Common in delivering the benefits of Government projects - EYLAAPH E MEDIA

EYLAAPH E MEDIA

EYLAAPH EMEDIA PVT LTD. IS DELIVERING COMMON NEWS TO THE WORLD THROUGH IT'S REPORTERS , NEWS WHICH CONTAINS REALITY. TRUTH WHICH OTHERS NEVER COVER, PLEASE SHARE OUR CHANNEL AND MAKE IT SUBSCRIBED IN YOUR MOBILE TO GET UPDATED ON EVERY NEWS FROM EYLAAPH NEWS.

Eylaaph Breaking update

Post Top Ad

Post Top Ad

Weather

Translate

Monday, September 14, 2020

Common in delivering the benefits of Government projects

ಸರ್ಕಾರಿ ಯೋಜನೆಗಳ ಲಾಭ ತಲುಪಿಸುವಲ್ಲಿ ಸಾಮಾನ್ಯ 
ಸೇವಾ ಕೇಂದ್ರಗಳ ಪಾತ್ರ ಮಹತ್ವದ್ದು: ಭಗವಂತ ಖೂಬಾ

ಬೀದರ ಸೆಪ್ಟೆಂಬರ್ 13 (ಕರ್ನಾಟಕ ವಾರ್ತೆ):-ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ)ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಸಂಸದರಾದ ಭಗವಂತ ಖೂಬಾ ಅವರು ಹೇಳಿದರು.
ನಗರದ ಶ್ರೀ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮAದಿರದಲ್ಲಿ ಸೆ.13ರಂದು ಕಾಮನ್ ಸರ್ವಿಸ್ ಸೆಂಟರನ ಗ್ರಾಮಮಟ್ಟದ ಎಂಟರಪ್ರೆöÊನರ್ ಅವರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾರು ಗಮನಕೊಟ್ಟು ಕೆಲಸ ಮಾಡುತ್ತಾರೋ ಅಂತವರಿಗೆ ಮಾರ್ಗದರ್ಶನ ಮತ್ತು ಸಹಕಾರ ನೀಡಿ ಇದನ್ನು ದೊಡ್ಡ ಪ್ರಮಾಣದಲ್ಲಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಯೋಜಿಸಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಆರ್ಥಿಕ ಸ್ಥಿತಿ ಪ್ರಗತಿ ಸಾಧಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ರೂಪಿಸಿವೆ. ತಾವುಗಳು ಕಾಮನ್ ಸರ್ವೀಸ್ ಸೆಂಟರಗಳ ಮೂಲಕ ಸಿಎಲ್‌ಇಗಳಾಗಿ ಜನತೆಗೆ ಯೋಜನೆಗಳನ್ನು ಮುಟ್ಟಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದೀರಿ ಎಂದು ಸಂಸದರು ಇದೆ ವೇಳೆಯಲ್ಲಿ ಸಿಎಸ್‌ಸಿಗಳ ಕಾರ್ಯವೈಖರಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
2021ರ ಜನವರಿಯೊಳಗೆ 15 ಲಕ್ಷ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡುಗಳನ್ನು ಜನತೆಗೆ ವಿತರಿಸುವಂತೆ ಗುರಿ ಹಾಕಿಕೊಳ್ಳಬೇಕು ಎಂದು ಇದೆ ವೇಳೆ ಸಂಸದರು ಸಲಹೆ ಮಾಡಿದರು.
ಇದಕ್ಕು ಮೊದಲು ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ.ರೆಡ್ಡಿ., ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಕಲಬುರಗಿ ವಿಭಾಗದ ಸಮಾಲೋಚಕ ಡಾ.ಶಂಕರರಾವ್ ದೇಶಮುಖ, ಜಿಲ್ಲಾ ಸೇವಾ ಸಿಂಧು ಯೋಜನೆಯ ಯೋಜನಾಧಿಕಾರಿ ಸತೀಶ ವಾಲಿ, ಕಾಮನ್ ಸರ್ವೀಸ್ ಸೆಂಟರನ ಜಿಲ್ಲಾ ವ್ಯವಸ್ಥಾಪಕ ಸಚೀನ್ ಉಪ್ಪೆ ಹಾಗೂ ಇತರರು ಉಪಸ್ಥಿತರಿದ್ದರು.
ಸಂವಾದ: ಸಮಾರಂಭದಲ್ಲಿ ಸಿಎಲ್‌ಇಗಳೊಂದಿಗೆ ಸಂಸದರು ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಭಾಲ್ಕಿ ತಾಲೂಕಿನ ಸಂಗಮೇಶ ಅವರು, ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ಆಧಾರ್ ಕಾರ್ಡು ಅಪಡೇಟ್ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ವಿನಂತಿಸಿದರು. ಆರೋಗ್ಯ ಕಾರ್ಡುಗಳನ್ನು ಪಡಿತರ ವಿತರಣಾ ಕೇಂದ್ರಗಳ ಜಂಟಿ ಸಹಯೋಗದೊಂದಿಗೆ ವಿತರಿಸಿದರೆ ಶೇ.100 ಸಾಧನೆ ಸಾಧ್ಯವಾಗುತ್ತದೆ ಎಂದು ಬಸವಕಲ್ಯಾಣದ ಅಂಬಾರಾಯ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಆಹಾರ ಇಲಾಖೆಯ ಉಪ ನಿರ್ದೇಶಕರ ಜೊತೆಗೆ ಚರ್ಚೆ ನಡೆಸಿ ತಮ್ಮ ಸಲಹೆಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದರು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಿಎಸ್‌ಇದಿಂದ ನೋಂದಾಯಿಸಿ ತಹಸೀಲ್ ಕಚೇರಿಗೆ ಕಳುಹಿಸಿದರೆ ಅವರು ತಿರಸ್ಕರಿಸುತ್ತಿದ್ದು, ಇದರಿಂದ ಜನರಿಗೆ ಸಾಕಷ್ಟು ಕಿರಿಕಿರಿಯಾಗುತ್ತಿದೆ. ಈ ಬಗ್ಗೆ ತಹಸೀಲ್ದಾರರಿಗೆ ಸೂಕ್ತ ನಿರ್ದೇಶನ ನೀಡಲು ಜನವಾಡದ ಸಂಗಮೇಶ ಅವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ರೈತರಿಗೆ ಬೇಕಾಗುವಂತಹ ಪಹಣಿ ಮತ್ತು ಹಿಡುವಳಿ ಪತ್ರಗಳನ್ನು ಸಿಎಸ್‌ಸಿಗಳಿಂದಲೇ ಸಿಗುವಂತೆ ಕ್ರಮವಹಿಸಬೇಕು ಎಂದು ಹುಮಾನಾಬಾದ್ ತಾಲೂಕಿನ ವಿರೇಶ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಗ್ರಾಮೀಣ ಮಟ್ಟದಲ್ಲಿ ಸಿಎಸ್‌ಸಿಗಳು ಕೆಲಸ ನಿರ್ವಹಿಸಲು ನೆಟ್‌ವರ್ಕ್ ಲಭ್ಯವಿರದೇ ತೊಂದರೆ ಎದುರಿಸುತ್ತಿದ್ಧಾರೆ. ಆದ್ದರಿಂದ ವೈಫೈ ಚೌಪಲ್‌ಗಳನ್ನು ಅತೀ ಶೀಘ್ರದಲ್ಲಿ ಪ್ರತಿಯೊಂದು ಹಳ್ಳಿಗಳಿಗೆ ನೀಡಲು ಔರಾದ್ ತಾಲೂಕಿನ ಸುಲೇಮಾನ್ ಅವರು ಸಂಸದರಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಂಸದರಾದ ಖೂಬಾ ಅವರು, ಬಿಎಸ್‌ಎನ್‌ಎಲ್‌ನ ಜಿಲ್ಲಾ ಪ್ರಬಂಧಕರೊAದಿಗೆ ಚರ್ಚಿಸಿ ಇದಕ್ಕೆ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಸಿಎಲ್‌ಸಿಗಳಿಗೆ ಸನ್ಮಾನ ಗೌರವ: ಇದಕ್ಕೂ ಮೊದಲು ಒಳ್ಳೆಯ ಸೇವೆ ಸಲ್ಲಿಸುತ್ತಿರುವ ಸಿಎಲ್‌ಇಗಳನ್ನು ಸಂಸದರು ಹಾಗೂ ಜಿಲ್ಲಾಧಿಕಾರಿಗಳು ಇದೆ ವೇಳೆ ಸನ್ಮಾನಿಸಿ ಗೌರವಿಸಿದರು.
____________________________________________







No comments:

Post Top Ad