ಗುಲಾಬಿ ಹೂ ಕೊಟ್ಟು ಸಂಚಾರ ನಿಯಮ ಜಾಗೃತಿ - EYLAAPH E MEDIA

EYLAAPH E MEDIA

EYLAAPH EMEDIA PVT LTD. IS DELIVERING COMMON NEWS TO THE WORLD THROUGH IT'S REPORTERS , NEWS WHICH CONTAINS REALITY. TRUTH WHICH OTHERS NEVER COVER, PLEASE SHARE OUR CHANNEL AND MAKE IT SUBSCRIBED IN YOUR MOBILE TO GET UPDATED ON EVERY NEWS FROM EYLAAPH NEWS.

Eylaaph Breaking update

Post Top Ad

Post Top Ad

Weather

Translate

Thursday, January 30, 2025

ಗುಲಾಬಿ ಹೂ ಕೊಟ್ಟು ಸಂಚಾರ ನಿಯಮ ಜಾಗೃತಿ

ಗುಲಾಬಿ ಹೂ ಕೊಟ್ಟು ಸಂಚಾರ ನಿಯಮ ಜಾಗೃತಿ

ಬೀದರ್:(EYLAAPH NEWS)ನೆಹರೂ ಯುವ ಕೇಂದ್ರ ಹಾಗೂ ರೈಸಿಂಗ್ ಹ್ಯಾಂಡ್ ಯುವ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ನಗರದಲ್ಲಿ ವಾಹನ ಚಾಲಕರಿಗೆ ಗುಲಾಬಿ ಹೂ ಹಾಗೂ ಕರಪತ್ರ ಕೊಟ್ಟು ಸಂಚಾರ ನಿಯಮಗಳ ಜಾಗೃತಿ ಮೂಡಿಸಲಾಯಿತು.
ನಗರದ ಪ್ರಮುಖ ವೃತ್ತಗಳಲ್ಲಿ ವಾಹನ ಚಾಲಕರು ಹಾಗೂ ಸಾರ್ವಜನಿಕರಿಗೆ ಸಂಚಾರ ನಿಯಮಗಳ ತಿಳಿವಳಿಕೆ ಕೊಡಲಾಯಿತು.
ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೇಟ್ ಧರಿಸಬೇಕು. ಕಾರುಗಳಲ್ಲಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಜೀವ ರಕ್ಷಣೆಗಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಲಾಯಿತು.
ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ, ರೈಸಿಂಗ್ ಹ್ಯಾಂಡ್ ಯುತ್ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸತೀಶ್ ಎಸ್. ಬೆಳಕೋಟೆ, ಸಂಚಾರ ಪೊಲೀಸರು, ಗೃಹ ರಕ್ಷಕರು ಇದ್ದರು.

No comments:

Post Top Ad