ನೀವು ಬದಲಾದರೆ, ಸಮಾಜವೇ ಬದಲಾಗುವುದು-ಸಚಿವ ಸಂತೋಷ ಎಸ್.ಲಾಡ - EYLAAPH E MEDIA

EYLAAPH E MEDIA

EYLAAPH EMEDIA PVT LTD. IS DELIVERING COMMON NEWS TO THE WORLD THROUGH IT'S REPORTERS , NEWS WHICH CONTAINS REALITY. TRUTH WHICH OTHERS NEVER COVER, PLEASE SHARE OUR CHANNEL AND MAKE IT SUBSCRIBED IN YOUR MOBILE TO GET UPDATED ON EVERY NEWS FROM EYLAAPH NEWS.

Eylaaph Breaking update

Post Top Ad

Post Top Ad

Weather

Translate

Monday, November 17, 2025

ನೀವು ಬದಲಾದರೆ, ಸಮಾಜವೇ ಬದಲಾಗುವುದು-ಸಚಿವ ಸಂತೋಷ ಎಸ್.ಲಾಡ

ನೀವು ಬದಲಾದರೆ, ಸಮಾಜವೇ ಬದಲಾಗುವುದು-ಸಚಿವ ಸಂತೋಷ ಎಸ್.ಲಾಡ
ಬೀದರ, ನವೆಂಬರ್.17 (EYLAAPH NEWS) ದೇಶದ-ಸಮಾಜದ ಭದ್ರ ಭವಿತವ್ಯ ಇಂದಿನ ವಿದ್ಯಾರ್ಥಿಗಳ ಕೈಯಲ್ಲಿದೆ. ದೇಶದಲ್ಲಿ ಬದಲಾವಣೆ ತರಲು ನೀವು ಪ್ರತಿಯೊಬ್ಬರೂ ರಾಜಕೀಯಕ್ಕೆ ಬರಬೇಕಾದ ಅಗತ್ಯವಿಲ್ಲ. ನಿಮ್ಮ ಬದುಕಲ್ಲಿ ನೀವು ಶಿಸ್ತು, ಸಂಯಮ ಅಳವಡಿಸಿಕೊಂಡು ವ್ಯವಸ್ತಿತವಾಗಿ ಬದುಕುವುದನ್ನು ಕಲಿತರೆ ಸಾಕು. ನೀವು ಬದಲಾದರೆ ಸಮಾಜವೇ ಬದಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ ಎಸ್.ಲಾಡ್ ಹೇಳಿದರು.
ಅವರು ಸೋಮವಾರ ಬೀದರ್‌ನ ನೆಹರು ಕ್ರೀಡಾಂಗಣದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಬೀದರ್ ಜಿಲ್ಲೆಯ ಎಲ್ಲಾ ಸಂಯೋಜಿತ ಮಹಾ ವಿದ್ಯಾಲಯಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂಗಾAಗ ದಾನ ಪ್ರತಿಜ್ಞಾ ಅಭಿಯಾನ ಹಾಗೂ ನಶಾಮುಕ್ತ ಕ್ಯಾಂಪಸ್ ಅಭಿಯಾನದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 
ಆರೋಗ್ಯಪೂರ್ಣ, ಶಿಸ್ತುಬದ್ಧ ಜೀವನ ನಿಮ್ಮ ಆದ್ಯತೆಯಾಗಬೇಕು. ದುಶ್ಚಟಗಳಿಂದ ದೂರವಿರುವ ದೃಢ ಸಂಕಲ್ಪ ಮಾಡಬೇಕು. ನಿಮ್ಮ ಸ್ನೇಹಿತರಲ್ಲೂ ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.
ಯುವಜನರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಇದರಲ್ಲಿ ಡ್ರಗ್ಸ್ ಸೇರಿದಂತೆ ದುಶ್ಚಟಗಳ ಪಾಲೂ ಅಧಿಕವಾಗಿವೆ. ದುಶ್ಚಟಗಳು ನಿಮ್ಮ ಬದುಕು, ಕನಸು, ಗುರಿಗಳಿಗೆ ತಡೆಯೊಡ್ಡುವ ಜೊತೆಗೆ ಜೀವನದ ಉದ್ದೇಶವನ್ನೇ ಮರೆಸುತ್ತವೆ. ದುಶ್ಚಟಗಳಿಂದ ದೂರವಿರಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು. ನಿಮ್ಮ ಜೊತೆಗೆ ಇದ್ದವರನ್ನೂ ಅದರಿಂದ ಹೊರತಲು ಪ್ರಯತ್ನಿಸಬೇಕು ಎಂದರು.
ನೆಹರು ಕ್ರೀಡಾಂಗಣದಿAದ ಆರಂಭವಾದ ಜಾಥಾ ಗುದಗೆ ಆಸ್ಪತ್ರೆ, ಹರಳಯ್ಯ ವೃತ್ತ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಹಾದು ಬ್ರಿಮ್ಸ್ನಲ್ಲಿ ಮುಕ್ತಾಯಗೊಂಡಿತು. ಸಾವಿರಾರು ವಿದ್ಯಾರ್ಥಿಗಳು ಕೈಯಲ್ಲಿ ಭಿತ್ತಿಪತ್ರಗಳನ್ನು ಹಿಡಿದುಕೊಂಡು, ನಶೆ ಬೇಡ ನೆಮ್ಮದಿ ಬೇಕು’, ’ಡ್ರಗ್ಸ್ ಬೇಡ, ಜೀವನ ಬೇಕು", ಅಂಗಾAಗದಾನ ಮಹಾದಾನ" ಎನ್ನುವ ಘೋಷಣೆಗಳನ್ನು ಕೂಗುತ್ತ ಸಾಗಿದರು.
ಈ ಕಾರ್ಯಕ್ರಮದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಡಾ. ಗಿರೀಶ ಬದೋಲೆ, ಶಾ. ಶಿವಕುಮಾರ ಶೆಟಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.


No comments:

Post Top Ad