ಇಎಂಓ ಪಿಂಚಣಿದಾರರಿಗೆ ಜಿಲ್ಲಾಧಿಕಾರಿಗಳ ಸೂಚನೆ
ಬೀದರ ಅಕ್ಟೋಬರ್ 07 (ಕರ್ನಾಟಕ ವಾರ್ತೆ):ಸಾಮಾಜಿಕ ಭದ್ರತಾ
ಯೋಜನೆಯಡಿ ಪಿಂಚಣಿಯನ್ನು ಇಎಂಓ ಮೂಲಕ
ಪಡೆಯುತ್ತಿರುವ ಫಲಾನುಭವಿಗಳನ್ನು ಡಿಬಿಟಿ (ಡೈರೆಕ್ಟ್ ಬೆನಿಫಿಟ್
ಟ್ರಾನ್ಸ್ಫರ್)ರಡಿ ತರಲಾಗುತ್ತಿದೆ. ಆದ್ದರಿಂದ ಈ ಫಲಾನುಭವಿಗಳು
ಪೋಸ್ಟ್‍ಮನ್ ಅವರಿಗೆ ತಮ್ಮ ಅಂಚೆ ಉಳಿತಾಯ ಖಾತೆ ಸಂಖ್ಯೆ ಹಾಗೂ
ಆಧಾರ್ ಕಾರ್ಡನ್ನು ಸಲ್ಲಿಸಬೇಕು. ಕೇಂದ್ರ ಸರ್ಕಾರದ ನೇರ ಹಣ 
ಸಂದಾಯ ಯೋಜನೆಯಡಿ ಪ್ರತಿ ಫಲಾನುಭವಿಯು ಸರ್ಕಾರದ
ಸವಲತ್ತುಗಳನ್ನು ಪಡೆಯಲು ಆಧಾರ್ ಸಂಖ್ಯೆ, ಅಂಚೆ ಉಳಿತಾಯ
ಖಾತೆ ಸಂಖ್ಯೆ ಮತ್ತು ಆಧಾರ್ ಜೋಡಣೆಗೆ ಒಪ್ಪಿಗೆಯನ್ನು
ನೀಡುವುದು ಸಹ ಕಡ್ಡಾಯಗೊಳಿಸಲಾಗಿದೆ ಎಂದು
ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ.



No comments:
Post a Comment