ಬೀದರ (ಕರ್ನಾಟಕ ವಾರ್ತೆ) ಫೆಬ್ರುವರಿ.5:ಮುಂಬರುವ ಮಹಾತ್ಮರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಸಹಾಯಕ ಆಯುಕ್ತರಾದ ಎಂ.ಡಿ.ಶಕೀಲ್ ಅವರು ತಿಳಿಸಿದರು. ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಫೆಬ್ರುವರಿ ಮಾಹೆಯಲ್ಲಿ ಜರುಗಲಿರುವ ವಿವಿಧ ಜಯಂತಿಗಳ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಫೆಬ್ರುವರಿ.10 ರಂದು ಮುಂಬರುವ ಕಾಯಕ ಶರಣರ ಜಯಂತಿಗಳನ್ನು ಕಚೇರಿ ಶಾಲಾ, ಕಾಲೇಜುಗಳಲ್ಲಿ ಸರಳವಾಗಿ ಆಚರಿಸಲು ತೀರ್ಮಾನಿಸಲಾಯಿತು. ಫೆಬ್ರುವರಿ.15 ರಂದು ಬರುವ ಸಂತ ಸೇವಾಲಾಲ್ ಜಯಂತಿ, ಫೆಬ್ರುವರಿ.20 ರಂದು ಕವಿ ಸರ್ವಜ್ಞ ಜಯಂತಿಗಳನ್ನು ಎಲ್ಲಾ ಸರ್ಕಾರಿ, ಅರೆ ಸರ್ಕಾರಿ, ಸಂಘ-ಸAಸ್ಥೆಗಳಲ್ಲಿ ಅಂದು ಬೆಳಿಗ್ಗೆ 8.45 ಗಂಟೆಗೆ ಆಚರಿಸುವುದು ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ 9 ಗಂಟೆಗೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಹಾತ್ಮರ ಭಾವಚಿತ್ರ ಮೆರವಣಿಗೆಯನ್ನು ನಗರದ ಶಿವಾಜಿ ವೃತ್ತ, ಭಗತಸಿಂಗ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಜನರಲ್ ಕರಿಯಪ್ಪ ವೃತ್ತದ ಮೂಲಕ ಡಾ.ಪೂಜ್ಯ ಚನ್ನಬಸವ ಪಟ್ಟದೇವರು ರಂಗಮAದಿರದಲ್ಲಿ ಬೆಳಿಗ್ಗೆ 11.30 ಗಂಟೆಗೆ ವೇದಿಕೆ ಕಾರ್ಯಕ್ರಮ ಜರುಗಲಿವೆ. ಸದರಿ ದಿನಾಂಕಗಳAದು ಎಲ್ಲಾ ವೃತ್ತಗಳ ಮೇಲೆ ದೀಪಾಲಂಕಾರ ಮತ್ತು ಮೆರವಣಿಗೆ ಹೋಗುವ ರಸ್ತೆ ಸುತ್ತ-ಮುತ್ತ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾ ತಂಡಗಳ ವ್ಯವಸ್ಥೆ, ಪೊಲೀಸ್ ಇಲಾಖೆ ವತಿಯಿಂದ ಟ್ರಾಫೀಕ ವ್ಯವಸ್ಥೆ ಮತ್ತು ಸೂಕ್ತ ಬಂದೋಬಸ್ತ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಈ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಪರವಾಗಿ ರಾಜಶೇಖರ ವಟಗೆ, ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಸಂತೋಷ ಜೋಳದಬಕಾ, ಗೋವರ್ಧನ ರಾಠೋಡ, ರಮೇಶ ಜಾಧವ, ಲಕ್ಷö್ಮಣ ರಾಠೋಡ, ಬಸವರಾಜ ಪವಾರ, ಸವಿತಾ ರಾಠೋಡ ಸೇರಿದಂತೆ ಸಮಾಜದ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
(EYLAAPH NEWS)

No comments:
Post a Comment