph News
Kannada
Labels:
Kannada
Subscribe to:
Post Comments (Atom)


No comments:
Post a Comment