ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಬೀದರ....
ನವೆಂಬರ್ 01:
ನಗರದ ಜಿಲ್ಲಾ ಪೊಲೀಸ್ ಫರೇಡ್ ಮೈದಾನದಲ್ಲಿ ನವೆಂಬರ್ 1,ರಂದು
ನಡೆದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ
ನೆರವೇರಿಸಿ ಬಳಿಕ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಕರ್ನಾಟಕ ಏಕೀಕರಣ ಚಳುವಳಿಯು, ಕನ್ನಡ ನಾಡಿನ ಚರಿತ್ರೆಯಲ್ಲಿ
ಅತ್ಯಂತ ಮಹತ್ವದಾಗಿದೆ. ಆಲೂರು ವೆಂಕಟರಾಯರು,
ಬಿ.ಎಂ.ಶ್ರೀಕಂಠಯ್ಯ, ಅ.ನ.ಕೃಷ್ಣರಾಯರು, ಎಸ್.ನಿಜಲಿಂಗಪ್ಪ,
ಕಡಿದಾಳ ಮಂಜಪ್ಪ, ಕೆಂಗಲ್ ಹನುಮಂತಯ್ಯ, ಪಾಟೀಲ ಪುಟ್ಟಪ್ಪ
ಅವರು ಸೇರಿದಂತೆ ಅನೇಕ ಮಹನೀಯರು ಹೋರಾಟ ನಡೆಸಿದ್ದಾರೆ. ಈ
ಎಲ್ಲ ಮಹನಿಯರ ತ್ಯಾಗವನ್ನು ನಾವೆಲ್ಲರು ಸ್ಮರಿಸಲೇಬೇಕು ಎಂದು
ತಿಳಿಸಿದರು.
ಕರ್ನಾಟಕ ಏಕೀಕರಣ ಚಳವಳಿಯ ಫಲವಾಗಿ 1956ರ ನವೆಂಬರ್ 1
ರಂದು ಕರ್ನಾಟಕ ರಾಜ್ಯ ಉದಯವಾಯಿತು. ಮುಂದೆ 1973 ನವೆಂಬರ್ 1
ರಂದು ಅಂದಿನ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸ್ ಅವರು
ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರು ನಾಮಕರಣ
ಮಾಡಿದರು.
12ನೇ ಶತಮಾನದಲ್ಲಿಯೇ ಸಮಾನತೆಯನ್ನು ಸ್ಥಾಪಿಸಲು ಅಡಿಯಿಟ್ಟು,
ಇಡೀ ಜಗತ್ತಿಗೆ ಸಂಸದೀಯ ಪ್ರಜಾಪ್ರಭುತ್ವದ ಮಾದರಿ
ಆಡಳಿತವನ್ನು ಮೊಟ್ಟ ಮೊದಲು ಹೇಳಿಕೊಟ್ಟ ಕಾಯಕಯೋಗಿ,
ಬಸವಣ್ಣನವರ ಕರ್ಮಭೂಮಿ, ನಮ್ಮ ಬೀದರ ಜಿಲ್ಲೆ ಆಗಿದೆ. ‘ವಚನ’,ಎಂಬ ವಾಙ್ಮಯವನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ಶ್ರೇಯಸ್ಸು
ನಮ್ಮ ಬೀದರ ಜಿಲ್ಲೆಗೆ ಸಲ್ಲುತ್ತದೆ ಎಂದರು. ರಾಜ್ಯದಲ್ಲಿ ಕನ್ನಡ
ಭಾμÉಯ ಏಳಿಗೆಗಾಗಿ ರಾಜ್ಯ ಸರ್ಕಾರವು ಸದಾ ಶ್ರಮಿಸುತ್ತಿದೆ.
ಕನ್ನಡ ನಾಡು ನುಡಿ ಸೇವೆಗೆ ಸರ್ಕಾರವು ಬದ್ಧವಾಗಿದೆ ಎಂದು
ತಿಳಿಸಿದರು.
ಮಳೆಯಿಂದಾದ ಹಾನಿಗೆ ಪರಿಹಾರ: ಅತಿವೃಷ್ಠಿಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 2.5
ಲಕ್ಷ ಹೆಕ್ಟರ್ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಹಾನಿಯಾಗಿದೆ.
09 ಮಾನವ ಹಾಗೂ 64 ಜಾನುವಾರು ಹಾನಿಯಾಗಿದ್ದು, ಸದರಿ
ಪ್ರಕರಣಗಳಿಗೆ ಈಗಾಗಲೆ ಪರಿಹಾರ ನೀಡಲಾಗಿದೆ. ಮಳೆಯಿಂದ
ಹಾನಿಯಾಗಿದ್ದ 1750 ಮನೆಗಳಿಗೆ ಪರಿಹಾರ ನೀಡುವ ಕಾರ್ಯ
ಚಾಲ್ತಿಯಲ್ಲಿದೆ ಎಂದು ತಿಳಿಸಿದರು.
ರೈತರಿಗೆ ಪರಿಹಾರ: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ
ಫಸಲ್ ಬಿಮಾ ಯೋಜನೆಯಡಿ 2020-21ನೇ ಸಾಲಿನ ಮುಂಗಾರು
ಹಂಗಾಮಿಯಲ್ಲಿ 2,12,000 ರೈತರು ನೋಂದಣಿ ಮಾಡಿಸಿದ್ದಾರೆ. ಪಿಎಮ್-
ಕಿಸಾನ್ ಯೋಜನೆಯಡಿ ಇಲ್ಲಿವರೆಗೆ ಆರು ಕಂತುಗಳಲ್ಲಿ ಕೇಂದ್ರ
ಮತ್ತು ರಾಜ್ಯ ಸರ್ಕಾರದ ವತಿಯಿಂದ ಒಟ್ಟು 218 ಕೋಟಿ ರೂ.
ಸಹಾಯಧನವನ್ನು ಸುಮಾರು 2 ಲಕ್ಷ ರೈತರ ಬ್ಯಾಂಕ್ ಖಾತೆಗೆ
ನೇರ ನೆರವು ಸಂದಾಯ ಮಾಡಲಾಗಿದೆ.
ಸಾಧಕರಿಗೆ ಅಭಿನಂದನೆ ತಿಳಿಸಿದ ಜಿಲ್ಲಾಧಿಕಾರಿಗಳು: 2020ನೇ ಸಾಲಿನ,.ರಾಜ್ಯೋತ್ಸವದ ಶುಭಾಶಯ ತಿಳಿಸಿದ ಜಿಲ್ಲಾಧಿಕಾರಿಗಳು: ನಮ್ಮ
ಕನ್ನಡ ನಾಡಿನ ಜನರಿಗೆ ಆರೋಗ್ಯ, ಶಾಂತಿ ಮತ್ತು
ನೆಮ್ಮದಿಯನ್ನು ಕರುಣಿಸಲಿ ಎಂದು ತಾಯಿ ಭುವನೇಶ್ವರಿ
ಮಾತೆಯಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು,
ಕನ್ನಡ ನಾಡು ನುಡಿಯ ಸೇವೆಯಲ್ಲಿರುವ ಬೀದರ ಜಿಲ್ಲೆಯ
ಸಾಹಿತಿಗಳು, ಅಧಿಕಾರಿ ಸಿಬ್ಬಂದಿ ವರ್ಗದವರು, ಪತ್ರಕರ್ತರಿಗೆ,
ಸಾರ್ವಜನಿಕರಿಗೆ ರಾಜ್ಯೋತ್ಸವ ದಿನಾಚರಣೆಯ
ಶುಭಾಷಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಗೀತಾ ಪಂಡಿತರಾವ್
ಚಿದ್ರಿ, ಸಂಸದರಾದ ಭಗವಂತ ಖೂಬಾ, ಶಾಸಕರಾದ ರಹೀಂ ಖಾನ್,
ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ,
ಅರವಿಂದಕುಮಾರ ಅರಳಿ, ತಾಪಂ ಅಧ್ಯಕ್ಷರಾದ ವಿಜಯಕುಮಾರ
ರಾಮುಲು ಬರೂರು, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ನಾಗೇಶ ಡಿ.ಎಲ್., ಜಿಲ್ಲಾ
ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಗ್ಯಾನೇಂದ್ರಕುಮಾರ ಗಂಗವಾರ, ಅಪರ ಜಿಲ್ಲಾಧಿಕಾರಿ ರುದ್ರೇಶ
ಗಾಳಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ
ಎಂ.ಬ್ಯಾಕೋಡ್., ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ,
ಬೀದರ ತಹಸೀಲ್ದಾರರಾದ ಎಚ್.ಸಿ.ಗಂಗಾದೇವಿ, ಕನ್ನಡ ಮತ್ತು
ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಶಿಂಧೆ,
ಹಿರಿಯ ಪತ್ರಕರ್ತರಾದ ಬಾಬು ವಾಲಿ, ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ
ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ, ಕನ್ನಡ ಸಾಹಿತ್ಯ ಪರಿಷತ್‍ನ
ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ, ಕಾರ್ಯದರ್ಶಿ
ಬಸವರಾಜ ಬಲ್ಲೂರ, ವಿವಿಧ ಸಂಘಟನೆಗಳ ಪ್ರಮುಖರಾದ
ವಿಜಯಕುಮಾರ ಸೋನಾರೆ, ಎಂ.ಪಿ.ಮುದಾಳೆ ಹಾಗೂ ಇತರರು
ಇದ್ದರು.




No comments:
Post a Comment