EYLAAPH NEWS

Monday, November 17, 2025

ಸ್ಥಳೀಯ ಸಂಸ್ಥೆಗಳ ಕ್ರಿಯಾ ಯೋಜನೆಯನ್ನು ನವೆಂಬರ್.30 ರೊಳಗಾಗಿ ಸಲ್ಲಿಸಿ-ಸಚಿವ ಈಶ್ವರ ಬಿ.ಖಂಡ್ರೆ

ಸ್ಥಳೀಯ ಸಂಸ್ಥೆಗಳ ಕ್ರಿಯಾ ಯೋಜನೆಯನ್ನು ನವೆಂಬರ್.30 ರೊಳಗಾಗಿ ಸಲ್ಲಿಸಿ-ಸಚಿವ ಈಶ್ವರ ಬಿ.ಖಂಡ್ರೆ.

ಬೀದರ, ನವೆಂಬರ್.17 (EYLAAPH NEWS):- ಅಭಿವೃದ್ಧಿ ಯೋಜನೆಗಳನ್ನು ಗ್ರಾಮ ಮಟ್ಟದಿಂದ ರೂಪಿಸಿ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತಗಳ ಹಂತದಲ್ಲಿ ಜಿಲ್ಲಾ ವಲಯ ಯೋಜನೆಗಳೊಂದಿಗೆ ಸಂಯೋಜಿಸಿ ಕ್ರೋಢೀಕರಿಸಿದ ಯೋಜನೆಗಳನ್ನು ಯೋಜನಾ ಇಲಾಖೆಗೆ ಸಲ್ಲಿಸುವ ನಿಟ್ಟಿನಲ್ಲಿ ಎಲ್ಲ ನೋಡಲ್ ಅಧಿಕಾರಿಗಳು ನವೆಂಬರ್.30 ರೊಳಗಾಗಿ ಗ್ರಾಮ ಸಭೆ ನಡೆಸಿ ಕ್ರೀಯಾ ಯೋಜನೆಯನ್ನು ಸಲ್ಲಿಸಬೇಕೆಂದು ಅರಣ್ಯ, ಜಿವಿಶಾಸ್ತç ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ತಿಳಿಸಿದರು.

 ಅವರು ಸೋಮವಾರ ಜಿಲ್ಲಾ ಪಂಚಾಯತ ಸಂಭಾಗಣದಲ್ಲಿAದು ಜರುಗಿದ ಜಿಲ್ಲಾ ಯೋಜನಾ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 ಸ್ಥಳೀಯ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳು ಸ್ಥಳೀಯ ಶಾಸಕರ ಸಲಹೆ ಪಡೆದು ಗ್ರಾಮ ಸಭೆಯಿಂದ ಸ್ವೀಕರಿಸಲಾದ ಯೋಜನೆಗಳ ಕ್ರೀಯಾ ಯೋಜನೆ ರೂಪಿಸಿ ಆದ್ಯತೆ ಮೇರೆಗೆ ನವೆಂಬರ್ ಒಳಗಾಗಿ ರಾಜ್ಯ ವಿಕೇಂದ್ರೀಕರಣ ಹಾಗೂ ಅಭಿವೃದ್ಧಿ ಸಮಿತಿಯ ಮೂಲಕ ಸರಕಾರಕ್ಕೆ ಸಲ್ಲಿಸಬೇಕೆಂದು ಅವರು ತಿಳಿಸಿದರು.

 ಈ ಕ್ರೋಢೀಕರಿಸಿದ ಯೋಜನೆಗಳನ್ನು ಬರುವ ರಾಜ್ಯ ಆಯವ್ಯಯದಲ್ಲಿ ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ಯೋಜನಾ ಇಲಾಖೆಗೆ ಸಲ್ಲಿಸಬೇಕಾಗಿದೆ. ಗ್ರಾಮಗಳಲ್ಲಿ ಗ್ರಾಮ ಸಭೆಯಂತೆ ನಗರಗಳಲ್ಲಿ ವಾರ್ಡ ಸಭೆ ಮಾಡತಕ್ಕದ್ದು, ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ, ಪರಿಸರ ಉದ್ಯೋಗ, ಕೈಗಾರಿಕೆ ಹಾಗೂ ಇತರೆ ವಲಯಗಳವಾರು ಜಿಲ್ಲೆಯಲ್ಲಿನ ಪ್ರಮುಖ ಅಂಶಗಳನ್ನು ಒಳಗೊಂಡAತೆ ಯೋಜನೆಗಳನ್ನು ರೂಪಿಸಲು ಅನುಕೂಲವಾಗಲಿದೆಯೆಂದರು.

 ಬೀದರ ಮಹಾನಗರ ಪಾಲಿಕೆಗೆ ಸೇರ್ಪಡೆಗೊಂಡಿರುವ 16 ಗ್ರಾಮಗಳಲ್ಲಿ ಅಧಿಕಾರಿಗಳು ಮೂಲಭುತ ಸೌಕರ್ಯ ವ್ಯವಸ್ಥೆ ಬೀದಿ ದೀಪ, ಸ್ವಚ್ಛತೆ, ಕಸಿ ನಿರ್ವಹಣೆ ಕಾರ್ಯಗಳನ್ನು ತಪ್ಪದೇ ಕೈಗೊಳ್ಳುವಮತೆ ಸಚಿವರು ಸೂಚಿಸಿದರು. 

 ಈ ಸಂದರ್ಭದಲ್ಲಿ ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್, ಬೀದರ ದಕ್ಷಿಣ ಶಾಸಕರಾದ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಬೀದರ ನಗರಸಭೆ ಅಧ್ಯಕ್ಷ ಮಹಮ್ಮದ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.




No comments:

Post a Comment