EYLAAPH NEWS

Tuesday, November 18, 2025

ಸೌದಿ ಅಪಘಾತದಲ್ಲಿ ಬೀದರ ಮಹಿಳೆ ಸಾವು-ಸಚಿವ ರಹೀಂ ಖಾನ್ ಸಂತಾಪ: ಎಲ್ಲಾ ರೀತಿಯ ಸಹಾಯಕ್ಕೆ ಕ್ರಮ.

ಸೌದಿ ಅಪಘಾತದಲ್ಲಿ ಬೀದರ ಮಹಿಳೆ ಸಾವು-ಸಚಿವ ರಹೀಂ ಖಾನ್ ಸಂತಾಪ: ಎಲ್ಲಾ ರೀತಿಯ ಸಹಾಯಕ್ಕೆ ಕ್ರಮ.

ಬೀದರ, ನವೆಂಬರ್.18 (EYLAAPH NEWS):-
ಪೌರಾಡಳಿತ ಮತ್ತು ಹಜ್ ಸಚಿವರಾದ ಶ್ರೀ ರಹೀಮ್ ಖಾನ್ರವರು ಬೀದರ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸೌದಿ ಅರೇಬಿಯಾದ ಮದೀನಾ ಬಳಿ ಸಂಭವಿಸಿದ ಬಸ್‌-ಡೀಸೆಲ್‌ ಟ್ಯಾಂಕರ್‌ ಡಿಕ್ಕಿ ಹೊಡೆದ ಪರಿಣಾಮದಿಂದಾಗಿ ತೆಲಂಗಾಣದ 42 ಯಾತ್ರಾರ್ತಿಗಳು ಮೃತಪಟ್ಟಿದ್ದು, ಅದರಲ್ಲಿ ಕರ್ನಾಟಕದ ಬೀದರ್‌ ನಗರದ ಮೈಲೂರು ಪ್ರದೇಶದ 80 ವರ್ಷ ವಯಸ್ಸಿನ ಮಹಿಳೆಯಾದ ಶ್ರೀಮತಿ ರೆಹಮತ್ ಬೀ ಎಂಬುವರು ಸಹ ಮೃತರಾಗಿದ್ದು ಹಾಗೂ ಉಮ್ರಾ ಯಾತ್ರಿಕರ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಮತ್ತು ಪ್ರತಿ ದೂರವಾಣಿ ಕರೆಗೆ ಸಹಾಯ ನೀಡಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರವು ಮೃತಪಟ್ಟ ಕುಟುಂಬಗಳನ್ನು ಬೆಂಬಲಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಸಹ ತಿಳಿಸಿದರು. "ನಾವು ಸೌದಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದ್ದೇವೆ ಹಾಗೂ ಅವರ ಸಂಬಂಧಿಕರಿಗೆ ಸಹಾಯ ಮಾಡುವುದು ನಮ್ಮ ಆದ್ಯತೆಯಾಗಿದೆ" ಎಂದು ತಿಳಿಸಿದರು.

No comments:

Post a Comment