ಏಪ್ರಿಲ್.1 ರಿಂದ ಏಪ್ರಿಲ್.15 ರವರೆಗೆ ಸ್ವಯಂ* *ಗಣತಿಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅವಕಾಶ.....
ಬೀದರ, ಮಾರ್ಚ.31 (EYLAAPH NEWS):- 2027 ರ ಜನಗಣತಿ ಮೋದಲನೇ ಹಂತವಾಗಿ ಮನೆಗಳ ಪಟ್ಟಿ ಮತ್ತು ಮನೆ ಗಣತಿ (ಎಚ್ಎಲ್ಒ) ಕಾರ್ಯಾವನ್ನು ಎಪ್ರಿಲ್.1 ರಿಂದ 15 ರ ವರೆಗೆ 15 ದಿನಗಳ ಕಾಲ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಪ್ರಧಾನ ಜನಗಣತಿ ಅಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.
ಈ ಬಾರಿ ಜನಗಣತಿ ಎರಡು ಹಂತಗಳಲ್ಲಿ ನಡೆಯಲಿದೆ ಮೋದಲ ಹಂತದಲ್ಲಿ ಮನೆಗಳ ಪಟ್ಟಿ ಮತ್ತು ಮನೆ ಗಣತಿ ಕಾರ್ಯ ನಡೆಯಲಿದೆ ಈ ಹಂತದಲ್ಲಿ ನಾಗರಿಕರಿಗೆ ಸ್ವಯಂ ಗಣತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸ್ವಯಂ ಗಣತಿಗಾಗಿ ಕೇಂದ್ರ ಸರ್ಕಾರದ ವೆಬ್ಪೆÇೀಟರ್ಲ್ (https://se.census.gov.in) ಅನ್ನು ತೆರೆಯಲಾಗಿದ್ದು ಯಾವುದೇ ಒಂದು ಮನೆಯ ಸದಸ್ಯರು ಸುಮಾರು 15 ರಿಂದ 20 ನಿಮಿಷಗಳಲ್ಲಿ ತಮ್ಮ ಮನೆಯ ಸಂಪೂರ್ಣಾ ವಿವರಗಳನ್ನು ಭರ್ತಿ ಮಾಡಬಹುದು. ಗಣತಿ ಪೂರ್ಣಾಗೊಂಡ ನಂತರ ನಾಗರಿಕರಿಗೆ ಸಯಂ ಗಣತಿ ಐಡಿ ನೀಡಲಾಗುವುದು. ಈ ಐಡಿಯನ್ನು ಮೊಬೈಲ್ ಅಥವಾ ಇ-ಮೇಲ್ ಮೂಲಕ ಪಡೆಯಬಹುದಾಗಿದೆ. ಗಣತಿದಾರರು ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಈ ಐಡಿ ಹಂಚಿಕೊಳ್ಳಬೇಕು. ಇದರಿಂದ ಗಣತಿದಾರರು ಮಾಹಿತಿ ಪರಿಶೀಲನೆ ನಡೆಸಿ ಅಂತಿಮವಾಗಿ ದತ್ತಾಂಶ ಸಲ್ಲಿಕೆಯನ್ನು ಪೂರ್ಣಗೊಳಿಸಲಿದ್ದಾರೆ. ಕಾರಣ ಜಿಲ್ಲೆಯ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಜನಗಣತಿಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

No comments:
Post a Comment