ಮಣ್ಣಿನಿಂದ ತಯಾರಿಸಿದ ಗಣೇಶಮೂರ್ತಿಗಳನ್ನು
ಪ್ರತಿಷ್ಠಾಪಿಸಲು ಸಾರ್ವಜನಿಕರಲ್ಲಿ ಡಿಸಿ, ಎಸ್ಪಿ ಮನವಿ
ಬೀದರ ಆಗಸ್ಟ್ 19 (ಕರ್ನಾಟಕ ವಾರ್ತೆ): ಮಣ್ಣಿನಿಂದ ತಯಾರಿಸಿದ ಗಣೇಶಮೂರ್ತಿಗಳನ್ನು ಬೀದರ ಜಿಲ್ಲೆಯಾದ್ಯಂತ ಎಲ್ಲಾ ಕಡೆಗಳಲ್ಲಿ ಪ್ರತಿಷ್ಠಾಪಿಸುವ ಮೂಲಕ ಪರಿಸರದ ಸುರಕ್ಷತೆಗೆ ಒತ್ತು ಕೊಡಬೇಕು. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ಆದೇಶಗಳ ಪಾಲನೆ ಮಾಡಿ ಸಾಂಕ್ರಾಮಿಕ ಕೋರೋನಾ ವೈರಸ್ ಇತರರಿಗೆ ಹರಡದಂತೆ ಹಬ್ಬದ ಸಂಭ್ರಮದಲ್ಲಿ ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್. ಹಾಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್. ಅವರು ಸಲಹೆ ಮಾಡಿದರು.
ಗಣೇಶೋತ್ಸವ ಮತ್ತು ಮೋಹರಂ ಆಚರಣೆಗೆ ಸಂಬAಧಿಸಿದAತೆ ಆಗಸ್ಟ್ 19ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಪರಿಸರ ಹಿತದೃಷ್ಟಿಯಿಂದ ಮತ್ತು ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಸಂಬAಧ ಪಿಓಪಿ ಗಣೇಶ ಮೂರ್ತಿಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಪ್ರತಿಯೊಬ್ಬರೂ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದಲ್ಲಿ ಜಿಲ್ಲೆಯ ಒಳಗಡೆ ಪಿಓಪಿ ಮೂರ್ತಿಗಳು ಬರುವುದಿಲ್ಲ. ನಿಷೇಧಿತ ಪಿಓಪಿ ಗಣೇಶ ಮೂರ್ತಿಗಳ ಸಾಗಣೆ ಕಂಡುಬAದರೆ ಜಿಲ್ಲೆಯ ಗಡಿಯಲ್ಲಿಯೇ ಅವುಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.
ಮೋಹರಂ ಹಬ್ಬದ ಆಚರಣೆಗೆ ಸಂಬAಧಿಸಿದAತೆ ಸುತ್ತೋಲೆಯನ್ನು ಓದಿ ಹೇಳಿದ ಜಿಲ್ಲಾಧಿಕಾರಿಗಳು, ಸರ್ಕಾರದ ಮಾರ್ಗಸೂಚಿಯಂತೆಯೇ ಜಿಲ್ಲೆಯಲ್ಲಿ ಮೋಹರಂ ಆಚರಣೆ ನಡೆಯಬೇಕು. ಮಾಸ್ಕ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಮತ್ತು ಸ್ಯಾನಿಟೈಜ್ ಬಳಸುವುದು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.
ಕೋರೋನಾ ವೈರಸ್ ಜಿಲ್ಲೆಯಲ್ಲಿ ಹರಡುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕಲೇಬೇಕಿದೆ. ಯಾವುದೇ ಹಬ್ಬ ಬರಲಿ ಈ ಒಂದು ವರ್ಷದ ಮಟ್ಟಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ಹೊರಡಿಸುವ ನಿಯಮಗಳನ್ನು ಜನರು ಪಾಲನೆ ಮಾಡಬೇಕು ಎಂದು ಮನವಿ ಮಾಡಿದ ಜಿಲ್ಲಾಧಿಕಾರಿಗಳು, ಹಬ್ಬದ ವೇಳೆಯಲ್ಲಿ ನಿಯಮಗಳ ಪಾಲನೆ ಕಷ್ಟ ಅನಿಸಿದರು ಕೂಡ, ಮಕ್ಕಳ ಮತ್ತು ಹಿರಿಯರ ಆರೋಗ್ಯದ ಹಿತದೃಷ್ಟಿಯಿಂದ ನಿಯಮಪಾಲನೆಗೆ ಒತ್ತು ಕೊಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿ, ಕೋರೊನಾ ಸೋಂಕು ಹೆಚ್ಚುತ್ತಿರುವುದರಿಂದ ಗಣೇಶೋತ್ಸವವನ್ನು ವಿಜ್ರಂಭಣೆಯಿAದ ಆಚರಿಸುವುದನ್ನು ನಿಬಂಧಿಸಲಾಗಿದೆ. ತಾವು ಎಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೀರಿ ಎಂಬುದರ ಬಗ್ಗೆ ಕೂಡಲೇ ಗಣೇಶ ಮಹಾಮಂಡಳದವರು ಪಟ್ಟಿಯನ್ನು ಪೊಲೀಸ್ ಠಾಣೆಗೆ ನೀಡಬೇಕು. ಮೂರ್ತಿ ಪ್ರತಿಷ್ಠಾಪಿಸುವ ಮತ್ತು ವಿಸರ್ಜಿಸುವ ದಿನಗಳಂದು ಮೆರವಣಿಗೆ ನಡೆಸಬಾರದು ಎಂದು ತಿಳಿಸಿದರು.
ಈ ಬಾರಿ ಡಿಜೆಗೆ ಮತ್ತು ರಸ್ತೆಯಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಪ್ರಸಾದ ಮತ್ತು ತೀರ್ಥ ಹಂಚಬಾರದು. ಒತ್ತಾಯಪೂರ್ವಕವಾಗಿ ಚಂದಾ ವಸೂಲಿ ಮಾಡುತ್ತಾರೆ ಎಂದು ಯಾರಾದರು ದೂರಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಎಂ.ಬ್ಯಾಕೋಡ್ ಅವರು ಮಾತನಾಡಿ, ಗಣೇಶ ಮಹಾಮಂಡಳದವರು ಸ್ವಯಂ ಸೇವಕರ ಪಟ್ಟಿಯನ್ನು ಮುಂಚಿತವಾಗಿಯೇ ನೀಡಬೇಕು. ಪೆಂಡಾಲಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತರಾದ ಬಸಪ್ಪ ಅವರು ಮಾತನಾಡಿ, ಹಬ್ಬ ಆಚರಣೆ ವೇಳೆ ಶುಚಿತ್ವಕ್ಕೆ ಹೆಚ್ಚಿನ ಒತ್ತು ಕೊಡಬೇಕು. ನಗರಸಭೆಯಿಂದ ಸಹಾಯ ಒದಗಿಸಲು ಅನುಕೂಲ ಕಲ್ಪಿಸಲಾಗುವುದು ಎಂದರು.
ಎಲ್ಲಾ ಗಣೇಶ ಮಂಡಲದವರು ತಮ್ಮ ಪೆಂಡಾಲಗಳಲ್ಲಿ ಉಸುಕಿನ ಚೀಲ, ಒಂದು ಡ್ರಮ್ಮು ನೀರು, ಅಗ್ನಿಶಮನ ಸಾಮಗ್ರಿಗಳನ್ನು ಇಟ್ಟುಕೊಳ್ಳಲು ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಸಲಹೆ ಮಾಡಿದರು.
ಹಬ್ಬದ ಆಚರಣೆ ವೇಳೆಯಲ್ಲಿ ಮದ್ಯಮಾರಾಟ ನಿಷೇಧಕ್ಕೆ ಕ್ರಮ ವಹಿಸಲಾಗುವುದು ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಈ ವೇಳೆ ಗಣೇಶ ಮಹಾಮಂಡಳದ ಪದಾಧಿಕಾರಿಗಳಾದ ಚಂದ್ರಶೇಖರ ಪಾಟೀಲ, ಬಾಬು ವಾಲಿ ಹಾಗೂ ಇತರರು ಇದ್ದರು. ಡಿವೈಎಸ್‌ಪಿ ಬಸವರಾಜ ಹೀರಾ, ಟ್ರಾಫಿಕ್ ಇನ್ಸಪೆಕ್ಟರ್ ಉಮೇಶ ಹಾಗೂ ವಿವಿಧ ಠಾಣೆಗಳ ಪಿಎಸ್‌ಐಗಳು ಮತ್ತು ಇತರರು ಇದ್ದರು.



No comments:
Post a Comment