ಬೀದರ್,ಏಪ್ರಿಲ್.8:(Eylaaph News)ಬೀದರ್ ಸಂಸತ್ ಸದಸ್ಯ ಸಾಗರ್ ಖಂಡ್ರೆ ಅವರ ನಿರಂತರ ಪ್ರಯತ್ನ ಮತ್ತು ಮನವಿಯ ಫಲವಾಗಿ ಸ್ಥಗಿತಗೊಂಡಿದ್ದ ಯಶವಂತಪುರ–ಬೀದರ್–ಯಶವಂತಪುರ (16577/78) ರೈಲು ಸೇವೆ ಪುನಾರಂಭವಾಗಿದೆ.
ವಾರದಲ್ಲಿ ಎರಡು ದಿನಗಳ ಕಾಲ ಅಂದರೆ ಪ್ರತಿ ಶನಿವಾರ ಬೆಂಗಳೂರಿನ ಯಶವಂತಪುರದಿಂದ -ಬೀದರ್ ಗ ಪ್ರಯಾಣಿಸುವ ಈ ರೈಲು, ಮಾರನೇ ದಿನ ಭಾನುವಾರ ಬೀದರನಿಂದ- ಬೆಂಗಳೂರಿಗೆ ಸಂಚರಿಸಲಿದೆ.
ಸ್ಥಗಿತಗೊಂಡಿದ್ದ ಈ ರೈಲು ಸೇವೆಯನ್ನು ಪುನಾರಂಭ ಮಾಡುವಂತೆ ಬೀದರ್ ಸಂಸತ್ ಸದಸ್ಯ ಸಾಗರ ಖಂಡ್ರೆ ಅವರು ಕೇಂದ್ರ ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು. ಸಂಸತ್ ಅಧಿವೇಶನದ ಸಂದರ್ಭದಲ್ಲಿ ಸಚಿವರನ್ನು ಭೇಟಿ ಮಾಡಿ ಮರು ಮನವಿ ಮಾಡಿದ್ದರು. ಪ್ರಸ್ತುತ ರೈಲು ಸಂಚಾರ ಪುನಾರಂಭವಾಗಿದ್ದು, ಜಿಲ್ಲೆಯ ಜನತೆಗೆ ಅನುಕೂಲವಾಗಿದೆ.

No comments:
Post a Comment