ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಭೂಮಿ ಪೂಜೆ - EYLAAPH E MEDIA

EYLAAPH E MEDIA

EYLAAPH EMEDIA PVT LTD. IS DELIVERING COMMON NEWS TO THE WORLD THROUGH IT'S REPORTERS , NEWS WHICH CONTAINS REALITY. TRUTH WHICH OTHERS NEVER COVER, PLEASE SHARE OUR CHANNEL AND MAKE IT SUBSCRIBED IN YOUR MOBILE TO GET UPDATED ON EVERY NEWS FROM EYLAAPH NEWS.

Eylaaph Breaking update

Post Top Ad

Post Top Ad

Weather

Translate

Wednesday, September 9, 2020

ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಭೂಮಿ ಪೂಜೆ

ಪಶುಪಾಲನಾ ಇಲಾಖೆಯ ಸಹಾಯಕ
ನಿರ್ದೇಶಕರ ಕಚೇರಿಗೆ ಭೂಮಿ ಪೂಜೆ


ಬೀದರ ಸೆಪ್ಟೆಂಬರ್ 08 (ಕರ್ನಾಟಕ ವಾರ್ತೆ):-ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಬೀದರ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿಗೆ ಶಾಸಕರಾದ ರಹೀಂ ಖಾನ್ ಅವರು ಸೆ.8ರಂದು ಜನವಾಡ ರಸ್ತೆಯಲ್ಲಿನ ಪಶುಪಾಲನಾ ಇಲಾಖೆಯ ಕಚೇರಿ ಆವರಣದಲ್ಲಿ ಭೂಮಿ ಪೂಜೆ ನೆರವೇರಿಸಿದರು.
ಸದರಿ ಕಚೇರಿಯ ನಿರ್ಮಾಣ ಕಾರ್ಯವನ್ನು ಕೇಂದ್ರ ಸರ್ಕಾರದ ಆರ್‌ಐಡಿಎಫ್ ಯೋಜನೆಯಡಿಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಕೈಗೊಳ್ಳಲಾಗಿದ್ದು, ನಿರ್ಮಾಣ ಕಾರ್ಯವನ್ನು ನ್ಯಾಷನಲ್ ಪ್ರೊಜೆಕ್ಟ್ ಕನಸ್ಟçಕನ್ ಕಾರ್ಪೋರೇಷನ್ ಬೆಂಗಳೂರು ಇವರಿಗೆ ವಹಿಸಲಾಗಿದೆ ಎಂದು ಇದೆ ವೇಳೆ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಮಲ್ಲಿಕಾರ್ಜುನ ಹಂಚನಾಳ ಅವರು ಶಾಸಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ರವೀಂದ್ರಕುಮಾರ ಭೂರೆ, ಆಡಳಿತ ಸಹಾಯಕ ನಿರ್ದೇಶಕರಾದ ಡಾ.ಗೌತಮ್ ಅರಳಿ, ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಡಾ.ಯೋಗೇಂದ್ರ ಕುಲಕರ್ಣಿ, ಪಾಲಿಕ್ಲಿನಿಕ್‌ನ ತಜ್ಞ ಪಶುವೈದ್ಯರಾದ ಡಾ.ಬಸವರಾಜ ನಿಟ್ಟೂರೆ, ಸಹಾಯಕ ಆಡಳಿತ ಅಧಿಕಾರಿಗಳಾದ ಸಿದ್ದಪ್ಪ ಪಾಟೀಲ್, ಎನ್‌ಪಿಸಿಸಿ ಅಭಿಯಂತರರಾದ  ಬಿ.ಎಸ್. ಪಾಟೀಲ್ ಹಾಗೂ ಇಲಾಖೆಯ ಇತರೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.


No comments:

Post Top Ad