01,October,2020,ವಯೋವೃದ್ಧರ ಆರೈಕೆ, ಮನೋಬಲ ವೃದ್ಧಿ ಇಂದಿನ ಅಗತ್ಯ: ಡಾ.ವಿ.ಜಿ.ರೆಡ್ಡಿ - EYLAAPH E MEDIA

EYLAAPH E MEDIA

EYLAAPH EMEDIA PVT LTD. IS DELIVERING COMMON NEWS TO THE WORLD THROUGH IT'S REPORTERS , NEWS WHICH CONTAINS REALITY. TRUTH WHICH OTHERS NEVER COVER, PLEASE SHARE OUR CHANNEL AND MAKE IT SUBSCRIBED IN YOUR MOBILE TO GET UPDATED ON EVERY NEWS FROM EYLAAPH NEWS.

Eylaaph Breaking update

Post Top Ad

Post Top Ad

Weather

Translate

Thursday, October 1, 2020

01,October,2020,ವಯೋವೃದ್ಧರ ಆರೈಕೆ, ಮನೋಬಲ ವೃದ್ಧಿ ಇಂದಿನ ಅಗತ್ಯ: ಡಾ.ವಿ.ಜಿ.ರೆಡ್ಡಿ

 ವಯೋವೃದ್ಧರ ಆರೈಕೆ, ಮನೋಬಲ ವೃದ್ಧಿ ಇಂದಿನ ಅಗತ್ಯ: ಡಾ.ವಿ.ಜಿ.ರೆಡ್ಡಿ 

ಬೀದರ ಅಕ್ಟೋಬರ್ 1 (ಕರ್ನಾಟಕ ವಾರ್ತೆ): ಜಿಲ್ಲಾ ಮಟ್ಟದ ವಯಸ್ಸು ಮತ್ತು ವಯೋಮಾನದ ಸೂಕ್ತ ನಿರ್ವಹಣೆಯಿಂದ ಹಿರಿಯ ನಾಗರಿಕರ ಸಮಸ್ಯೆಗಳನ್ನು ಬದಲಿಸಬಹುದೇ ಎಂಬ ಘೋಷ ವಾಕ್ಯದೊಂದಿಗೆ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಸಭಾಭವನದಲ್ಲಿ ಅಕ್ಟೋಬರ್ 1ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಂಟುAಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ ಅವರು ಮಾತನಾಡಿ, ವಯೋವೃದ್ಧರ ಆರೈಕೆ ಇಂದಿನ ಅಗತ್ಯವಾಗಿದ್ದು, ಅವರಿಗೆ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಹಾಗೂ ಅವರ ಮನೋಬಲ ವೃದ್ಧಿಸುವುದು ತುಂಬಾ ಅನಿವಾರ್ಯವಾಗಿದೆ. ಪ್ರತಿಯೊಬ್ಬರು ಹಿರಿಯ ನಾಗರೀಕರೊಂದಿಗೆ ಉತ್ತಮ ಸಂಬAಧವನ್ನಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಹಿರಿಯ ನಾಗರೀಕರನ್ನು ಗೌರವಿಸುವುದು ಹಾಗೂ ಹಿರಿಯ ನಾಗರೀಕರ ಯೋಗಕ್ಷೇಮಕ್ಕಾಗಿ ಹಾಗೂ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಪೌಷ್ಠಿಕಯುಕ್ತ ಆಹಾರ ಹೆಚ್ಚೆಚ್ಚು ದ್ರವ ಆಹಾರ, ಆರೈಕೆ ಪ್ರತಿಯೊಬ್ಬರಿಗೂ ಸಿಗುವಂತಾಗಬೇಕು. ಯಾವುದೇ ಹಿರಿಯ ನಾಗರೀಕರಿಗೆ ಪೂಜ್ಯ ಭಾವನೆಯೊಂದಿಗೆ ಸೇವೆ ಒದಗಿಸಬೇಕು. ಈ ನಿಟ್ಟಿನಲ್ಲಿ ಕುಟುಂಬ, ಸಮಾಜ, ಸರ್ಕಾರ ಹಾಗೂ ಜನಪ್ರತಿನಿಧಿಗಳು ಒಟ್ಟಾರೆಯಾಗಿ ಕೈಜೋಡಿಸಿದಾಗ ಮಾತ್ರ ಹಿರಿಯರ ಸಾವು, ನೋವು ನಿವಾರಿಸಿ ಯೋಗಕ್ಷೇಮವನ್ನು ಕಾಪಾಡಿಕೊಳ್ಳಬಹುದೆಂದು ತಿಳಿಸಿದರು.
ಹಿರಿಯ ನಾಗರೀಕ ವೃದ್ಧಾಶ್ರಮದ ಮುಖ್ಯಸ್ಥರಾದ ಅನೀಲ ಬೆಲ್ದಾರ ಅವರು ಮಾತನಾಡಿ, ಹಿರಿಯ ನಾಗರೀಕರು ಹಲವಾರು ಬೌದ್ಧಿಕ, ಮಾನಸಿಕ ಹಾಗೂ ಶಾರೀರಿಕ ಸಮಸ್ಯೆ ಅನುಭವಿಸುತ್ತಿದ್ದಾರೆ. ಇಂದಿನ ಸಾಮಾಜಿಕ ವ್ಯವಸ್ಥೆ, ಕೌಟುಂಬಿಕ ವ್ಯವಸ್ಥೆ, ಚಿಕ್ಕ ಕುಟುಂಬಗಳು ಇತ್ಯಾದಿ ಕಾರಣಗಳಿಂದಾಗಿ ಹಿರಿಯ ನಾಗರೀಕರು ತಿರಸ್ಕಾರಕ್ಕೆ ಒಳಗಾಗುತ್ತಿದ್ದು ಅತ್ಯಂತ ಶ್ರೀಮಂತರು ಸಹ ಹಿರಿಯ ನಾಗರೀಕರನ್ನು ವೃದ್ಧಾಶ್ರಮಗಳ ಬಳಿ ಬಿಟ್ಟು ಹೋಗುವ ಮನಕಲಕುವಂತಹ ಉದಾಹರಣೆಗಳು ಸಾಕಷ್ಟು ಸಿಗುತ್ತಿವೆ. ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿಗಾಗಿ ಸರಕಾರಗಳು ಹಿರಿಯ ನಾಗರೀಕರ ಪಾಲನ-ಪೋಷಣ ಕಾಯ್ದೆ 2007 ರಲ್ಲಿ ಜಾರಿಗೊಳಿಸಿದೆ ಹಾಗೂ ಹಿರಿಯ ನಾಗರೀಕರಿಗಾಗಿ ಉಚಿತ ಸಹಾಯವಾಣಿ 9090 ಜಾರಿಯಲ್ಲಿದ್ದು ಸರ್ಕಾರ, ಸಮಾಜ ಹಾಗೂ ಎಲ್ಲಾ ಜನರು ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸಬೇಕು. ಅವರನ್ನು ಪೂಜ್ಯಭಾವದಿಂದ ಕಾಣುವುದು ಭಾರತೀಯ ಸಂಸ್ಕೃತಿಯ ಪರಂಪರೆಯಾಗಿದೆ ಎಂದು ತಿಳಿಸಿದರು.  ಹಿರಿಯರನ್ನು ಸೂಕ್ತ ಆಪ್ತ ಸಮಾಲೋಚನೆ, ಸಾಮಾಜಿಕ ಸಂಪರ್ಕ, ಆರ್ಥಿಕವಾಗಿ ಅವರನ್ನು ಸಬಲೀಕರಗೊಳಿಸಿದರೆ ಇಂತಹ ಕಾರ್ಯಕ್ರಮಗಳು ನೆರವಾಗಬಲ್ಲದೆಂದು ತಿಳಿಸಿದರು.

ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಶ್ರೀ ಸಂಗಪ್ಪ ಕಾಂಬಳೆ, ವಯಸ್ಸು ಮತ್ತು ವಯೋಮಾನದ ಸೂಕ್ತ ನಿರ್ವಹಣೆ ಪಿಡುಗನ್ನು ಬದಲಾಯಿಸಬಹುದೇ? ಎಂಬ ಘೋಷವಾಕ್ಯದೊಂದಿಗೆ ಈ ವರ್ಷದ ಹಿರಿಯ ನಾಗರೀಕರ ದಿನಾಚರಣೆ ಆಚರಿಸಲಾಗುತ್ತಿದೆ. ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿಗಾಗಿ ಇಲಾಖೆಯಲ್ಲಿ ವಯೋವೃದ್ಧರ ಆರೋಗ್ಯ ಆರೈಕೆ (ಜರಿಯಾಟ್ರಿಕ್ ಹೆಲ್ತ ಕೇರ್) ಎಂಬ ಕಾರ್ಯಕ್ರಮವಿದ್ದು ಹಿರಿಯ ನಾಗರೀಕರಿಗಾಗಿ ಉಚಿತ ನೇತ್ರ ಚಿಕಿತ್ಸೆ, ಶ್ರವಣದೋಷ ನಿಯಂತ್ರಿಸಲು ಉಪಕರಣಗಳನ್ನು ಕೊಡುವುದು ಇತ್ಯಾದಿ ಕಾರ್ಯಕ್ರಗಳಿವೆ ಎಂದು ವಿವರಿಸಿದರು.
ಗಮನ ಸೆಳೆದ ಜಾನಪದ ಗೀತೆಗಳು: ಕರ್ಮಭೂಮಿ ಜಾನಪದ ಕಲಾತಂಡದ ನಾಯಕರಾದ ಶಂಕರ ಚೊಂಡೆ ಅವರ ಜಾನಪದ ಗೀತೆಯೊಂದಿಗೆ ಮತ್ತು ಹಿರಿಯ ನಾಗರಿಕರಿಂದಲೇ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ್ದುದು ವಿಶೇಷವಾಗಿತ್ತು. ಕಲಾವಿದ ಶಂಕರ ಚೊಂಡೆ ಅವರು ತಮ್ಮ ವಿಶೇಷ ಕಂಠಸಿರಿಯಿAದ ಜಾನಪದ ಹಾಡುಗಳನ್ನು ಹೇಳಿ ಜಾಗೃತಿ ಮೂಡಿಸಿದರು.
ಹಿರಿಯರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುತ್ತ ಸರಕಾರಿ ಹಾಗೂ ಸ್ವಯಂ ಸೇವಾ ಸಂಸ್ಥೆಯವರಾದ ಡಾ.ಬಿ.ಆರ್. ಅಂಬೇಡ್ಕರ್ ವೃದ್ಧಾಶ್ರಮದ ಮುಖ್ಯಸ್ಥರಾದ ಶ್ರೀ ಅನೀಲ ಬೆಲ್ದಾರ, ಮದರ್ ತೆರೆಸಾ ಸಂಸ್ಥೆಯ ರವಿ ಜೋಸೆಫ್ ಹಾಗೂ ಕೋವಿಡ್-19 ಗೆದ್ದ ಹಿರಿಯ ನಾಗರೀಕರಾದ ಆನಂದರಾವ್ ಪಾಟೀಲ ಹಾಗೂ ಇತರೆ ಹಿರಿಯ ನಾಗರೀಕರಾದ ನಿವೃತ್ತ ಶಿಕ್ಷಕರಾದ ವಿರಶೆಟ್ಟಿ, ನಿವೃತ್ತ ಆರೋಗ್ಯ ಇಲಾಖೆ ಸಿಬ್ಬಂದಿ ಇಸಾಕ ಅವರನ್ನು ಇದೆ ವೇಳೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕಿÈಷ್ಣರೆಡ್ಡಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಶಂಕರ.ಬಿ, ಡಾ.ರಾಜಶೇಖರ ಪಾಟೀಲ ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿಗಳು, ಡಾ.ರವೀಂದ್ರ ಸಿರಸಗಿ ಜಿಲ್ಲಾ ಆರ್.ಸಿ.ಎಚ್. ಅಧಿಕಾರಿಗಳು, ಶ್ರಾವಣ ಜಾಧವ ಉಪ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿಗಳು, ಅನುಸೂಯಾ ಸಹಾಯಕ ಆಡಳಿತ ಅಧಿಕಾರಿಗಳು, ಓಂಕಾರ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿಗಳು, ಚಂದ್ರಕಾAತ ಪಾಟೀಲ ಕಚೇರಿ ಅಧೀಕ್ಷಕರು ಹಾಗೂ ಕಚೇರಿಯ ಸಿಬ್ಬಂದಿ ವರ್ಗದವರು ಕಾರ್ಯಕ್ರದಲ್ಲಿ ಉಪಸ್ಥಿತರಿದ್ದರು.

No comments:

Post Top Ad