ಜನರ ಜೀವನ-ಜೀವನೋಪಾಯಕ್ಕೆ ಕಾಳಜಿ ವಹಿಸಿ: ಆರ್.ಅಶೋಕ
ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಇದುವರೆಗೆ ಆಗಿರುವ ಮಳೆ ಪ್ರಮಾಣ, ಬೆಳೆ ಹಾನಿ, ರಸಗೊಬ್ಬರ ವಿತರಣೆ ಮತ್ತು ಕೋವಿಡ್ ನಿರ್ವಹಣೆ ಕುರಿತು ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮಳೆಯಿಂದಾದ ಹಾನಿಗೆ ಸಮರ್ಪಕವಾಗಿ ಪರಿಹಾರ ಒದಗಿಸುವುದು ಟೀಂ ವರ್ಕ್ ರೀತಿ ಇರಬೇಕು ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದ ಸಚಿವರು, ಇದಕ್ಕಾಗಿ ತಾವು ಸಂಸದರು ಮತ್ತು ಎಲ್ಲ ಶಾಸಕರ ಸಲಹೆ ಪಡೆಯುತ್ತಿರುವುದಾಗಿ ಹೇಳಿದರು. ನೆರೆ ಎದುರಾಗಿರುವ ಈ ವೇಳೆಯಲ್ಲಿ ಅಧಿಕಾರಿಗಳು ಜನರ ಜೀವನ-ಜೀವನೋಪಾಯಕ್ಕೆ ಕಾಳಜಿ ವಹಿಸಬೇಕು. ವೇಗವಾಗಿ ಕೆಲಸ ಮಾಡಬೇಕು. ರೈತರ ಉಳಿತಾಯ ಖಾತೆಗಳನ್ನು ಸರಿಪಡಿಸುವ ಮತ್ತು ಕೊಟ್ಟಿ ಖಾತೆಗಳನ್ನು ನಿಷ್ಕಿçಯಗೊಳಿಸುವ ಕಾರ್ಯ ಏಕಕಾಲಕ್ಕೆ ನಡೆಯುವಂತಾಗಬೇಕು. ನೊಂದವರಿಗೆ ಸರಿಯಾದ ರೀತಿಯಲ್ಲಿ ಪರಿಹಾರ ಸಿಗುವ ಹಾಗೆ, ಸಮೀಕ್ಷೆ ಮತ್ತು ಪರಿಹಾರ ವಿತರಣೆ ಕಾರ್ಯ ಪಾರದರ್ಶಕವಾಗಿ ನಡೆಯಬೇಕು ಎಂದು ಸೂಚನೆ ನೀಡಿದರು.
ಕೋವಿಡ್-19 ನಿರ್ವಹಣೆಗೆ ಮೆಚ್ಚುಗೆ: ಬೀದರ ಜಿಲ್ಲೆಯಲ್ಲಿ ಕೋವಿಡ್-19 ನಿರ್ವಹಣೆಯಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿರುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಚಿವರು ಇದೆ ವೇಳೆ ಅಭಿನಂದನೆಗಳನ್ನು ತಿಳಿಸಿದರು.ಆದೇಶ ಪತ್ರಗಳ ವಿತರಣೆ: ಬೀದರ ಜಿಲ್ಲೆಯಲ್ಲಿನ ರೈತ ಆತ್ಮಹತ್ಯೆ ವಿದವಾ ಮಾಸಾಶನ ಫಲಾನುಭವಿಗಳಾದ ಚಿಟಗುಪ್ಪಾದ ರೇಣುಕಬಾಯಿ, ಸಿದ್ದಮ್ಮಾ ಮತ್ತು ಬಸವಕಲ್ಯಾಣದ ಶಾಂತಾಬಾಯಿ ಮತ್ತು ಭಾಲ್ಕಿ ತಾಲೂಕಿನ ಲಕ್ಷಿö್ಮಬಾಯಿ ಅವರಿಗೆ ಇದೆ ವೇಳೆ ಸಚಿವರು, ಮಂಜೂರಾತಿ ಆದೇಶ ಪತ್ರಗಳನ್ನು ಕೂಡ ವಿತರಿಸಿದರು.
ಮಾಸ್ಕ ಧರಿಸದಿದ್ದರೆ ದಂಡವಿದಿಸಿ: ಜಿಲ್ಲೆಯಲ್ಲಿ ಬಹುತೇಕ ಜನರು ಮಾಸ್ಕಗಳನ್ನು ಧರಿಸದೇ ಇರುವುದನ್ನು ತಾವು ಗಮನಿಸಿದ್ದು, ಮಾಸ್ಕ ಧರಿಸದೇ ಇರುವವರ ಮೇಲೆ ದಂಡವಿದಿಸಲು ಹಾಗೂ ನಿಯಮ ಉಲ್ಲಂಘಿಸುವ ಅಂಗಡಿಗಳನ್ನು ಯಾವುದೇ ಮುಲಾಜಿಲ್ಲದೇ ಮುಚ್ಚಿಸಲು ಕ್ರಮ ವಹಿಸಬೇಕು ಎಂದು ಇದೆ ವೇಳೆ ಸಚಿವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್. ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಂಸದರಾದ ಭಗವಂತ ಖೂಬಾ ಅವರು ಮಾತನಾಡಿ, ಜಿಲ್ಲೆಯಲ್ಲಿನ ರೈತರಿಗೆ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಡಿಯ ಲಾಭವು ಸಕಾಲಕ್ಕೆ ಲಭ್ಯವಾಗುವಂತೆ ನೋಡಿಕೊಳ್ಳಲು ಕ್ರಮ ವಹಿಸಬೇಕು ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಬೀದರ ಜಿಲ್ಲೆಯ ವಿಶೇಷ ಬೆಳೆಗಳಾದ ಉದ್ದು ಮತ್ತು ಹೆಸರು ಬೆಳೆ ಹಾನಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ಇದೆ ವೇಳೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಗೀತಾ ಪಂಡಿತರಾವ್ ಚಿದ್ರಿ ಅವರು ಸಲಹೆ ಮಾಡಿದರು.ಶಾಸಕರಾದ ರಾಜಶೇಖರ ಪಾಟೀಲ ಅವರು ಮಾತನಾಡಿ, ಹುಮಾನಾಬಾದ್ ತಾಲೂಕಿನಲ್ಲಿ ಆಗಸ್ಟ್ 12ರಿಂದ ಆಗಸ್ಟ್ 26ರವರೆಗೆ ಅಧಿಕ ಮಳೆಯಾಗಿ ಅಂದಾಜು 5542 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ ಎಂದು ತಿಳಿಸಿದರು.
ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಕಾರ್ಯವು ಶೀಘ್ರ ಆರಂಭವಾಗಲು ಮತ್ತು ಕಂದಾಯ ಗ್ರಾಮಗಳಿಗೆ ಸಿಗಬೇಕಾದ ಎಲ್ಲ ಸೌಕರ್ಯಗಳನ್ನು ಒದಗಿಸಿಕೊಡಲು ಸಹಕರಿಸಬೇಕು ಎಂದು ಶಾಸಕರಾದ ಬಿ.ನಾರಾಯಣರಾವ್ ಅವರು ಕೋರಿದರು.
ಬೀದರ ಉತ್ತರ ವಿಧಾನಸಭಾ ಮತಕ್ಷೇತ್ರದಲ್ಲಿ ಅವಶ್ಯವಿರುವ ಗ್ರಾಮಗಳಿಗೆ ಸ್ಮಶಾನ ಭೂಮಿ ಮಂಜೂರಿ ಕಾರ್ಯವು ಕಂದಾಯ ಇಲಾಖೆಯಿಂದ ಬೇಗನೆ ಆಗಬೇಕು ಎಂದು ಶಾಸಕರಾದ ರಹೀಂ ಖಾನ್ ಅವರು ಕೋರಿದರು.
ಈ ವೇಳೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಮಾತನಾಡಿ, ಜೂನ್ ಮಾಹೆಯಿಂದ ಇಲ್ಲಿವರೆಗೆ ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಮಳೆಯಾಗಿದೆ. ಬಿತ್ತನೆ ಕೂಡ ನಡೆದಿದೆ. ರಸಗೊಬ್ಬರ ಲಭ್ಯತೆ ಇದೆ. ಬೆಳೆಹಾನಿಯ ಸಮೀಕ್ಷೆ ಕಾರ್ಯವು ನಡೆಯುತ್ತಿದೆ. ರೈತ ಆತ್ಮಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರದ ಆದೇಶ ಪಾಲನೆ ಮಾಡಿ ಮೃತ ರೈತನ ಮಕ್ಕಳಿಗೆ ಶಿಕ್ಷಣ ಮತ್ತು ಕುಟುಂಬದವರಿಗೆ ಪಿಂಚಣಿ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ ರೇವೂರ, ಕಂದಾಯ ಇಲಾಖೆಯ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ಶ್ರೀ ಮನೋಜ್ ರಾಜನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ ಹಾಗೂ ಬಸವಕಲ್ಯಾಣ ಸಹಾಯಕ ಆಯುಕ್ತರು, ತಹಸೀಲ್ದಾರರು ಮತ್ತು ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.






No comments:
Post a Comment