ಕಲ್ಯಾಣ ಕರ್ನಾಟಕ ವಿಮೋಚನಾ ಹೋರಾಟಗಾರರ
ತ್ಯಾಗ ಸ್ಮರಣೀಯ: ರಾಮಚಂದ್ರನ್ ಆರ್ಬೀದರ ಸೆಪ್ಟೆಂಬರ್ 17 (ಕರ್ನಾಟಕ ವಾರ್ತೆ):- ಕಲ್ಯಾಣ ಕರ್ನಾಟಕ ವಿಮೋಚನಾ ಚಳುವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ ಅನೇಕ ಹಿರಿಯರ ತ್ಯಾಗ, ಬಲಿದಾನ ಸ್ಮರಣೀಯ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದರು.ಮಂಗಲಪೇಟದ ಪೊಲೀಸ್ ಪರೇಡ್ ಮೈದಾನದಲ್ಲಿ ಸೆ.17ರಂದು ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಬಳಿಕ ಮಾತನಾಡಿದ ಅವರು, ಸ್ವಾಮಿ ರಮಾನಂದ ತೀರ್ಥ ಅವರ ನೇತೃತ್ವದಲ್ಲಿ ಹೈದರಾಬಾದ ಕರ್ನಾಟಕ ವಿಮೋಚನೆಗೆ ಹೋರಾಟ ನಡೆಸಿದ ಅನೇಕ ಮಹನೀಯರು ಹೋರಾಟ, ಅವರ ಅರ್ಪಣಾ ಮನೋಭಾವ ಹಾಗೂ ಸರ್ದಾರ ವಲ್ಲಭಭಾಯಿ ಪಟೇಲರ ಉಕ್ಕಿನ ನಿರ್ಧಾರದಿಂದಾಗಿ ಈ ಭಾಗ ಸಂಪೂರ್ಣ ಸ್ವತಂತ್ರವಾಯಿತು. ಜಿಲ್ಲೆಯ ಹೋರಾಟಗಾರರ ಸ್ಫೂರ್ತಿ ಇಂದಿನ ಪೀಳಿಗೆಗೆ ಪ್ರೇರಣಾದಾಯಕವಾಗಿದೆ ಎಂದರು.ಭಾರತವು ಹಲವು ಭಾಷೆ, ಸಂಸ್ಕೃತಿಯ ನಾಡು. ಬ್ರಿಟಿಷರ ಕಪಿಮುಷ್ಠಿಯಿಂದ ಬಿಡಿಸಿಕೊಳ್ಳಲು ಭಾರತಿಯರು ಶತಮಾನಗಳ ಸುಧೀರ್ಘ ಹೋರಾಟ ನಡೆಸಿ 1947 ಆಗಸ್ಟ್ 15 ರಂದು ಈ ದೇಶಕ್ಕೆ ಸ್ವಾತಂತ್ರö್ಯ ಸಿಕ್ಕರೂ ಕಲ್ಯಾಣ ಕರ್ನಾಟಕದ ಈ ಭಾಗಕ್ಕೆ ಆ ಸ್ವಾತಂತ್ರö್ಯ ಭಾಗ್ಯ ಸಿಗಲಿಲ್ಲ. ಸರ್ವ ಸಂಸ್ಥಾನಿಕರು ಭಾರತದ ಒಕ್ಕೂಟದಲ್ಲಿ ವಿಲೀನಗೊಳ್ಳಲು ಒಪ್ಪಿದರೂ, ಹೈದ್ರಾಬಾದ ಸಂಸ್ಥಾನದ ರಾಜರು ಇದಕ್ಕೆ ಒಪ್ಪಲಿಲ್ಲ. ವಿಮುಕ್ತಿಗಾಗಿ ಚಳುವಳಿ ಆರಂಭಗೊAಡಿತು. ಆ ನಡುವೆ ರಜಾಕಾರರ ಹಾವಳಿ ಅತಿಯಾಗಿ ಹೈದ್ರಾಬಾದ ರಾಜ್ಯದಲ್ಲಿ ಅಶಾಂತಿ ಕದಡಿತು. ಈ ವಿಷಯವನ್ನು ಭಾರತ ಸರ್ಕಾರವು ಹೈದ್ರಾಬಾದ್ ಸಂಸ್ಥಾನದ ಅರಸರ ಗಮನಕ್ಕೆ ತಂದಿತ್ತಾದರೂ ಯಾವುದೇ ಕ್ರಮ ಜರುಗಿಸಲಿಲ್ಲ. ಈ ಕಾರಣದಿಂದಾಗಿ ಭಾರತ ಸರ್ಕಾರವು ಅನಿವಾರ್ಯವಾಗಿ ಪೊಲೀಸ್ ಕಾರ್ಯಾಚರಣೆ ಪ್ರಾರಂಭಿಸಿತು. ಭಾರತದ ಸೇನೆಯು ಹೈದರಾಬಾದ್ ಸಮೀಪಿಸುತ್ತಿದ್ದಂತೆ ಹೈದ್ರಾಬಾದ್ ಸಂಸ್ಥಾನದ ಅರಸು ಪರಿಸ್ಥಿತಿಯ ಗಂಭೀರತೆ ಅರಿತು 17ನೇ ಸೆಪ್ಟೆಂಬರ್ 1948ರಂದು ಭಾರತ ಒಕ್ಕೂಟ ಸೇರುವುದಾಗಿ ಘೋಷಿಸಿದರು. ಅಂದು ಹೈದರಾಬಾದ್ ರಾಜ್ಯದ ಆಡಳಿತದಿಂದ ಜನರು ವಿಮುಕ್ತರಾದರು. ಈ ಪ್ರಾಂತ್ಯವನ್ನು ಭಾರತದ ಒಕ್ಕೂಟಕ್ಕೆ ಸೇರಿಸಲು ಈ ದೇಶದ ಮೊದಲ ಉಪ ಪ್ರಧಾನಿ ಹಾಗೂ ಗೃಹ ಸಚಿವರಾಗಿದ್ದ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ ಅವರು ದಿಟ್ಟ ತನದಿಂದ ಪೊಲೀಸ್ ಕಾರ್ಯಾಚರಣೆ ಕೈಗೊಂಡದ್ದನ್ನು ನಾವಂದು ಸ್ಮರಿಸಬೇಕಿದೆ ಎಂದು ತಿಳಿಸಿದರು.
ಭವ್ಯ ಪರಂಪರೆಯ ಜಿಲ್ಲೆ: ಭವ್ಯ ಪರಂಪರೆ ಹೊಂದಿದ ಬೀದರ ಜಿಲ್ಲೆಯು ಅಭಿವೃದ್ಧಿ ಪಥದತ್ತ ಸಾಗಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಉತ್ತಮ ದೂರದೃಷ್ಟಿ, ಕನಸು, ಬದ್ಧತೆ ಹೊಂದಲು ಮತ್ತೊಮ್ಮೆ ಸಂಕಲ್ಪ ಮಾಡಬೇಕಿದೆ. ಕಲ್ಯಾಣ ಎನ್ನುವ ಪದವೇ ಅಭಿವೃದ್ಧಿ ಮತ್ತು ಪ್ರಗತಿಯ ಸೂಚಕವಾಗಿದೆ. ಈ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಪಾಲ್ಗೊಂಡ ನಾವುಗಳು ಸದಾಕಾಲ ಅಭಿವೃದ್ಧಿ ಮತ್ತು ಪ್ರಗತಿ ಪಥದತ್ತ ಯೋಚಿಸೋಣ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜನರ ಪಾಲ್ಗೊಳ್ಳುವಿಕೆ ಅವಶ್ಯ: ರಾಷ್ಟಪೀತ ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ ಹಾಗೂ ಎಲ್ಲ ಸ್ವಾತಂತ್ರö್ಯ ಹೋರಾಟಗಾರರ ಸ್ಮರಣೆ ಅಗತ್ಯ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಸರ್ಕಾರದ ಯಾವುದೇ ಯೋಜನೆಗಳು ಯಶಸ್ಸು ಆಗಬೇಕಾದರೆ ಜನರ ಪಾಲ್ಗೊಳ್ಳುವಿಕೆ ಮತ್ತು ಸಹಭಾಗೀತ್ವ ಅವಶ್ಯ. ಆದ್ದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣಕ್ಕಾಗಿ ನಾವೆಲ್ಲರೂ ಕೈಜೋಡಿಸಲು ತಮ್ಮೆಲ್ಲರಲ್ಲಿ ಕೋರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಚಿವರ ಸಂದೇಶ ತಿಳಿಸಿದ ಜಿಲ್ಲಾಧಿಕಾರಿಗಳು: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಸಂದೇಶ ಆರಂಭಿಸುವ ಮೊದಲು ಜಿಲ್ಲಾಧಿಕಾರಿಗಳು, ಕೋವಿಡ್-19 ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾಗಿ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವರ ಪರವಾಗಿ ಜಿಲ್ಲೆಯ ಸಮಸ್ತ ಜನರಿಗೆ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. ಕಲ್ಯಾಣ ಕರ್ನಾಟಕದ ಪ್ರದೇಶಗಳು ನಿಜಾಮ ಆಡಳಿತದ ಭಾಗವಾಗಿದ್ದರಿಂದ ಒಂದು ವರ್ಷ ತಡವಾಗಿ ಈ ಭಾಗವು ಭಾರತ ಒಕ್ಕೂಟ ಸೇರಿ ನಿಜಾಮ ಸರಕಾರದಿಂದ ಮುಕ್ತಿ ಪಡೆಯುವಂತಾಯಿತು. ಆ ದಿನದ ಸವಿನೆನಪೆ ಕಲ್ಯಾಣ ಕರ್ನಾಟಕ ಉತ್ಸವ ಎಂದು ಈ ದಿನದ ಮಹತ್ವವನ್ನು ಸಚಿವರು ನೆನಪಿಸಿದ್ದಾರೆ ಎಂದು ಸಚಿವರ ಸಂದೇಶವನ್ನು ಜಿಲ್ಲಾಧಿಕಾರಿಗಳು ಇದೆ ವೇಳೆ ತಿಳಿಸಿದರು.
ಸಮಾರಂಭದಲ್ಲಿ ಶಾಸಕರಾದ ರಹೀಂ ಖಾನ್ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ, ಶಾಸಕರಾದ ಬಂಡೆಪ್ಪ ಖಾಶೆಂಪೂರ, ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಲಕ್ಷö್ಮಣರಾವ್ ಬುಳ್ಳಾ, ತಾಲೂಕು ಪಂಚಾಯತ್ ಅಧ್ಯಕ್ಷರಾದ ವಿಜಯಕುಮಾರ ರಾಮುಲು ಬರೂರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ ಸಹಾಯಕ ಆಯುಕ್ತರಾದ ಗರೀಮಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಎಂ.ಬ್ಯಾಕೋಡ್ ಹಾಗೂ ಇತರರು ಉಪಸ್ಥಿತರಿದ್ದರು. ಚೆನ್ನಬಸವ ಹೆಡೆ ನಿರೂಪಿಸಿದರು.

No comments:
Post a Comment