09,October,2020,ಅಬಕಾರಿ ದಾಳಿ: 212 ಗಾಂಜಾ ಗಿಡಗಳು ವಶಕ್ಕೆ. - EYLAAPH E MEDIA

EYLAAPH E MEDIA

EYLAAPH EMEDIA PVT LTD. IS DELIVERING COMMON NEWS TO THE WORLD THROUGH IT'S REPORTERS , NEWS WHICH CONTAINS REALITY. TRUTH WHICH OTHERS NEVER COVER, PLEASE SHARE OUR CHANNEL AND MAKE IT SUBSCRIBED IN YOUR MOBILE TO GET UPDATED ON EVERY NEWS FROM EYLAAPH NEWS.

Eylaaph Breaking update

Post Top Ad

Post Top Ad

Weather

Translate

Friday, October 9, 2020

09,October,2020,ಅಬಕಾರಿ ದಾಳಿ: 212 ಗಾಂಜಾ ಗಿಡಗಳು ವಶಕ್ಕೆ.

ಅಬಕಾರಿ ದಾಳಿ: 212 ಗಾಂಜಾ ಗಿಡಗಳು
ವಶಕ್ಕೆ..

ಬೀದರ ಅಕ್ಟೋಬರ್ 09 (ಕರ್ನಾಟಕ ವಾರ್ತೆ)ಬೀದರನ ಅಬಕಾರಿ 

ಇಲಾಖೆಯ ವಿವಿಧ ಘಟಕಗಳಿಂದ ಅಕ್ಟೋಬರ್ 8ರಂದು ವಿವಿಧೆಡೆ 

ಕಾರ್ಯಾಚರಣೆ ನಡೆಯಿತು. 

ಹುಮನಾಬಾದ್ ವಲಯ ವ್ಯಾಪ್ತಿಯ ಚಿಟ್ಟಗುಪ್ಪ ತಾಲ್ಲೂಕಿನ 

ಭದ್ರಾಪುರ ಗ್ರಾಮದಿಂದ ಸುಮಾರು 2 ಕಿ.ಮೀ ದೂರದಲ್ಲಿನ 

ಗುಡ್ಡಗಾಡು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗುವಳಿ 

ಮಾಡಿರುವ ಭೂಮಿಯಲ್ಲಿ ತೊಗರಿ ಬೆಳೆಯ ನಡುವೆ 3 ಅಡಿ 

ಎತ್ತರದಿಂದ 7 ಅಡಿ ಎತ್ತರವರೆಗಿನ ಸುಮಾರು 212 ಗಾಂಜಾ 

ಗಿಡಗಳನ್ನು ಪತ್ತೆ ಹಚ್ಚಿ, ಅವುಗಳನ್ನು ಬುಡ ಸಮೇತ 

ತೆಗೆದುಹಾಕಿ ಹಾಗೂ ಒಂದು ದ್ವಿಚಕ್ರ ವಾಹನವನ್ನು 

ವಶಪಡಿಸಿಕೊಳ್ಳಲಾಯಿತು. 

ಬೀದರ ಉಪ ವಿಭಾಗದ ಅಬಕಾರಿ ನಿರೀಕ್ಷಕರು ಪ್ರಕರಣವನ್ನು 

ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ. ದಾಳಿ ವೇಳೆಯಲ್ಲಿ 

ಅಬಕಾರಿ ನಿರೀಕ್ಷಕರುಗಳಾದ ರವೀಂದ್ರ ಪಾಟೀಲ್, ಆನಂದ ಉಕ್ಕಲಿ, 

ಕೆ.ಎಸ್. ರಾಜಶೇಖರ, ಅಬಕಾರಿ ಉಪ ನಿರೀಕ್ಷಕರಾದ ಜೆಟ್ಟಪ್ಪಾ, ಸಿಬ್ಬಂದಿ

ಅಬಕಾರಿ ರಕ್ಷಕರಾದ ಚಂದ್ರಕಾಂತ, ಹುಷೇನ್ ಸಾಬ್,

ವಾಹನ ಚಾಲಕರಾದ ಅಬ್ದುಲ್ ಅತೀಖ್ ಮತ್ತು ಪವನ್, ಅರಣ್ಯ 

ರಕ್ಷಕ ಸಿದ್ದಲಿಂಗಪ್ಪ ಮತ್ತು ಗ್ರಾಮ ಲೆಕ್ಕಿಗ ಹನುಮೇಶ್ 

ಇದ್ದರು. 

ಈ ಪ್ರಕರಣದಲ್ಲಿ 212 ಗಾಂಜಾ ಗಿಡಗಳು ಮತ್ತು ಒಂದು ಹೀರೋ 

ಹೊಂಡಾ ಪ್ಯಾಶನ್ ಪ್ರೋ ದ್ವಿ-ಚಕ್ರ ವಾಹನ ವಶಪಡಿಸಿಕೊಂಡಿದ್ದು, 

ಜಪ್ತುಪಡಿಸಿದ ಮುದ್ದೆಮಾಲೀನ ಅಂದಾಜು ಕಿಮ್ಮತ್ತು 1,00,000 

ಆಗುತ್ತದೆ ಎಂದು ಬಕಾರಿ ಇಲಾಖೆಯ ಪ್ರಕಟಣೆ ತಿಳಿಸಿದೆ.

 ಕರ್ನಾಟಕ ವಾರ್ತೆ


No comments:

Post Top Ad