ಕೋವಿಡ್-19 ನಿಯಂತ್ರಣಕ್ಕೆ ಮಾಸ್ಕೇ ಔಷಧಿ: ರಾಮಚಂದ್ರನ್ ಆರ್
ಬೀದರ ಅಕ್ಟೋಬರ್ 1 (ಕರ್ನಾಟಕ ವಾರ್ತೆ): ಮಾನವನಿಗೆ ಮಹಾಮಾರಿಯಾಗಿ ಕಾಡುತ್ತಿರುವ ಕೊರೋನಾ ವೈರಸ್‌ದಿಂದ ದೂರವಿರಲು ಮಾಸ್ಕ ಧರಿಸುವುದೊಂದೇ ಸುಲಭ ಮಾರ್ಗ. ಕೋವಿಡ್-19 ತಡೆಯಲು ಮಾಸ್ಕ ಔಷಧಿ ಇದ್ದಂತೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ.
ಕೋವಿಡ್-19ಗೆ ಔಷಧಿ ಪ್ರಯೋಗ ಯಶಸ್ವಿಯಾಗುವ ಮೊದಲು ಮಾಸ್ಕ ಮಾತ್ರವೇ ಲಭ್ಯವಿರುವ ಅತ್ಯುತ್ತಮ ಲಸಿಕೆಯಾಗಿದೆ. ಕನಿಷ್ಠ ಬೆಲೆಯಲ್ಲಿ ಲಭ್ಯವಾಗುವ ಮಾಸ್ಕ ಧರಿಸಿಕೊಳ್ಳುವುದರಿಂದ ನಾವು ಕೋವಿಡ್-19ರಿಂದ ರಕ್ಷಿಸಿಕೊಳ್ಳಬಹುದಾಗಿದೆ. ಇದಕ್ಕೆ ಜಿಲ್ಲೆಯ ಪ್ರತಿಯೊಬ್ಬರೂ ಕೈಜೋಡಿಸಬೇಕು. ಮಾಸ್ಕ ಯಾರು ಧರಿಸುವುದಿಲ್ಲವೋ ಅಂತಹರನ್ನು ಗುರುತಿಸಿ ಇನ್ನುಂದೆ ದಂಡ ಸಂಗ್ರಹಣೆಯನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಈ ಬಗ್ಗೆ ಪ್ರತಿದಿನ ಜಿಲ್ಲಾಮಟ್ಟದಲ್ಲಿ ಪರಿಶೀಲನೆ ನಡೆಸಲಾಗುತ್ತದೆ.
ನಗರಸಭೆ, ಪಟ್ಟಣ ಪಂಚಾಯತಿ, ಪುರಸಭೆ ಸ್ಥಳೀಯ ಆಡಳಿತದ ಅಧಿಕಾರಿಗಳಿಗೆ ದಂಡ ಸಂಗ್ರಹಣೆಗೆ ಈಗಾಗಲೇ ಸೂಚಿಸಲಾಗಿದೆ. ಸ್ಥಳೀಯ ಆಡಳಿತದಿಂದ ಕಾರ್ಯಾಚರಣೆ ನಡೆಸಿ ಮಾಸ್ಕ ಧರಿಸದೇ ಇರುವವರ ಮೇಲೆ ದಂಡ ವಿದಿಸಿ ಈಗಾಗಲೇ ಎಚ್ಚರಿಕೆ ನೀಡಲಾಗಿದೆ.ಆದಾಗ್ಯೂ ಬಹುತೇಕ ಜನರು ಮಾಸ್ಕ ಧರಿಸದೇ ಸುತ್ತುವುದು ಕಂಡುಬರುತ್ತಿದೆ. ಆದ್ದರಿಂದ ಇನ್ಮುಂದೆ ಪ್ರತಿಯೊಬ್ಬರೂ ಕಡ್ಡಾಯ ಮಾಸ್ಕ ಧರಿಸಬೇಕು. ದಂಡ ವಿಧಿಸಲು ಅವಕಾಶ ಮಾಡಿಕೊಡಬಾರದು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್.ಅವರು ಬೀದರ ಜಿಲ್ಲೆಯ ಜನರಲ್ಲಿ ಮನವಿ ಮಾಡಿದ್ದಾರೆ.



No comments:
Post a Comment