Bidar Deputy commissioner visits Kamalnagar Bidar, - EYLAAPH E MEDIA

EYLAAPH E MEDIA

EYLAAPH EMEDIA PVT LTD. IS DELIVERING COMMON NEWS TO THE WORLD THROUGH IT'S REPORTERS , NEWS WHICH CONTAINS REALITY. TRUTH WHICH OTHERS NEVER COVER, PLEASE SHARE OUR CHANNEL AND MAKE IT SUBSCRIBED IN YOUR MOBILE TO GET UPDATED ON EVERY NEWS FROM EYLAAPH NEWS.

Eylaaph Breaking update

Post Top Ad

Post Top Ad

Weather

Translate

Wednesday, September 16, 2020

Bidar Deputy commissioner visits Kamalnagar Bidar,

 ಅತಿವೃಷ್ಠಿ: ಕಮಲನಗರ ಗಂಜಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳ ಭೇಟಿ

ಬೀದರ ಸೆಪ್ಟೆಂಬರ್ 16 (ಕರ್ನಾಟಕ ವಾರ್ತೆ):- ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಸೆ.16ರಂದು ಕಮಲನಗರ ತಾಲೂಕಿನಲ್ಲಿ ಸಂಚರಿಸಿ ಅತಿವೃಷ್ಠಿಯಿಂದಾದ ಹಾನಿಯನ್ನು ಖುದ್ದು ವೀಕ್ಷಣೆ ನಡೆಸಿದರು.
ಅತಿವೃಷ್ಠಿ ಹಿನ್ನೆಲೆಯಲ್ಲಿ ಕಮಲನಗರ ಪಟ್ಟಣದಲ್ಲಿ ಬಿಸಿಎಂ ಹಾಸ್ಟೇಲನಲ್ಲಿ ತೆರೆದ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು.
ಮಳೆಯಿಂದಾಗಿ ಜನತೆಗೆ ಯಾವುದೇ ರೀತಿಯ ತೊಂದರೆಯಾಗದAತೆ ನೋಡಿಕೊಳ್ಳಬೇಕು. ಗಂಜಿ ಕೇಂದ್ರದಲ್ಲಿರುವವರಿಗೆ ಸರಿಯಾದ ರೀತಿಯಲ್ಲಿ ಊಟ ಮತ್ತು ಇನ್ನೀತರ ಎಲ್ಲಾ ವ್ಯವಸ್ಥೆ ಕಲ್ಪಿಸಲು ಒತ್ತು ಕೊಡಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಕಮಲನಗರ ತಹಸೀಲ್ದಾರ ರಮೇಶ ಪೆದ್ದೆ, ಔರಾದ್ ತಾಪಂ ಇಓ ಮಾಣಿಕರಾವ್ ಪಾಟೀಲ ಮತ್ತು ಪಿಡಿಓ ಕುಲಕರ್ಣಿ ಅವರಿಗೆ ನಿರ್ದೇಶನ ನೀಡಿದರು.

ಅತಿಯಾಗಿ ಮಳೆ ಸುರಿದ ಕಾರಣ ಕಮಲನಗರ ಪಟ್ಟಣದ ವಾರ್ಡ ನಂಬರ್ 1 ಮತ್ತು 2ರ ಪ್ರದೇಶದಲ್ಲಿನ ಮನೆಗಳು ನೀರಲ್ಲಿ ನಿಂತಿರುವುದನ್ನು ಕಮಲನಗರ ಸಿಪಿಐ ಪಾಲಾಕ್ಷಯ್ಯ ಹಿರೇಮಠ ಅವರು ಜಿಲ್ಲಾಧಿಕಾರಿಗಳಿಗೆ ತೋರಿಸಿದರು.
ಮಳೆಯಿಂದಾದ ಹಾನಿಗೆ ಸಮರ್ಪಕವಾಗಿ ಪರಿಹಾರ ಕಲ್ಪಿಸಲಾಗುವುದು. ಮನೆಹಾನಿಗೆ ಕೂಡ ಸರಿಯಾದ ರೀತಿಯಲ್ಲಿ ಪರಿಹಾರ ಒದಗಿಸಲು ಕ್ರಮ ವಹಿಸುವುದಾಗಿ ತಿಳಿಸಿ ಜಿಲ್ಲಾಧಿಕಾರಿಗಳು ಅಲ್ಲಿನ ಜನರಲ್ಲಿ ಧೈರ್ಯ ತುಂಬಿದರು. 

ವಿಪರೀತ ಮಳೆ: ಬಿರುಸಿನ ಸಂಚಾರ ನಡೆಸಿ 
ಸೇತುವೆ ಹಾನಿ ಖುದ್ದು ಪರಿಶೀಲಿಸಿದ ಜಿಲ್ಲಾಧಿಕಾರಿಗಳು 
ಬೀದರ ಸೆಪ್ಟೆಂಬರ್ 16 (ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ವಿಪರೀತ ಮಳೆ ಬೀಳುತ್ತಿದೆ.  ಈ ಹಿನ್ನೆಲೆಯಲ್ಲಿ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ರಸ್ತೆಗಳು, ಸೇತುವೆಗಳು ಹಾನಿಗೀಡಾಗಿವೆ ಎನ್ನುವ ಮಾಹಿತಿ ಬರುತ್ತಿದ್ದಂತೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಸೆ.16ರಂದು ಕೂಡ  ಜಿಲ್ಲೆಯ ನಾನಾ ಕಡೆಗಳಲ್ಲಿ ಭೇಟಿ ನೀಡಿ ಹಾನಿಯನ್ನು ಖುದ್ದು ವೀಕ್ಷಣೆ ನಡೆಸಿದರು.
ಮಳೆಯಿಂದಾಗಿ ಹಾನಿಗೊಳಗಾದ ಕಮಲನಗರ ತಾಲೂಕಿನ ಬೆಳಕುಣಿ (ಬಿ)-ಬಪ್ಪಳಗಡ ಸೇತುವೆ, ಕಮಲನಗರ-ಔರಾದ್ ರಸ್ತೆಯ ಮಧ್ಯೆದ ಸೇತುವೆ ಮತ್ತು ಔರಾದ್ ತಾಲೂಕಿನ ಕೌಠಾ ಸೇತುವೆಯ ಸ್ಥಳಗಳಿಗೆ ಜಿಲ್ಲಾಧಿಕಾರಿಗಳು ಸೆ.16ರಂದು ಖುದ್ದು ಭೇಟಿ ನೀಡಿ ಹಾನಿಯ ವೀಕ್ಷಣೆ ನಡೆಸಿದರು.
ಸೇತುವೆಗಳ ಹಾನಿಯ ಬಗ್ಗೆ ಕೂಡಲೇ ಜಿಲ್ಲಾಡಳಿತಕ್ಕೆ ವರದಿ ಮಾಡಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ತಹಸೀಲ್ದಾರರಾದ ಚಂದ್ರಶೇಖರ ಅವರಿಗೆ ಸೂಚಿಸಿದರು. ಈ ವೇಳೆ ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು. 


No comments:

Post Top Ad